ಹಿರಿಯೂರು :
ನಗರದ ಶ್ರೀಶಂಕರಮಠದಲ್ಲಿ ಬ್ರಾಹ್ಮಣಸಮಾಜ ಹಾಗೂ ಶ್ರೀಚೈತನ್ಯ ವಿಪ್ರಮಹಿಳಾ ಮಂಡಳಿ ಸಹಯೋಗದಲ್ಲಿ ಶ್ರೀಶಂಕರ ಜಯಂತೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಆನಂತರ ಶ್ರೀಶಂಕರಾಚಾರ್ಯರ ಮೂರ್ತಿಯನ್ನು ತಳಿರುತೋರಣ ಹಾಗೂ ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶಂಕರ ಮಠದ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ದಾರಿಯುದ್ದಕ್ಕೂ ಶ್ರೀಚೈತನ್ಯ ವಿಪ್ರಮಹಿಳಾ ಮಂಡಳಿ ಸದಸ್ಯರು ಭಕ್ತಿಭಾವದ ಭಜನೆ ಕೋಲಾಟ ನಡೆಸಿದರು. ಗಾಂಧಿವೃತ್ತದ ಮೂಲಕ ಸಾಗಿದ ಮೆರವಣಿಗೆ ನಗರದ ಪ್ರಧಾನರಸ್ತೆ, ದುರ್ಗೀಗುಡಿರಸ್ತೆ, ಚಿಕ್ಕಪೇಟೆ, ದೊಡ್ಡಪೇಟೆ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ನೆಹರು ವೃತ್ತದ ಮೂಲಕ ಮೆರವಣಿಗೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರುಗಳಾದ ದೀಕ್ಷಿತ್, ಪ್ರಭಾಕರ್, ರಾಮಕೃಷ್ಣ, ರವಿಶಂಕರ್, ಸೇರಿದಂತೆ ಶ್ರೀಚೈತನ್ಯ ವಿಪ್ರಮಹಿಳಾ ಮಂಡಳಿ ಸದಸ್ಯರು ಹಾಗೂ ಪದಾಧಿಕಾರಿಗಳು ಸಮಾಜಬಾಂಧವರು ಪಾಲ್ಗೊಂಡಿದ್ದರು.