ತಿಪಟೂರು :
ತಾಲ್ಲೂಕಿನ ಶ್ರೀ ಮುನಿಯಪ್ಪಸ್ವಾಮಿ ಆಲದಮರ ಸುಕ್ಷೇತ್ರ, ಬಾಗುವಾಳ ಇಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ತುಮಕೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ನಿಪುಣ್ ಪದಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿ ನಂದಕುಮಾರ್ರವರು ರಾಷ್ಟ್ರೀಯ ಭಾವೈಕ್ಯತೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಲು ಸ್ಕೌಟ್ & ಗೈಡ್ ಸಹಕಾರಿ ಎಂದು ತಿಳಿಸಿದರು.
ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ತಿಪಟೂರು ಅಧ್ಯಕ್ಷರಾದ ನಂದಕುಮಾರ್ ಮಾತನಾಡುತ್ತಾ ಜೀವನದಲ್ಲಿ ಶಿಸ್ತು ಬಹಳ ಮುಖ್ಯ, ಶಿಸ್ತು ಮತ್ತು ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿಸಬಹುದು.
ನೀವಿಗ ನಿಪುಣ್ ಪದಕ ತರಬೇತಿಗೆ ಬಂದ್ದೀರಿ ಇದು ಕೇವಲ ನಿಮ್ಮ ಪ್ರಾರಂಭಿಕ ಹಂತ, ನೀವಿನ್ನು ಜಾಂಬುರಿ ಮತ್ತು ರಾಷ್ಟ್ರಮತ್ತು ಅಂತರಾಷ್ಟ್ರೀಯ ಮಟ್ಟದ ಜಾಂಬುರಿಗಳಲ್ಲಿ ಭಾಗವಹಿಸುವಂತಾಗಬೇಕು. ನೀವೆ ಸ್ವತಃ ಚಿಕ್ಕಚಿಕ್ಕ ಗುಂಪುಗಳನ್ನಾಗಿ ಮಾಡಿಕೊಂಡು ಚಿಕ್ಕ ಚಿಕ್ಕ ಬೆಟ್ಟಗಳು, ಗುಡ್ಡಗಳಲ್ಲಿ ಟ್ರಕ್ಕಿಂಗ್ ನಂತಹ ಸಾಹಸವನ್ನು ಮಾಡಿ ಆದರೆ ನೀರಿನ ಹತ್ತಿರಕ್ಕೆ ಹೋಗದಿರಿ. ನೀವು ಮಾಡುವ ಕಾರ್ಯಗಳು ಇತರರಿಗೆ ಮಾದರಿಯಾಗಬೇಕು.
ನಿಮ್ಮ ತಂಡದಿಂದಲೇ ನಿಮ್ಮ ಅಕ್ಕಪಕ್ಕದ ಸ್ಥಳಗಳನ್ನು ಸ್ವಚ್ಚಗೊಳಿಸಿ ಇದುನ್ನು ಕಂಡು ಪ್ರೇರಿತವಾಗುವಂತೆಮಾಡಿ ಇದರಿಂದ ದೇಶವೇ ಸ್ವಚ್ಚವಾಗುತ್ತದೆ. ಇಂತಹ ಕಾರ್ಯಕ್ರಮಗಳು ಪರಿಸರದ ಮದ್ಯೆ ನಡೆಯುವುದರಿಂದ ನೀವು ಬಲೇಯಲು ಸಹಕಾರಿ ಆದ್ದರಿಂದ ನೀವು ಸಹ ಪ್ರಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿಯು ನಿಮ್ಮ ಮೇಲಿದೆ ಆದ್ದರಿಂದ ನೀವು ಪ್ರಕೃತಿಯನ್ನು ಉಳಿಸಲು ಪ್ರಯತ್ನಿಸಿ ಎಂದು ಕರೆ ರೇಂಜರ್ ಮತ್ತು ರೋವರ್ಸ್ಗಳಗೆ ಕರೆ ನೀಡಿದರು.
ದಿನಾಂಕ: 27-09-2018 ರಿಂದ ಆರಂಭವಾಗಿ ದಿನಾಂಕ: 30-09-2018ರಂದು ಮುಕ್ತಾಯವಾಗುತ್ತಿರುವ ಈ ನಿಪುಣ್ ಪದಕ ತರಬೇತಿ ಶಿಬಿರವನ್ನು ಶಾಸಕರಾದ ಬಿ.ಸಿ.ನಾಗೇಶ್ರವರು ಉದ್ಘಾಟಿಸಿ ಶಿಬಿರವು ಯಶಸ್ವಿಯಾಗಲೆಂದು ಹಾರೈಸಿದರು. ಈ ಶಿಬಿರದಲ್ಲಿ 160 ಜನ ರೇಂಜರ್ ಮತ್ತು 104 ಜನ ರೋವರ್ಗಳು ಜಿಲ್ಲಾ ವಿವಿಧ ಕಾಲೇಜುಗಳಿಂದ ಆಗಮಿಸಿದ್ದರು. ಅವರೆಲ್ಲರಿಗೂ ತರಬೇತಿಯಲ್ಲಿ ಮ್ಯಾಪಿಂಗ್, ಪ್ರಥಮಚಿಕಿತ್ಸಾ ಮತ್ತು ಇನ್ನು ಮುಂತಾದ ತರಬೇತಿಗಳನ್ನು ನೀಡಿ ಅವರೆಲ್ಲರಿಗೂ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಉತ್ತೀರ್ಣರಾದವರಿಗೆ ನಿಪುಣ್ ತರಬೇತಿಯನಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇದೇ ಸಂದರ್ಬದಲ್ಲಿ 1918ರ ಸೆಪ್ಟಂಬರ್ 29ರಂದು ರೋವರ್ಸ್ ವಿಭಾಗವು ಆರಂಭವಾಗಿದ್ದು ಈಗ ಇದರ ಶತಮಾನೋತ್ಸವನ್ನು ಆಚರಿಸಲಾಯಿತು ಲೀಡರ್ ಟ್ರೈನರ್ ಆದ ಡಾ. ಶುಭ ಶಿಭಿರದ ವರದಿಯಲ್ಲಿ ತಿಳಿಸಿದರು.
ವಿದ್ಯಾರ್ಥಿನಿಯಾದ ನಂದಿನಿ ನಾವಿಲ್ಲಿ ಕಲಿತಿರುವುದು ಇಷ್ಟು ಆದರೆ ನಾವು ಕಲಿಯಬೇಕಾಗಿದ್ದು ಇನ್ನು ಬಹಳಷ್ಟಿದೆ, ಆದ್ದರಿಂದ ನಾವು ಕಲಿತಿದ್ದೇವೆಂದು ಬೀಗದೇ ಕಲಿಯುವ ಮನಸ್ಸನ್ನು ಅಳವಡಿಸಿಕೊಳ್ಳ ಬೇಕಾಗುತ್ತದೆ. ನಮಗೆ ಕಷ್ಟಗಳು ಬಂದಾಗ ನಾವು ಕುಗ್ಗದೆ ಮತ್ತು ದೇವರನ್ನು ನಮಗೆ ಯಾಕಪ್ಪಾ ಇಂತ ಕಷ್ಟವನ್ನು ಕೊಟ್ಟೆ ಎಂದು ಕೇಳದೆ ನಾನು ಈ ಕ್ಷವನ್ನು ಪರಿಹರಿಸಿಕೊಳ್ಳಬಲ್ಲೆ ಆದ್ದರಿಂದಲೇ ಭಗವಂತನು ನನಗೆ ಈ ಕಷ್ಟಕೊಟ್ಟಿದಾನೆಂದುಕೊಂಡರೆ ನಾವು ಇನ್ನಷ್ಟು ಎತ್ತರಕ್ಕೆ ಬೆಳದು ಕಷ್ಟದ ಪರಿಸ್ಥಿಯನ್ನು ಬಗೆಹರಿಸಿಕೊಳ್ಳಬಹುದು ಎಂದು ತನ್ನ ಅನಿಸಿಕೆಯನ್ನು ತೋಡಿಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ಪ್ರೊ. ಹೆಚ್.ಬಿ.ಕುಮಾರಸ್ವಾಮಿಯವರು ಮಾತನಾಡುತ್ತಾ ಪೋಷಕರು, ಹಿರಿಯರು ಶಿಕ್ಷಕರು ಬೈಯುವುದು ನಮ್ಮನ್ನು ತಿದ್ದಲು ಹೊರತು ನಿಮ್ಮನ್ನು ಹೀಯಗಳೆಯಲಲ್ಲ ನೀವು ಅವರ ಬೈಗುಳವನ್ನು ಆರ್ಶಿರ್ವಾದಾವಾಗಿ ತೆಗೆದುಕೊಂಡು ನಮ್ಮಲ್ಲಿ ಒಂದು ನಿರ್ಧಿಷ್ಟವಾದ ಗುರಿಯನಿಟ್ಟುಕೊಂಡು ಆ ಗುರಿಯನ್ನು ಸರ್ಕಾರಗೊಳಿಸಿಕೊಳ್ಳಲು ಶ್ತ್ರದ್ದೆ ಮತ್ತು ಶೀಸ್ತಿನಿಂದ ಪ್ರಯತ್ನಿಸಿದರೆ ನೀವು ಜೀವನದಲ್ಲಿ ಯಶಸ್ಸ್ಸುಗಳಿಸಲು ಸಾಧ್ಯವಾಗುತ್ತದೆ ಅಂತಹ ಶಿಸ್ತನ್ನು ಈ ಸ್ಕೌಟ್ ಮತ್ತು ಗೈಡ್ಸ್ನಿಂದ ನೀವುಪಡೆದುಕೊಳ್ಳಬಹದು ಆದ್ದರಿಂದ ನೀವು ಇಂತಹ ತರಬೇತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಶಿಭಿರದ ಸಂಚಾಲಕರಾದ ಡಾ. ನಾಗೇಂದ್ರಪ್ಪ.ಇ ರೋವರ್ಸ್ ಲೀಡರ್, ಸ.ಪ್ರ.ದಾ.ಕ ತಿಪಟೂರು, ಡಾ ಮಮತ ರೇಂಜರ್ ಲೀಡರ್ ಸ.ಪ್ರ.ದಾ.ಕ ತಿಪಟೂರು, ಸಹಶಿಭಿರಾಧೀಕಾರಿಗಳಾದ ಡಾ. ರೇಣುಕಪ್ರಸಾದ್, ರೋವರ್ಸ್ ಲೀಡರ್, ಸ.ಪ್ರ.ದಾ.ಕ ತಿಪಟೂರು, ಶ್ರೀಧರಣೇಶ್.ಸಿ.ಕೆ ರೋವರ್ಸ್ ಲೀಡರ್, ಸ.ಪ್ರ.ದಾ.ಕ ತಿಪಟೂರು, ಶಿಬಿರದ ನಾಯಕರಾಗಿ ರಾಜೇಶ್.ಎ.ವಿ, ಡಾ.ಶುಭ,. ಡಾ ದೀಪಾ ಮತ್ತು ಶಿಬಿರದ ಸಹಾಯಕರಾಗಿ, ಬಿ.ಎಂ.ಬಿ ಶಾಸ್ತ್ರಿ, ಡಾ. ಚೈತಾಲಿ.ಕೆ.ಎಸ್, ಪ್ರೊ. ವರ್ಣ, ಶ್ರೀಮತಿ ಅಕ್ಕಮ್ಮ, ಶ್ರೀಮತಿ ರಾಧ ಹೆಚ್.ಹೆಚ್ ಮೂತಾದವರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
