ಶಿರಾ
ನಗರದ ವಾರ್ಡ್ ನಂಬರ್ 19 ರ ಬೇಗಂ ಮೊಹಲ್ಲಾದ ಕೊಳಚೆಯ ನೀರು ಕುಡಿಯುವ ನೀರಿನ ದೊಡ್ಡ ಕೆರೆಯನ್ನು ಸೇರುತ್ತಿದ್ದು ಈ ಕೂಡಲೇ ಚರಂಡಿಯನ್ನು ನಿರ್ಮಿಸಿಕೊಡುವಂತೆ ಬಡಾವಣೆಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.19 ನೇ ವಾರ್ಡಿನ ಬೇಗಂ ಮೊಹಲ್ಲಾದಲ್ಲಿ ಸರಿಯಾದ ಚರಂಡಿಗಳಿಲ್ಲದೆ ಅನೈರ್ಮಲ್ಯ ಹೆಚ್ಚಾಗಿದ್ದು ಸೊಳ್ಳೆಗಳ ಕಾಟದಿಂದ ರೋಗರುಜಿನಗಳೂ ಹೆಚ್ಚುತ್ತಿದ್ದು ನಗರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
