ಶ್ರೀ ಶಂಕರಾಚಾರ್ಯರ ಜಯಂತಿ

ಗುಬ್ಬಿ

        ಸಮಾಜದ ಸುಧಾರಣೆಗೆ ಶ್ರಮಿಸಿದ ಆದಿ ಗುರು ಶಂಕರಾಚಾರ್ಯರರು ದೇಶದ ವಿವಿದೆಡೆ ಸಂಚರಿಸಿ ಅದ್ವೈತ ತತ್ವವನ್ನು ಸಾರುತ್ತಾ ಜಾಗೃತಿ ಮೂಡಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದರು ಎಂದು ಶ್ರೀ ರಾಮಮಂದಿರ ಮ್ಯಾನೇಜಿಂಗ್ ಟ್ರಸ್ಟಿ ಜಿ.ವಿ.ರಂಗನಾಥ್ ತಿಳಿಸಿದರು.

       ಪಟ್ಟಣದ ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮಮಂದಿರ ಟ್ರಸ್ಟ್ ಹಾಗೂ ಮಾತಾ ಭಜನಾ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 32 ವರ್ಷ ಜೀವಿತಾವಧಿಯಲ್ಲಿ ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರಗಳಿಗೆ ಬಾಷ್ಪವನ್ನು ಬರೆದ ಮೊದಲಿಗರಾಗಿದ್ದರು. ಯಾವುದೇ ಮತ, ಪಂಥವನ್ನು ಸ್ಥಾಪಿಸದೆ ವೇದ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದರು ಎಂದರು.

       ಭಾರತದಲ್ಲಿ ಹಿಂದೂ ಧರ್ಮ 8 ನೇ ಶತಮಾನದಲ್ಲಿ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಅದ್ವೈತ ಸಿದ್ದಾಂತದಡಿಯಲ್ಲಿ ವೈಚಾರಿಕತೆಯಲ್ಲಿ ಹೊಸ ಕ್ರಾಂತಿ ನಡೆಸಿದರು. ದೇಶದ ನಾಲ್ಕು ದಿಕ್ಕಿನಲ್ಲೂ ಸಂಚರಿಸಿ 7 ಮಠಗಳು, ದೇವಾಲಯಗಳು, ಗುರುಪೀಠಗಳು, ಗುರು ಕುಲ ಹೀಗೆ ಅನೇಕ ಕಾರ್ಯಗಳೊಂದಿಗೆ ಹಿಂದೂ ಧರ್ಮವನ್ನು ಸಂರಕ್ಷಿಸಿದ್ದರು. ಜಗದ್ಗುರುಗಳಾಗಿ ದೈವಾಂಶ ಸಂಭೂತರಾಗಿ ಗುರುತಿಸಿಕೊಂಡಿದ್ದರು. ಇಂತಹ ಯತಿಗಳ ದಿನಾಚರಣೆಗೆ ಭಾರತೀಯ ತತ್ವಜ್ಞಾನಿಗಳ ದಿನಾಚರಣೆ ಎಂದು ಸಹ ಕರೆಯಲಾಗುತ್ತದೆ ಎಂದರು.

      ಇದೇ ಸಂದರ್ಭದಲ್ಲಿ ಶಂಕರಾಚಾರ್ಯರ ಭಾವಚಿತ್ರವನ್ನು ಪ್ರಾಕಾರೋತ್ಸವ ಮೂಲಕ ಪೂಜಿಸಲಾಯಿತು. ಮಾತಾ ಭಜನಾ ಮಂಡಳಿಯಿಂದ ಭಜನೆ ನಡೆಸಲಾಯಿತು. ಪಾನಕ ಫಲಹಾರ ಹಂಚಲಾಯಿತು.ಈ ಸಂದರ್ಭದಲ್ಲಿ ಮಾತಾ ಭಜನಾ ಮಂಡಳಿಯ ಅಧ್ಯಕ್ಷೆ ಸುನಂದಮ್ಮ, ಜಯಶ್ರೀ, ನಂದಿನಿ, ರೇಖಾ, ಪ್ರೇಮಾ, ಅರುಣಾ, ಉಮಾ, ಟ್ರಸ್ಟಿಗಳಾದ ಜಿ.ಸತೀಶ್, ಜಿ.ಆರ್.ಶ್ರೀನಿವಾಸ್, ಜಿ.ವಿ.ಶ್ರೀಧರ್, ನೀರಜ್ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap