ತುಮಕೂರು:
ಸುಮಾರು 04-05 ತಿಂಗಳುಗಳಿಂದ ಪಾವಗಡ ತಾಲ್ಲೂಕಿನ ಬಿ.ಹೊಸಳ್ಳಿ, ಪೋತಗಾನಹಳ್ಳಿ, ದೊಡ್ಡಹಳ್ಳಿ, ಲಿಂಗದಹಳ್ಳಿ, ದೊಮ್ಮತಮರಿ, ಗಂಗಸಾಗರ, ಕೋಡಿಗೆಹಳ್ಳಿ, ರಾಮಯ್ಯನಪಾಳ್ಯ, ತುಮಕುಂಟೆ, ಕನ್ನಮೇಡಿ, ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿ, ಚಿನ್ನ-ಬೆಳ್ಳಿ ವಡವೆಗಳು ಹಾಗೂ ಹಣವನ್ನು ದೋಚಿಕೊಂಡು ಹೋಗುತ್ತಿದ್ದು, ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ 4, ಅರಸೀಕೆರೆ ಪೊಲೀಸ್ ಠಾಣೆಯಲ್ಲಿ 4 ಹಾಗೂ ವೈ.ಎನ್.ಹೊಸಕೋಟೆ ಪೆÇಲೀಸ್ ಠಾಣೆಯಲ್ಲಿ 6 ರಾತ್ರಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.
ಸದರಿ ಪ್ರಕರಣಗಳ ಪತ್ತೆಗಾಗಿ ಎಂ.ಪ್ರವೀಣ್, ಪೊಲೀಸ್ ಉಪಾಧೀಕ್ಷಕರು, ಮಧುಗಿರಿ ಉಪವಿಭಾಗ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಈ ಕೆಳಕಂಡ ಆರೋಪಿಗಳು ಮತ್ತು ಮನೆ ಕಳವು ಮಾಡಿದ್ದ 200 ಗ್ರಾ ಚಿನ್ನ 4ಕೆ.ಜಿ.750 ಗ್ರಾಂ ಬೆಳ್ಳಿ ಹಾಗೂ 3,93,000/-ರೂ ನಗದು ಹಣ ಸೇರಿದಂತೆ ಒಟ್ಟು 13,50,000/- ರೂ ಮೌಲ್ಯದ ಚಿನ್ನ-ಬೆಳ್ಳಿ ವಡವೆಗಳು ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್, ಕಬ್ಬಿಣದ ರಾಡು, ಆಕ್ಸಲ್ ಬ್ಲೇಡ್, ಸ್ಕ್ರೂ ಡ್ರೈವರ್ ಗಳನ್ನು ಅಮಾನತ್ತುಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.
ಸದರಿ ಪ್ರಕರಣದ ಆರೋಪಿಗಳು ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಶ್ರೀ ಉದೇಶ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಎಂ.ಪ್ರವೀಣ್, ಕೆ.ಎಸ್.ಪಿ.ಎಸ್. ಪೊಲೀಸ್ ಉಪಾಧೀಕ್ಷಕರು, ಮಧುಗಿರಿ ಉಪವಿಭಾಗ ರವರ ನೇತೃತ್ವದಲ್ಲಿ ಪಾವಗಡ ತಾಲ್ಲೂಕಿನ ಸಿ.ಪಿ.ಐ.ಗಳಾದ ಡಿ. ನಾಗರಾಜು, ಮತ್ತು ಸಿ.ವೆಂಕಟೇಶ್, ಪಿ.ಎಸ್.ಐ.ಗಳಾದ ಬಿ.ರಾಮಯ್ಯ, ಜೆ.ಆರ್.ನಾಗರಾಜು, ಹೆಚ್.ಶ್ರೀನಿವಾಸ್ ಮತ್ತು ಸಿಬ್ಬಂದಿಗಳಾದ ಸೋಮಶೇಖರ್, ಕೇಶವರಾಜು, ಶ್ರೀನಿವಾಸ್.ಜಿ.ಟಿ., ಗಂಗರಾಜು, ಮೋಹನ್, ಭರತ್, ಸಂತೋಷ್, ಹರೀಶ್, ಶ್ರೀರಂಗಪ್ಪ, ಶಿವರಾಜು, ಶೌಖತ್, ಸುಜಾತ, ವಸಂತ್, ಸಂತೋಷ್, ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ಮತ್ತು ರಮೇಶ್ ರವರುಗಳ ಪತ್ತೆ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ