ಯಶಸ್ಸಿನ ಮೂಲ ಸೂತ್ರ ಆತ್ಮವಿಶ್ವಾಸ ಎನ್ನುವುದು ಸತ್ಯ – ಎ.ಅಬ್ದುಲ್ ನಬಿ

ಸಿರುಗುಪ್ಪ 

     ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು.ಯಶಸ್ಸಿನ ಮೂಲ ಸೂತ್ರ ಆತ್ಮವಿಶ್ವಾಸ ಎನ್ನುವುದು ಸತ್ಯ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಸಾಮಾಜಿಕ ಸುಧಾರಕರಾದ ಎ.ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.

     ನಗರದ ತಾಲೂಕು ಪಂಚಾಯತ್ ಸಭಾಭವನ್ ಅಕ್ಷರ ವಿಜಯ ಚೇಂಬರ್ನಲ್ಲಿ ಮಂಗಳವಾರ ಭಾರತ ದೇಶದ 11ನೇ ರಾಷ್ಟ್ರಪತಿ ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಅವರ 88ನೇ ಜನ್ಮದಿನ, ಹಾಗೂ ಹಿಂದು?-ಮುಸ್ಲಿಮರ ಧಾರ್ಮಿಕ ಗುರುಗಳಾದ ಖ್ಯಾತಿ ಪವಾಡ ಪುರುಷರಾದ ಶಿರಡಿ ಸಾಯಿಬಾಬಾ ಅವರ 101ನೇ ಪುಣ್ಯ ಸ್ಮರಣೆ, ಸ್ವಾತಂತ್ರ್ಯ ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಪಾಕಿಸ್ತಾನ ನಿರ್ಮಾಣದಲ್ಲಿ ಮುಂಚೂಣಿ ನಾಯಕತ್ವ ಹುಟ್ಟಿದ್ದು ವಿದ್ಯಾಭ್ಯಾಸವೆಲ್ಲ ಭಾರತದಲ್ಲೇ ಮಾಡಿದ ಲ್ಯಾಕ್ ಅಲಿ ಖಾನ್ ಅವರ 68ನೇ ಪುಣ್ಯತಿಥಿ ಬಾಲಿವುಡ್ಡಿನ ಖ್ಯಾತ ನಟಿ ಸುಮಾರು 150ಕ್ಕುಹೆಚ್ಚು ಚಿತ್ರಗಳಲ್ಲಿ ನಡೆಸಿದ ಫಿಲ್ಮ್‍ಫೇರ್,ಪದ್ಮಶ್ರೀ ಪುರಸ್ಕೃತೆ,ಮಥುರಾ ಲೋಕಸಭಾ ಸದಸ್ಯೆ ಹೇಮಾಮಾಲಿನಿ ಅವರ 71ನೇ ಜನ್ಮದಿನ ಅವರನ್ನು ನೆನಪಿಸಿ ಗೌರವದೊಂದಿಗೆ ಸ್ಮರಿಸಿ ಮಾತನಾಡಿ ರಾಷ್ಟ್ರಪತಿ ಕಲಾಂ ಅವರ ಬಾಲ್ಯದ ದಿನಗಳಲ್ಲಿ ಪತ್ರಿಕೆಗಳು ವಿತರಿಸುವುದು ಹಾಕುತ್ತಿದ್ದ ಅವರ ಕೊಡುಗೆ ದೇಶಕ್ಕೆ ಅನನ್ಯ ಎಂದರು.

        ಲೋಕ ಶಿಕ್ಷಣ ಕ್ಷೇತ್ರ ಸಂಯೋಜಕರಾದ ಜೆ. ನಾಗೇಂದ್ರ ಗೌಡ ಅವರು ಮಾತನಾಡಿ ಅಬ್ದುಲ್ ಕಲಾಂ ಅವರು ವಿಜ್ಞಾನಿ, ತತ್ತ್ವ ಜ್ಞಾನಿ, ಶಿಕ್ಷಣ ತಜ್ಞರು,ಕ್ಷಿಪಣಿ ರೂವಾರಿ,ಭಾರತ ಕಂಡ ಮೇರು ವ್ಯಕ್ತಿ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ ಎಂದರು.
ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕರಾದ ಡಾ ಪದ್ಮನಾಭ ರಾವ್ ಮಾತನಾಡಿ ಸಾಯಿಬಾಬಾ ಹಿಂದೂ- ಮುಸ್ಲಿಮರ ಧರ್ಮಗುರು ಪವಾಡ ಪುರುಷರಾಗಿದ್ದರು ಭೇದಭಾವವಿಲ್ಲದೆ ದೇಶದ ಜನ ಅವರ ದರ್ಶನ ಪಡೆಯುತ್ತಿದ್ದಾರೆ.

        ಪ್ರತಿಯೊಬ್ಬರು ಈ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಪಾಲಿಸಬೆಕೆಂದರು.ತಾಲ್ಲೂಕು ಪಂಚಾಯತ್ ಎಚ್ ಸುಧಾಕರ್, ಶೌಚಾಲಯ ಸ್ವಚ್ಛ ಭಾರತ ತಾಲೂಕು ಸಂಯೋಜಕ ಪಿ.ರಂಜಾನ್ ಸಾಬ್, ಸಾಕ್ಷರತಾ ಕಾರ್ಯಕರ್ತರು ಸಮಾಜ ಸೇವಕರಾದ ಎ ಮೊಹಮ್ಮದ್ ಇಬ್ರಾಹಿಂ,ಎ. ಮೊಹಮ್ಮದ್ ರಫಿ,ಎ.ಮೊಹಮ್ಮದ್ ನೌಷಾದ್ ಅಲಿ, ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link