ವರ್ಗಿಕರಣ ಮತ್ತು ಪ್ಯಾಕಿಂಗ್ ಘಟಕ ಕಟ್ಟಡದ ಉದ್ಘಾಟನೆ

ಶಿಗ್ಗಾವಿ :

      ರೈತರ ಇನ್ಸೂರೆನ್ಸ್ ಹಣಕ್ಕೆ ಸಂಬಂದಿಸಿದಂತೆ ಕೃಷಿ ಇಲಾಖೆಯವರು ಬಂಕಾಪೂರ ಹೊಬಳಿ ಎಂದು ಬರೆಯುವಲ್ಲಿ ಶಿಗ್ಗಾವಿ ಹೊಬಳಿ ಎಂದು ಬರೆದಿದ್ದರಿಂದ ಸುಮಾರು 4 ಸಾವಿರ ಎಕರೆ ಬೆಳೆ ಹಾನಿಗೆ ಇನ್ಸೂರೇನ್ಸ್ ಹಣ ನಮಗೆ ದಕ್ಕಲಿಲ್ಲ ಜೊತೆಗೆ ಸುಮಾರು 4 ಸಾವಿರ ರೈತರಿಗೆ ಬರಬೇಕಿದ್ದ ಹಣ ಇಂದಿಗೂ ಬಂದಿಲ್ಲ ಅದು ಕೇವಲ ಹೊಬಳಿ ಎಂಬ ಹೆಸರನ್ನು ಬದಲಾವಣೆ ಮಾಡಿದಕ್ಕೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಕೃಷಿ ಇಲಾಖೆಯವರ ತಪ್ಪಿನಿಂದ ರೈತನಿಗೆ ಆದ ಅನ್ಯಾಯವನ್ನ ಸ್ಮರಿಸಿ ಅಸಮಧಾನ ವ್ಯಕ್ತಪಡಿಸಿದರು.

      ಗುರುವಾರ ಪಟ್ಟಣದ ಎಪಿಎಮ್‍ಸಿಯ ಪ್ರಾಂಗಣದಲ್ಲಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಶಿಗ್ಗಾವಿ ಇವರ ಆಶ್ರಯದಲ್ಲಿ ಆರ್‍ಕೆವಿವಾಯ್ ಯೋಜನೆ ಅಡಿಯಲ್ಲಿ ಧಾನ್ಯಗಳ ಸ್ವಚ್ಚತೆ, ವರ್ಗಿಕರಣ ಮತ್ತು ಪ್ಯಾಕಿಂಗ್ ಘಟಕ ಕಟ್ಟಡದ ಉದ್ಘಾಟನೆ ಹಾಗೂ ಡಬ್ಲು,ಐ,ಎಫ್ ಯೋಜನೆ ಅಡಿ 1000 ಎಮ್ ಟಿ ಸಾಮಥ್ರ್ಯದ ನೂತನ ಗೋದಾಮು ಕಟ್ಟಡ ನಿರ್ಮಾಣದ ಕಾಮಗಾರಿಯ ಭೂಮಿ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅದೇ ರೀತಿ ಬ್ಯಾಂಕಿನಲ್ಲಿ ಮಳೆಯಾಶ್ರಿತ ಎಂದು ಬರೆಯುವಲ್ಲಿ ನೀರಾವರಿ ಎಂದು ಬರೆದಿದ್ದರಿಂದ ಸುಮಾರು 600 ಜನ ರೈತರಿಗೆ ಇನ್ಸೂರೇನ್ಸ್ ಬಂದಿಲ್ಲ,

        ಇಷ್ಟೆಲ್ಲಾ ತಪ್ಪುಗಳು ನಡೆದ ಮೇಲೆ ಜಿಲ್ಲೆಯಲ್ಲಿ ಸೆಗಣಿ ಹೋರಾಟ ನಡೆಸಿ, ಲಾಠಿ ಏಟು ತಿಂದ ಮೇಲೆ ನಮ್ಮ ಜಿಲ್ಲೆಗೆ 48 ಕೋಟಿ ಇನ್ಸೂರೇನ್ಸ್ ಹಣ ಬಂದಿದೆ, ಹೀಗೆ ಕೊಡುವದು ಕೋಡಿಸುವಂತಹದು ಅಧಿಕಾರಿಗಳ ತಪ್ಪಿನಿಂದ ಆಗುತ್ತಿದೆ ಇವೆಲ್ಲದರ ಬದಲಾವಣೆ ಆಗಬೇಕಿದೆ ಎಂದ ಅವರು ರೈತರೂ ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲ, ರೈತ ಬೆಳೆದ ಬೆಳೆಯ ಸಂರಕ್ಷಣೆ, ಬೆಳೆಗೆ ಸರಿಯಾದ ಬೆಲೆ, ಸರಿಯಾದ ತೂಕ, ಸರಿಯಾದ ಮಾರುಕಟ್ಟೆ ವ್ಯವಸ್ಥೆಯ ಮನೋಭಾವನೆಯ ಬಗ್ಗೆಯೂ ಯೋಚಿಸಬೇಕಿದೆ ಜೊತೆಗೆ ಬೆಳೆಗೆ ಹಾಕಿದ ಹಣ ಸರಿಯಾಗಿ ಬಂದಿದೆಯಾ ? ಎಂಬುವವರೆಗೂ ಯೋಚಿಸಬೇಕು ಅಂದಾಗ ರೈತ ಉಳಿಯಲು ಸಾದ್ಯವಿದೆ

        ಸುಗ್ಗಿ ಮೊದಲು ಮತ್ತು ಸುಗ್ಗಿಯ ನಂತರವೂ ಸಹಿತ ಅಷ್ಠೆ ಗಂಭೀರವಾಗಿ ಕಾರ್ಯವನ್ನು ರೈತ ಮಾಡಬೇಕಿದೆ, ರೈತ ಯಾವುದೆ ಪಕ್ಷಕ್ಕೆ ಸೇರಿಲ್ಲ ಆದರೆ ಎಲ್ಲ ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ, ಗ್ರಾಮೀಣ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತಿದೆ, ರೈತನಿಗೆ ಎಲ್ಲಿಯವರಿಗೆ ಮೂಲ ಬಂಡವಾಳವನ್ನು ನೀಡಲಾಗುವದಿಲ್ಲವೋ ಅಲ್ಲಿಯ ವರೆಗೆ ರೈತರು ಉದ್ದಾರವಾಗುವದಿಲ್ಲ, ರೈತನು ಬೆಳೆದ ಬೆಳೆಗೆ ನೇರವಾದ ಬೆಲೆ ಬೇಕು, ಉತ್ಪಾದನೆ ಮಾಡುವವನು ರೈತನೇ, ಬಳಕೆ ಮಾಡುವವನು ರೈತನೇ ಆದರಿಂದ ಎಲ್ಲಿಯವರೆಗೂ ಮೂಲಭೂತವಾದ ಕೆಲವು ಬದಲಾವಣೆ ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಬದಲಾವಣೆಯಾದಾಗ ಮಾತ್ರ ರೈತನಿಗೆ ನ್ಯಾಯ ಸಿಗಲು ಸಾದ್ಯವಿದೆ, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಇನ್ಸೂರೇನ್ಸ್ ಕಂಪನಿಯವರು ಇನ್ನೂ ಬ್ಯಾಂಕಿನವರಂತು ರೈತರಿಗೂ ಮತ್ತು ತಮಗೂ ಸಂಬಂದವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

         ಎಪಿಎಮ್‍ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ ಶೇಂಗಾ ಮತ್ತು ಗೋವಿನಜೋಳಗಳ ಖರೀದಿ ಕೇಂದ್ರದ ಸ್ಥಾಪನೆ ಮತ್ತು ಶಿಗ್ಗಾವಿ ಮತ್ತು ಹುಲಗೂರ ಎಪಿಎಮ್‍ಸಿಗಳಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು.

         ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚಿಸಿದರು, ಎಪಿಎಮ್‍ಸಿ ನಿರ್ದೇಶಕರಾದ ಹನುಮರೆಡ್ಡಿ ನಡುವಿನಮನಿ ಹಾಗೂ ಪ್ರೇಮಾ ಪಾಟೀಲ್ ಮಾತನಾಡಿದರು. ಎಪಿಎಮ್‍ಸಿ ಕಾರ್ಯದರ್ಶಿ ವಿ ವೆಂಕಟೇಶ ಪ್ರಾಸ್ಥಾವಿಕವಾಗಿ ಮಾತನಾಡಿದರು.

          ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಸದಸ್ಯೆ ಶೋಭಾ ಗಂಜೀಗಟ್ಟಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಮಲ್ಲಿಕಾರ್ಜುನ ಸೊಪ್ಪಿನ, ಕೆಸಿಸಿ ಬ್ಯಾಂಕ ನಿರ್ದೇಶಕ ಗಂಗಣ್ಣ ಸಾತಣ್ಣವರ, ತಾಪಂ ಅಧ್ಯಕ್ಷೆ ಪಾರವ್ವ ಆರೇರ್, ಸದಸ್ಯರಾದ ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಶ್ರೀಕಾಂತ ಪೂಜಾರ, ಎಪಿಎಮ್‍ಸಿ ಉಪಾಧ್ಯಕ್ಷ ಚಂದ್ರಶೇಖರ ಹನಕನಳ್ಳಿ ನಿರ್ದೇಶಕರಾದ ನಿಂಗಣ್ಣ ಹಳವಳ್ಳಿ ಈರಣ್ಣ ಬಡ್ಡಿ, ಮಲ್ಲನಗೌಡ ಪಾಟೀಲ್, ಬಸನಗೌಡ ಮರಿಗೌಡ್ರ, ವಿರುಪಾಕ್ಷವ್ವ ಯಲಿಗಾರ, ಹರ್ಜಪ್ಪ ಲಮಾಣಿ, ಸಂಗಪ್ಪ ಕೂಡ್ಲ, ರುದ್ರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮಲ್ಲೇಶಪ್ಪ ಹರಿಜನ, ದೇವಣ್ಣ ಚಾಕಲಬ್ಬಿ ಸೇರಿದಂತೆ ತಾಲೂಕಿನ ರೈತ ಬಾಂಧವರು ಉಪಸ್ಥಿತರಿದ್ದರು. ಮುಖಂಡ ಶಿವಾನಂದ ಮ್ಯಾಗೇರಿ ನಿರೂಪಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link