ಸ್ವ ಉದ್ಯೊಗ ತರಬೇತಿ ಶಿಬಿರ

ಹಾನಗಲ್ಲ :

      ಮಹಿಳೆಯರು ಮನೆಗೆಲಸದ ನಂತರ ಉಳಿದ ಸಮಯವನ್ನು ವ್ಯರ್ಥ ಮಾಡದೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾಲೂಕು ಪಂಚಾಯತಿಯ ರಾಜೀವಗಾಂಧಿ ಚೈತನ್ಯ ಯೋಜನೆಯ ಸಂಯೋಜಕಿ ರಾಧಾ ಹುಳ್ಳೇರ ಕರೆ ನೀಡಿದರು.

     ಹಾನಗಲ್ಲಿನಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ ಸ್ವ-ಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೊಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮನೆಯಲ್ಲೆ ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸಬಲರಾದರೆ ಮನೆ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಸರಕಾರ ಮಹಿಳೆಯರಿಗಾಗಿ ಅನೇಕ ಸ್ವ ಉದ್ಯೋಗ ತರಬೇತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಆದರೆ ಮಹಿಳೆಯರು ಅನಾಸಕ್ತಿ ತೋರುತ್ತಿದ್ದಾರೆ. ಇಂದು ಮಹಿಳೆ ಎಲ್ಲ ರಂಗಗಳಲ್ಲೂ ಮುಂದೆ ಇದ್ದಾಳೆ. ಹೀಗಿರುವಾಗ ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗದ ತರಬೇತಿ ಪಡೆದು ಕುಟುಂಬಕ್ಕೆ ಆಧಾರವಾಗಬೇಕು ಎಂದರು.

      ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಸ್ಟರ್ ಮರಿಯಾ ಅನಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಶನಿ ಸಂಸ್ಥೆ ಹತ್ತು ಹಲವು ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ. ತಾಲೂಕಿನಾದ್ಯಂತ ಎಲ್ಲ ಗ್ರಾಮಗಳ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ಸ್ವ ಉದ್ಯೋಗ ತರಬೇತಿಗಳನ್ನು ನೀಡಿ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹಿಸುತ್ತಿದೆ ಎಂದ ಅವರು, ಸ್ವ ಸಹಾಯ ಸಂಘಗಳು ಕೇವಲ ಹಣ ಉಳಿತಾಯ ಮಾಡುವುದಕ್ಕಲ್ಲ.

       ಬದಲಾಗಿ ಸಂಘದ ಪರಿಕಲ್ಪನೆ ಸರಿಯಾಗಿ ತಿಳಿದುಕೊಂಡು ಸ್ವ ಉದ್ಯೋಗದ ತರಬೇತಿಗಳ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ಮಾಡಿದಂತ ವಸ್ತುಗಳಿಗೆ ಮಾರುಕಟ್ಟೆ ಮಾಡುವಂತ ಕೌಶಲ್ಯತೆ ಹೊಂದಬೇಕು. ಮಹಿಳೆ ಅಬಲೆಯಲ್ಲ ಸನಲೆ ಎಂದು ಸಾಬಿತು ಪಡಿಸಬೇಕಾಗಿದೆ ಎಂದರು.

         ಶಿಬಿರದಲ್ಲಿ ಸಂಯೋಜಕಿ ಸಿ ಮೇರಿ ಅವರು ಬಿಳಿ ಫಿನಾಯಿಲ್ ಮಾಡುವ ವಿಧಾನವನ್ನು ಪ್ರಾತ್ಯಕ್ಷತೆ ಮೂಲಕ ತಿಳಿಸಿದರು, ಹಾಗೂ ಅದರ ಉಪಯೋಗದ ಬಗ್ಗೆ ತಿಳಿಸಿದರು, ಕುಮಾರಿ ಶೀಲಾ ಸ್ವಾಗತಿಸಿದರು. ರೂಪಾ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link