ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಸೇವಾಲಾಲ್ ಜಯಂತಿ

ಚಿತ್ರದುರ್ಗ :

      ಶ್ರೀ ಸಂತ ಸೇವಾಲಾಲರು ಶಾಂತಿ, ಸತ್ಯ, ಸೇವೆಯಂತಹ ಸಂದೇಶಗಳನ್ನು ಸಾರುವ ಮೂಲಕ ಶ್ರೇಷ್ಠ ಸಂತ ಮತ್ತು ದಾರ್ಶನಿಕರಾಗಿ ಕಂಡುಬರುತ್ತಾರೆ ಎಂದು ಕೆ.ಎಸ್.ಆರ್.ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನ ಕುಮಾರ ಬಾಲನಾಯ್ಕ್ ಹೇಳಿದರು.

        ಕೆಳಗೋಟೆ ಬಳಿ ಇರುವ ಕೆ.ಎಸ್.ಆರ್.ಟಿ ಡಿಪೋದಲ್ಲಿ ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರು ಹಾಗೂ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ, ಶ್ರೀ ಸಂತ ಸೇವಾಲಾಲ್‍ರ 280ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 280 ವರ್ಷಗಳ ಹಿಂದೆ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನ ಕೊಪ್ಪ ಭಾಗದಲ್ಲಿ ಜನ್ಮ ತಾಳಿದ ಸೇವಾಲಾಲ್ ಮಹರಾಜರು ಪಶುಪಾಲನೆ ಮತ್ತು ದಾರ್ಶನಿಕರ ವಿಚಾರಗಳನ್ನು ಮೈಗೂಡಿಸಿಕೊಂಡು ಶಾಂತಿ, ಸತ್ಯ, ಸೇವೆಯಂತಹ ಮಹತ್ವವಾದ ಸಂದೇಶಗಳನ್ನು ನಾಡಿನ ಜನತೆಗೆ ಸಾರಿ ಪ್ರಸಿದ್ಧರಾದವರು.

       ಅವರು ನಡೆದ ದಾರಿಯುದ್ದಕ್ಕೂ ಶಾಂತಿ ಮಂತ್ರ ಜಪಿಸಿದ ದಾರ್ಶನಿಕರಾದ ಇವರು ಇಡೀ ಲಂಬಾಣಿ ಸಮುದಾಯ ಸೇರಿ ಜಗತ್ತಿನ ಎಲ್ಲಾ ಸಮುದಾಯಗಳ ಏಳಿಗೆಯನ್ನು ಬಯಸಿದಂತಹ ಸರ್ವ ಶೇಷ್ಠರು ಎಂದು ನುಡಿದರು. ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಸಂತ ಶ್ರೀ ಸೇವಾಲಾಲ್‍ರು ಸೂರಗೊಂಡನ ಕೊಪ್ಪದಲ್ಲಿ ಜನಿಸಿ ಆಂಧ್ರದ ಗುತ್ತಿಬಳಿ, ಹೈದ್ರಾಬಾದಿನ ನಿಜಾಮರನ್ನು ತಮ್ಮ ಪವಾಡಗಳ ಮೂಲಕ ಅಶ್ಚರ್ಯ ಚಿಕಿತರನ್ನಾಗಿ ಮಾಡಿ ಅಚ್ಚರಿ ಮೂಡಿಸಿದ ಇವರು ದೇಶದ ಉದ್ದಗಲಕ್ಕೂ ಸಂಚರಿಸಿ ಶಾಂತಿ, ಸತ್ಯ, ಸೇವೆಯ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಜಗತ್‍ಪ್ರಸಿದ್ಧರಾದವರು. ಆ ನಂತರ ಮಹರಾಷ್ಟ್ರದ ಪೌರಗಡದಲ್ಲಿ ಐಕ್ಯರಾದರು ಎಂಬ ಐತಿಹಗಳಿದ್ದು, ಇಂದಿಗೂ ಸಹ ಅವರ ವಿಚಾರ ಮತ್ತು ಚಿಂತನೆಗಳು ಜೀವಂತವಾಗಿದೆ ಎಂದು ಹೇಳಿದರು.

        ಸಂತ ಸೇವಾಲಾಲ್‍ರ ಗುಡಿಗಳನ್ನು ಪ್ರತಿಯೊಂದು ತಾಂಡಗಳಲ್ಲೂ ನಿರ್ಮಿಸುವ ಮೂಲಕ ಜನತೆ ಇಂದಿಗೂ ಆರಾಧನೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆದ ಕಾರಣಕ್ಕೋ ಅಥವಾ ಪವಾಡಗಳ ಕಾರಣಕ್ಕೋ ಸಂತ ಶ್ರೇಷ್ಠರು ಪೂಜಿಸಲ್ಪಡುತ್ತಿರುವದು ವಿಶೇಷವಾಗಿದೆ ಎಂದರು.

         ಕೆ.ಎಸ್.ಆರ್.ಟಿ.ಸಿ ಯ ವಿಭಾಗೀಯ ತಾಂತ್ರೀಕ ಶಿಲ್ಪಿ ವಿಜಯ ಕುಮಾರ್ ಅವರು ಮಾತನಾಡಿ ಸಂತ ಸೇವಾಲಾಲ್‍ರನ್ನು ಜಾತಿ, ಮತ, ಧರ್ಮಗಳನ್ನು ಮೀರಿ ಪೂಜಿಸುವಂತಹ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಶಾಂತಿಯನ್ನು ಹೊರತು ಪಡಿಸಿ ಬೇರೆನನ್ನೂ ಮಾಡದ ಸೇವಾಲಾಲ್‍ರು ತಮ್ಮ ಸಮುದಾಯಕ್ಕೆ ಶಾಂತಿಯಿಂದ ಬದುಕಲು ಸಲಹೆ ನೀಡಿದ ಮಹತ್ಮರಾಗಿದ್ದಾರೆ ಎಂದರು.

         ಸಂಚಾರಿ ನಿರೀಕ್ಷಕರಾದ ಜಯದೇವ ನಾಯ್ಕ್ ಮಾತನಾಡಿ ಸಂತ ಸೇವಾಲಾಲ್‍ರು ಶೇಷ್ಠತೆಯನ್ನು ಪ್ರತಿಪಾದನೆ ಮಾಡಲು ಅವರು ಗುರುಗಳಾದ ಹಾತೀರಾಂ ಬಾವಾಜಿ ಯವರು ಕಾರಣಕರ್ತರಾಗಿದ್ದು, ಅವರ ಮಾರ್ಗದರ್ಶನ ಮತ್ತು ಸಲಹೆ ಮೇರೆಗೆ ಸೇವಾಲಾಲ್‍ರು ಸತ್ಯವನ್ನು ಸಾರಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ ಎಂದರು.

          ಸಮಾರಂಭದಲ್ಲಿ ಸಂತ ಸೇವಾಲಾಲ್‍ರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿ ರಾಜಶೇಖರ ಕುಂಬಾರ, ಇ.ಎಸ್.ಟಿ ಬಸವರಾಜ ಲಂಬಾಣಿ, ರಾಜಣ್ಣ, ಮೂರ್ತಿನಾಯ್ಕ್, ನಾಗರಾಜ ನಾಯ್ಕ್, ನಿಜಗುಣಿ, ಎನ್.ಪಿ.ರವಿ (ಎಸ್.ಸಿ/ಎಸ್.ಟಿ ಅಧ್ಯಕ್ಷರು), ರಹೀಂಸಾಬ್, ಮುಖುಂದ ತಳವಾರ್, ಶಿವಕುಮಾರನಾಯ್ಕ್, ತಿಪ್ಪೇಸ್ವಾಮಿನಾಯ್ಕ್, ಶಿವನಾಯ್ಕ್, ಜಯರಾಂ ನಾಯ್ಕ್, ಚನ್ನನಾಯ್ಕ್, ದೇವರಾಜನಾಯ್ಕ್, ಮಂಜುನಾಯ್ಕ್, ಗೋವಿಂದನಾಯ್ಕ್, ಲೋಕನಾಯ್ಕ್, ಮಹೇಶ್‍ನಾಯ್ಕ್ ಅಶೋಕ ಮತ್ತು ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap