ರಟ್ಟೀಹಳ್ಳಿ
ಏ.24 ರಂದು ಪವಿತ್ರ ರಂಜಾನ ತಿಂಗಳು ಆರಂಭಾವಾಗಲಿದ್ದು, ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮದ ಮುಸ್ಲಿಂ ಮುಖಂಡರ ಶಾಂತಿ ಸಭೆ ನಡೆಯಿತು.
ಸಭೇಯನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ ಗುರುಬಸವರಾಜ, ದೇಶದಲ್ಲಿಯೇ ಕರೋನ ಮಹಾಮಾರಿ ತಾಂಡವವಾಡುತ್ತಿದೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಹಗಲಿರುಳು ಶ್ರಮಿಸಿ ಕೆಲಸ ಮಾಡುತ್ತಿದೆ, ಇನ್ನೆರೆಡು ದಿನಗಳಲ್ಲಿ ರಂಜಾನ ಉಪವಾಸ ತಿಂಗಳು ಆರಂಭವಾಗಲಿದ್ದು ತಾಲ್ಲೂಕಿನ ಮುಸ್ಲಿಂ ಸಮೂದಾಯದ ಸಹಕಾರ ತುಂಬಾ ಮುಖ್ಯ, ಈಗಾಗಲೇ ಸರ್ಕಾರ ಆದೇಶಿಸಿದ್ದು,ಯಾರು ಕೂಡ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ, ಸಂಜೆ ಉಪವಾಸ ಬಿಡುವ ವೇಳೆಯಾಗಲಿ, ತರಾವಿ ಸಮಯದಲ್ಲಾಗಲಿ ಯಾರೂ ಕೂಡ ಮಸೀದಿಗಳಲ್ಲಿ ಸೇರುವಂತಿಲ್ಲ,ಹಾಗೆಯೇ ದರ್ಗಾ,ಮಸೀದಿ ಆವರಣಗಳಲ್ಲಿ ಯಾವುದೇ ತರನಾದ ಉಪಹಾರ ಅಂಗಡಿಗಳನ್ನು ತೆರೆಯುವಂತಿಲ್ಲ, ಮಸೀದಿ, ಮೊಹಲ್ಲಾಗಳಲ್ಲಿ ತಂಪು ಪಾನಿಯಗಳನ್ನು ವಿತರಿಸುವಂತಿಲ್ಲ,ಸಾಮಾಜಿಕ ಅಂತರ ಕಾಪಾಡಿ, ಹೊರಗಡೆ ಓಡಾಡುವಾಗ ಮಾಸ್ಕ ಧರಿಸಿ, ಆಗಾಗ ಕೈಗಳನ್ನು ಸ್ವಚ್ಛಗೊಳಿಸಿ,ತಮ್ಮ ತಮ್ಮ ಮನೆಗಳಲ್ಲಿಯೇ ನಮಾಜ, ಉಪವಾಸ ಸೇರಿದಂತೆ ಪ್ರಾರ್ಥನೆ ಮಾಡಬೇಕು ಎಂದರು
ಪಿ.ಎಸ್.ಐ ಯು.ಜೆ.ಶಶಿಧರ ಮಾತನಾಡಿ, ಎಲ್ಲ ಸಂಧರ್ಭದಲ್ಲೂ ತಾವು ಸಹಕಾರ ನೀಡುತ್ತಲೇ ಬಂದಿದ್ದೀರಿ,ಕಡಿಮೆ ಡೆಸಿಮಲ್ ಮೂಲಕ ಆಜಾನ್ ಕೂಗಬೇಕು, ಲೌಡ್ ಸ್ಪೀಕರ ಬಳಸುವಂತಿಲ್ಲ, ಧ್ವನಿವರ್ಧಕ ಬಳಸಿ ರಂಜಾನ ತಿಂಗಳ ಪ್ರಾರ್ಥನೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡುವಂತಿಲ್ಲ, ಸಮೂದಾಯದ ಮುಖಂಡರು ಯವಕರಿಗೆ ಕಾನೂನು ಪಾಲಿಸುವಂತೆ ತಿಳಿ ಹೇಳಬೇಕು, ಕಾನೂನು ಪಾಲನೆಯಲ್ಲಿ ಉಲ್ಲಂಘನೆಯಾದರೆ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ, ಇ.ಓ. ಮೋಹನ ಕುಮಾರ, ಉಪ ತಹಶೀಲ್ದಾರ ಎಂ.ಎಸ್.ಬೆನ್ನೂರ, ಅಂಜುಮನ್ ಕಮೀಟಿ ಅಧ್ಯಕ್ಷ ರಿಯಾಜ ತಡಕನಳ್ಳಿ, ತಾ.ಪಂ ಸದಸ್ಯ ಮಹಬೂಬ ಸಾಬ್ ಮುಲ್ಲಾ, ಗ್ರಾ.ಪಂ ಸದಸ್ಯ ಬಾಬು ಜಡದಿ, ಜಾಫರ ಖಾಜಿ, ಜಾಕೀರ ಮುಲ್ಲಾ, ಮಖಬೂಲ್ ಮುಲ್ಲಾ, ತಾಲ್ಲೂಕಿನ ಎಲ್ಲ ಮಸೀದಿಯ ಮುಖಂಡರು ,ಅಂಜುಮನ ಕಮೀಟಿಯವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
