ಕೊರಟಗೆರೆ:-
ಸ್ಕೂಲ್ ವಾಹನ ಹಾಗೂ ಹಾಲಿನ ಲಾರಿಯ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಶಾಲಾ ವಾಹನದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ವಿದ್ಯಾಥಿಗಳಿಗೆ ಯಾವುದೆತೊಂದರೆಯಾಗದೇ ಸಿನಿಮೀಯ ರೀತಿಯಲ್ಲಿದೊಡ್ಡಅವಘಡತಪ್ಪಿದಂತಹಘಟನೆಗುರುವಾರ ಬೆಳ್ಳಂಬೆಳಗ್ಗೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ.
ಕೊರಟಗೆರೆ-ತುಮಕೂರು ಮಾರ್ಗದಲ್ಲಿ ಬರುವ ಬೆಳಧರ ಗ್ರಾಮದ ಬಳಿ ಈ ಘಟನೆಜರುಗಿದ್ದು, ತುಮಕೂರುಕಡೆಯಿಂದ ಬಂದ ಹಾಲಿನ ವಾಹನ ಮತ್ತುಕೊರಟಗೆರೆಕಡೆಯಿಂದ ವಿದ್ಯಾರ್ಥಿಗಳನ್ನು ಕರೆತರಲು ಬೆಳಧರ ಹೋಗುವ ವೇಳೆ ಅಡ್ಡದಿಡ್ಡಿಯಾಗಿಕಾರು ಚಲಾಯಿಸಿಕೊಂಡು ಬಂದ ವೇಳೆ ಅಪಘಾತ ವಾಗಿದೆಎನ್ನಲಾಗಿದೆ..
ತಾಲೂಕಿನ ವಡ್ಡಗೆರೆಬಳಿಯ ಯಾದಗೆರೆಗ್ರಾಮದ ಸಮೀಪ ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‍ನ ಶಾಲಾ ವಾಹನದ ಚಾಲಕನಿಗೆ ತೀವ್ರವಾಗಿತಲೆಗೆ ಪೆಟ್ಟಾಗಿಕೊರಟಗೆರೆ ಸಾರ್ವಜನಿಕಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತೀದ್ದಾರೆ. ಶಾಲಾ ವಾಹನದಲ್ಲಿದ್ದಓರ್ವ ವಿದ್ಯಾರ್ಥಿಗೆಯಾವುದೇರೀತಿಯಗಾಯಆಗದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಘಟನಾಸ್ಥಳಕ್ಕೆ ಕೊರಟಗೆರೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತ ಮಾಡಿದ ಹಾಲಿನ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊರಟಗೆರೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ