ಸಸಿ ನೆಟ್ಟು ಹಿರಿಯ ನಾಗರಿಕರ ದಿನಾಚರಣೆ

ಹುಳಿಯಾರು

    ಹೋಬಳಿಯ ಜೋಡಿ ತಿರುಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಮೂಲಕ ಹಿರಿಯ ನಾಗರಿಕರ ದಿನವನ್ನು ಆರ್ಥಪೂರ್ಣವಾಗಿ ಆಚರಿಸಲಾಯಿತು.

     ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಸಿಗಳನ್ನು ಬೆಳೆಸುವುದು ಹಾಗೂ ಹಿರಿಯರನ್ನು ಪೋಷಿಸುವುದು ಇಂದಿನ ಯುವ ಜನಾಂಗಕ್ಕೆ ದೇವರ ಕೆಲಸವಿದ್ದಂತೆ. ಗಿಡಗಳನ್ನು ಪೋಷಿಸಿದರೆ ಪರಿಸರ ಉಳಿಯುವುದು, ಹಿರಿಯರನ್ನು ಗೌರವಿಸಿದರೆ ಜ್ಞಾನ ಹೆಚ್ಚಾಗುತ್ತದೆ ಎಂದರು.

    ಬುಕ್ಕಾಪಟ್ಟಣ ಅರಣ್ಯ ವಲಯದ ಅರಣ್ಯ ರಕ್ಷಕ ದಿಲೀಪ್‍ಕುಮಾರ್ ಅವರು ಗಿಡಗಳ ಹೆಸರನ್ನು ತಿಳಿಸುತ್ತಾ, ಅದರ ಉಪಯೋಗಗಳು ಗಿಡಗಳನ್ನು ಕಡಿಯುವುದರಿಂದ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳನ್ನು ತಿಳಿಸಿದರು. ಹಸಿರೇ ಉಸಿರು ಹಸಿರಿನಿಂದ ಒಳ್ಳೆಯ ಮಳೆ ಹಾಗೂ ಗಾಳಿ ದೊರೆಯುತ್ತದೆ, ಮರಗಳನ್ನು ಕಡಿಯುತ್ತಿದ್ದರೆ ಪರಿಸರದ ಸಂಪತ್ತು ನಶಿಸಿ ಹೋಗುತ್ತದೆ ಎಂದು ತಿಳಿಸಿದರು.

     ಅರಣ್ಯ ಇಲಾಖೆಯ ಸಂತೋಷ್‍ರವರು ಪರಿಸರಕ್ಕೆ ಸಂಬಂಧಪಟ್ಟಂತೆ ಕವನವನ್ನು ಹೇಳಿದರು. ಮಳೆಯಿಲ್ಲದೆ ಕೆಲವು ಪ್ರದೇಶಗಳು ಮರುಭೂಮಿಯಾಗಿ ಉಳಿದಿವೆ. ಭೂಮಿಯ ಮೇಲೆ ಸಿಹಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಇನ್ನು ಮುಂದೆ ಕುಡಿಯುಲು ಸಹ ಸಿಹಿ ನೀರು ಸಿಗುವುದಿಲ್ಲ. ಮಕ್ಕಳೆ ಎಚ್ಚೆತ್ತು ನೀವು ನಡೆದರೆ ಪರಿಸರದಲ್ಲಿ ಗಿಡಮರಗಳ ನೆಟ್ಟರೆ ಮುಂದಿನ ಪ್ರಜೆಗಳಾಗಿ ಸುಖವಾಗಿ ಆರೋಗ್ಯವಂತರಾಗಿ ಬಾಳುವಿರಿ ಎಂದು ತಿಳಿಸಿದರು.

     ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ವಿ.ನಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಮ್ಮ, ಗ್ರಾಮ ಪಂಚಾಯಿತಿ ಸದಸ್ಯೆ ಕನಕಮ್ಮ, ಗ್ರಾಮಸ್ಥರಾದ ನರಹರಿಶಾಸ್ತ್ರಿ, ರಾಜಣ್ಣ ಇದ್ದರು. ಎಂ.ಸಿ.ಚಂದ್ರಶೇಖರ್ ಸ್ವಾಗತಿಸಿ, ಶಿಕ್ಷಕಿ ಲಕ್ಕಮ್ಮ ವಂದಿಸಿದರು. ಶಾಲಾ ಆವರಣದಲ್ಲಿ ಶಾಲೆಯಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಂತೆ 39 ಸಸಿಗಳನ್ನು ನೆಡಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link