ನಾಳೆಯಿಂದ ಮತ್ತೆ ಶಾಲೆಗಳು ಪ್ರರಂಭ..!!

ಹಾನಗಲ್ಲ :

  ಕಳೆದ ಒಂದುವರೇ ತಿಂಗಳಿನಿಂದ ರಜೆಯಲ್ಲಿದ್ದ ಮಕ್ಕಳು ನಾಳೆಯಿಂದ ಬೇಸಿಗೆಯಲ್ಲಿ ಮಜಾ ಮಾಡಿ ರಜೆ ಮುಗಿಸಿ (ಮೇ29) ರಂದು ಚಿಣ್ಣರು ಶಾಲೆಗೆ ಹೊರಡಲಿದ್ದಾರೆ.

   ಬುಧವಾರದಿಂದಲೇ ತಾಲೂಕಿನಲ್ಲಿ ಸರಕಾರಿ ಶಾಲೆಗಳು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸುತ್ತಿದ್ದು, ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಹಬ್ಬದಂತೆ ಶಾಲಾ ಪ್ರಾರಂಭೊತ್ಸವವನ್ನು ಮಾಡಲು ಸಕಲ ಸಿದ್ದತೆಗಳಿಗೆ ಮುಂದಾಗಿದೆ. ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ವಾರ್ಷಿಕ ಬೇಸಿಗೆ ರಜೆ ಮುಗಿಸಿ ಇಂದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯ ಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ದರಾಗಿದ್ದಾರೆ. ಆದರೇ ದಾಖಲಾತಿ ಆಂದೋಲನ ಮೇ ತಿಂಗಳಿಂದ ಒಂದು ತಿಂಗಳ ನಡೆದಲಿದ್ದು, ಅಂತಿಮ ಮಕ್ಕಳ ಪಟ್ಟಿ ಸಿದ್ದಗೊಂಡಿಲ್ಲ.

  ಶಾಲೆಗಳಿಗೆ ಮಕ್ಕಳನ್ನು ಸೇರಿಸಿ : ಈಗಾಗಲೆ ಸರಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ರಜೆಯಲ್ಲಿ ತರಬೇತಿ ನೀಡಲಾಗಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಡಿಡಿಪಿಐ ಮನವಿ ಮಾಡಿದ್ದಾರೆ. ಮೇ29 ರಂದು ಪ್ರಾರಂಭೋತ್ಸವಕ್ಕೆಂದು ಶಾಲಾ ಆವರಣ ಕೊಠಡಿಗಳನ್ನು ಸ್ವಚ್ಚಗೊಳಿಸವುದು, ಪೇಂಟಿಂಗ್ ಮಾಡುವುದು, ಕುಡಿಯುವ ನೀರು ಒದಗಿಸುವುದು, ಶೌಚಾಲಯ ಸುಸ್ಥಿತಿಯಲ್ಲಿ ಇಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಹಸಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸುವ ಕಾರ್ಯವನ್ನು ಮಾಡುವಂತೆ ಆಯಾ ಶಾಲಾ ಮುಖ್ಯೋಪಾದ್ಯಾಯರಿಗೆ, ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ಸೂಚಿಸಿದ್ದಾರೆ.

    ಒಟ್ಟು 342 ಶಾಲೆಗಳ ಪ್ರಾರಂಭೋೀತ್ಸವ : ತಾಲೂಕಿನಲ್ಲಿ ಒಟ್ಟು 223 ಸರಕಾರಿ ಪ್ರಾಥಮಿಕ 29 ಪ್ರೌಡ ಶಾಲೆ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 342 ಶಾಲೆಗಳ ಪೈಕಿ ತಾಲೂಕಿನಲ್ಲಿ ಒಟ್ಟು 42,849 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಅದರಲ್ಲಿ ಪ್ರಸಕ್ತ ಸಾಲಿನಲ್ಲಿ ನಾಲ್ಕು ಆಂಗ್ಲ ಮಾದ್ಯಮ ಶಾಲೆ ಪ್ರಾರಂಭಗೊಳ್ಳಲಿದೆ. ಮಕ್ಕಳಿಗೆ ಯತ್ತಿನ ಬಂಡಿಯ ಮೂಲಕ ಶಾಲೆಗಳಿಗೆ ಕರೆತಂದು ಅವರಿಗೆ ಹೂ ಗುಚ್ಚ ನೀಡಿ ಆರತಿ ಎತ್ತುವ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ವಿನೂತನ ಮಾದರಿಯನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

    ಒಟ್ಟಿನಲ್ಲಿ ಮೇ 29 ರಂದು ಎಲ್ಲ ಸರ್ಕಾರಿ ಶಾಲೆಗಳು ಮದುವೆ ಮನೆಯಂತೆ ಸಿಂಗಾರಗೊಳ್ಳಲಿದ್ದು, ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿಯಲ್ಲಿ ಹಬ್ಬದಂತೆ ಆಚರಿಸಿ ಅವರಲ್ಲಿ ಅಹ್ಲಾದಕರ ವಾತಾವರಣ ಸೃಷ್ಠಿಸುವುದೇ ಶಿಕ್ಷಣ ಇಲಾಖೆಯ ಉದ್ದೇಶವಾಗುವ ಜೊತೆಗೆ ಮಕ್ಕಳನ್ನು ಸರಕಾರಿ ಶಾಲೆಗೆ ಸೆಳೆಯುವಂತ ಹತ್ತು ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ತಾಲೂಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link