ಅಯೋಧ್ಯೆಯಲ್ಲಿ ಭಾವೈಕ್ಯತೆ ನಿರ್ಲಕ್ಷಿಸಲಾಗಿದೆ : ಪ್ರಕಾಶ್ ರೈ

0
15

ಬೆಂಗಳೂರು

     ಅಯೋಧ್ಯೆಯಲ್ಲಿ ಹಿಂದೂ ಮುಸಲ್ಮಾನರ ಭಾವೈಕ್ಯತೆ`ಯನ್ನು ಮತ್ತು ನಿರ್ಲಕ್ಷಿಸಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ವಿಷಾಧಿಸಿದರು.

        ನಗರದಲ್ಲಿ ಶುಕ್ರವಾರ ಸಾಮಾಜಿಕ ಕಾರ್ಯಕರ್ತ, ಛಾಯಾಗ್ರಾಹಕ ಸುಧೀರ್‍ಶೆಟ್ಟಿ ಅವರು ಸೆರೆ ಹಿಡಿದಿರುವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ರೈ ಹಿಂದೂ ಮುಸಲ್ಮಾನರ ಭಾವೈಕ್ಯತೆ`ಯ ಕೇಂದ್ರವನ್ನಾಗಿ ಆಯೋಧ್ಯೆಯನ್ನು ಮಾಡಬೇಕಿದೆ ಎಂದರು.

          ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಪ್ರಕಾಶ್ ರೈ ರವರು `ಅಯೋಧ್ಯೆಯ ಹಿಂದೂ ಮುಸಲ್ಮಾನರ ಭಾವೈಕ್ಯತೆ`ಯನ್ನು ಮತ್ತು ನಿರ್ಲಕ್ಷ್ಯಕ್ಕೊಳಗಾಗಿರುವ ದುಃಸ್ಥಿತಿಯ ಬಗ್ಗೆ ಸುಧೀರ್ ಅವರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ ಎಂದರು.

        1992ರ ನಂತರ ಎರಡು ಧರ್ಮಗಳ ಮಧ್ಯೆ ಉಂಟಾದ ಕಂದಕದಿಂದ ಬಲಿ ಆದವರೆಷ್ಟೋ ಅಯೋಧ್ಯೆ ನಗರದ ಹಿಂದೂ ಮುಸ್ಲಿಂರು ಇಂದಿಗೂ ಅಣ್ಣ ತಮ್ಮಂದಿರಂತೆ ಜೀವನ ಮಾಡುತ್ತಿದ್ದು, ಆದರೆ ಅಯೋಧ್ಯೆ ಹೆಸರಿನಲ್ಲಿ ದೇಶವೇ ಬಡಿದಾಡಿಕೊಳ್ಳುತ್ತಿವೆ ಎಂದು ಸುಧೀರ್ ಶೆಟ್ಟಿ ಹೇಳಿದರು.

        ಗಣಿಗಾರಿಕೆಗೆ ಬಲಿಯಾಯಿತೇ ಕಪ್ಪತ್ತೆಗುಡ್ಡೆ, ಮರಗಳ ಮಾರಣ ಹೋಮದ ಮೇಲೆ ಎತ್ತಿನ ಹೊಳೆ ಯೋಜನೆ, ಬಂಡೀಪುರದ ರಾತ್ರಿ ಸಂಚಾರದ ಸಂಚಕಾರ, ರಾಜ್ಯದ ಬೆಟ್ಟಗಳು ಹಾಗೂ ಹುಲಿಕಾರಿಡಾರ್‍ಗಳು, ಅರಣ್ಯ ಅಗ್ನಿ, ಅನಾಹುತಗಳ ಬಗ್ಗೆ ವಂಡರ್ ಕಣ್ಣೋಟದ ನೈಜ ಛಾಯಾಚಿತ್ರ ಸೇರಿದಂತೆ ಬೆಂಗಳೂರಿನ ವರ್ತೂರು ಕೆರೆ, ಎಲೆ ಮಲ್ಲಪ್ಪನ ಕೆರೆಯ ನೀರಿನಿಂದ ತಮಿಳುನಾಡಿನಲ್ಲಿ ಕಲರವ ಹೀಗೆ ಹಲವಾರು ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here