“ಸ್ವಯಂ ಸೇವಾ ಸಂಸ್ಥೆಗಳಿಂದ ಸುಸ್ಥಿರ ಸಮಾಜ”

ರಾಣೇಬೆನ್ನೂರ:

        ಸ್ವಯಂ ಸೇವಾ ಸಂಸ್ಥೆಗಳಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥಶ್ರೀ ಎಸ್‍ಆರ್ ಹಿರೇಮಠ ಹೇಳಿದರು.ಅವರುಕರ್ನಾಟಕ ನಗರ ಮತ್ತುಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ರಿ) ಬೆಂಗಳೂರ ಮತ್ತುಕ್ರೈಸ್ತ ವಿಶ್ವವಿದ್ಯಾಲಯಇವರ ಸಂಯುಕ್ತಾಶ್ರಯದಲ್ಲಿರಾಣೇಬೆನ್ನೂರಿನ ಪರಿವರ್ತನ ಭವನದಲ್ಲಿಜರುಗಿದ ಬೆಳಗಾವಿ ವಿಭಾಗ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ “ವಿಜ್ಹನ ಬಿಲ್ಡಿಂಗ್” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ತಮ್ಮ ಹೋರಾಟದ ಅನುಭವಗಳನ್ನು ಹಂಚಿಕೊಂಡುಅವರು, ಇಂದು ಭ್ರಷ್ಟಾಚಾರ ಮತ್ತುಕಾರ್ಪೊರೇಟ್ ವಲಯದ ಕಪಿಮುಷ್ಠಿಗೆ ಸಿಲುಕಿ ಸ್ವಯಂ ಸೇವಾ ಕ್ಷೇತ್ರತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆಆದ್ದರಿಂದತರಬೇತಿಕಾರ್ಯಾಗಾರ ಸಂವಾದನೆ ಮೂಲಕ ಸಂಘಟಿತದ್ವನಿಯಾಗಬೇಕಿದೆಎಂದರು.

         ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿದಡಾ||ಎಸ್‍ಎಲ್ ಪವಾರ, ಇತ್ತಿಚಿನ ದಿನಗಳಲ್ಲಿ ಸ್ವಯಂ ಸೇವಾ ಕ್ಷೇತ್ರದಲ್ಲಿ ಉಸಿರುಗಟ್ಟುವ ವಾತವರಣ ನಿರ್ಮಾಣವಾಗಿದ್ದು ಈ ಕುರಿತುಚಿಂಥನ ಮಂಥನ ನಡೆಯಬೇಕಿದೆಇತಂಹ ಸೇವೆಯಿಂದ ಮಾತ್ರ ಸಾರ್ಥಕತೆ ಸಾಧ್ಯಎಂದರು.

         ಕಾರ್ಯಕ್ರಮದ ಅಧ್ಯಕ್ಷತೆವಯಿಸಿದ ಫೆವಾರಡ-ಕೆಅಧ್ಯಕ್ಷರಾದ ಶ್ರೀ ಆಂಜನೇಯರೆಡ್ಡಿ ಮಾತನಾಡಿ ಪ್ರಸ್ತುತ ಸವಾಲುಗಳನ್ನು ಎದುರಿಸಲು ನಾವು ಸಮರ್ಥರಾಗಬೇಕುಜೊತೆಗೆ ಬದಲಾವಣೆಗಳಿಗೆ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆಎಂದರು.
ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಬಾಗಲಕೋಟಮತ್ತುಉತ್ತರಕನ್ನಡ ಜಿಲ್ಲೆಗಳಿಂದ ಸುಮಾರು 83 ಸಂಸ್ಥೆಗಳಿಂದ ಮುಖ್ಯಸ್ಥರು ಭಾಗವಹಿಸಿದರು.

         ಕಾರ್ಯಾಗಾರದಲ್ಲಿ ಫೇವಾಡ್-ಕೆ ಫ್ರಧಾನ ಕಾರ್ಯದರ್ಶಿ ಶ್ರೀ ಮಹಾಂತೇಶ ಅಗಸಿಮುದ್ದಿನ, ಶ್ರೀ ಎಂ ನಾಗರಾಜ, ಶ್ರೀಮತಿ ಮಲ್ಲಮ್ಮ ಎಲವಾರ, ಶ್ರೀಮತಿ ಅನಿತಾ ಜಿ ಎಸ್, ಶ್ರೀ ಹೆಚ್‍ಎಫ್ ಅಕ್ಕಿ ಇತರರುಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link