ಶರಣ ಸಂಸ್ಕೃತಿ ಉತ್ಸವ

ಗುತ್ತಲ:

         ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಪ್ರತಿಯೊಂದು ಸಮುದಾಯಕ್ಕೂ ಪ್ರಮಾಣಿಕವಾಗಿ ನ್ಯಾಯ ಒದಗಿಸುವಲ್ಲಿ ಪ್ರಯತ್ನ ಮಾಡಿದ್ದನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

        ಗುತ್ತಲ ಸಮೀಪದ ನರಸೀಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವ ಮತ್ತು ಶ್ರೀ ಶಾಂತಮುನಿ ಸ್ವಾಮೀಜಿಯವ ತೃತಿಯ ಸ್ಮರಣೋತ್ಸವ ಹಾಗೂ ಶ್ರೀಶಾಂತಭೀಷ್ಮಚೌಡಯ್ಯ ದ್ವಿತೀಯ ಪೀಠಾರೋಹಣ ವಾರ್ಷಿಕ ಮಹೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ದೇವರು ಎಲ್ಲಾರಿಗೂ ಒಂದೆ ನಮ್ಮಲ್ಲಿರುವ ಕೀಳು ಭಾವನೆಯನ್ನು ತೊಡೆದು ಹಾಕಬೇಕು.

         ಸುಮಾರು 900 ವರ್ಷಗಳ ಹಿಂದೆಯೇ ಅನೇಕ ದಾರ್ಶಿನಿಕರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಹೋರಾಡಿದ್ದಾರೆ. ಪಟ್ಟಭದ್ರ ಹಿತಾ ಶಕ್ತಿಯಗಳು ಜಾತಿ ಬೇದವನ್ನು ಬಾಳ ಆಳವಾಗಿ ಬೇರುರುವಂತೆ ಮಾಡಿವೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆಯ ಇರುತ್ತದೆಯೋ ಅಲ್ಲಿಯವರೆಗೂ ಶೋಷಣೆ ಇರುತ್ತದೆ. ಹಾಗಾಗಿ ಇಂತಹ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂದರು. ಜಾತಿ ವ್ಯವಸ್ಥೆ ವಾಸ್ಥವ.

         ಜಾತಿ ಮೂಲಕನೆ ಬದಲಾವಣೆ ತರಬೇಕು ಸಾಮಾಜಿಕ, ಆರ್ಥಿಕ, ಶೈಕ್ಷಣಿಕೆವಾಗಿ ಅಭಿವೃದ್ಧಿ ಹೋದುವಂತಾಗಬೇಕು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಸಮಾಜದಲ್ಲಿ ಕಾಯಕ, ಸಮಾಜತೆ, ದಾಸೋಹದಂತಹ ಸುಂದರ ಸಮಾಜವನ್ನು ನಿರ್ಮಾಣ ಮಾಡಬೇಕು. ಅಂಬಿಗರ ಚೌಡಯ್ಯನವರ ವಚನಗಳು ಒದುವದರಿಂದ ಕಷ್ಟಗಳು ನಿವಾರಣೆ ಯಾಗುವುದರಲ್ಲಿ ಯಾವುದೆ ಸಂಶಯವಿಲ್ಲಾ. ಅಂಬಿಗ, ಕೋಳಿ ಸಮುದಾಯ, ಗಂಗಾಮತಾಸ್ಥರು ಒಂದೆ.

      ವಿಶ್ವಸಾರತೆಯನ್ನು ನೀಡಿರುವ ಸಮಾಜ ಯಾವುದಾದರು ಇದ್ದರೆ ಅದುವೆ ಅಂಬಿಗ ಸಮಾಜ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಅಂಬಿಗಚೌಡಯ್ಯನವರು ಕೇವಲ ಒಂದೆ ಸಮುದಾಯಕ್ಕೆ ಸೀಮಿತವಾಗಿರದೆ ಉಳಿದ ಎಲ್ಲಾ ಸಮುದಾಯದವರಿಗೂ ಉಪದೇಶ ಸಾರುವಂತ ವಚವನ್ನು ರಚಿಸಿದ್ದಾರೆ ಎಂದರು.

         ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರಾದ ಶಾಂತಭೀಷ್ಮಚೌಡಯ್ಯ ಸ್ವಾಮಿಜಿ ಮಾತನಾಡಿ, ಅಂಬಿಗರ ಚೌಡಯ್ಯನವರ ನೆರ ನುಡಿಯ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳು ತಿದ್ದುವ ನಿಟ್ಟಿನಲ್ಲಿ ವಚನವನ್ನು ರಚಿಸಿದ್ದಾರೆ. ಕೇವಲ ವಚನ ರಚನೆ ಮಾಡದೆ ಕಾಲಜ್ಞಾನವನ್ನು ಸಾರುವ ವಚನವನ್ನು ರಚಿಸಿದ ಕಾಲಾಜ್ಞಾನಿಯಾಗಿದ್ದಾರೆ ಅಂಬಿಗರಚೌಡಯ್ಯನವರು. ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ರಾಜಕೀಯವಾಗಿ ಸ್ವಾತಂತ್ರ್ಯ ದೊರೆತಾಗ ಸಮಾಜಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಉತ್ತಮ ಸಂಸ್ಕಾರಯುತ ಸಮಾಜವಾಗಲು ಸಾಧ್ಯ ಎಂದರು. ಪೀಠದ ಅಭಿವೃದ್ಧಿಗೆ ಲಿಂಗೈಕ್ಯೆ ಶಾಂತಮುನಿ ಸ್ವಾಮಿಜಿ ಹಗಲಿರುಳು ಶ್ರಮಿಸಿ ಸಮಜಾಕ್ಕೆ ಲಿಂಗದೀಕ್ಷೆ ನೀಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

        ಕಾರ್ಯಕ್ರಮದ ಅಧ್ಯಕ್ಷತನ್ನು ಅರಣ್ಯ ಮತ್ತು ಪರಿಸರ ನಿಗಮ ಮಂಡಳಿ ಅಧ್ಯಕ್ಷ ಬಿ. ನಾರಾಯಣರಾವ ವಹಿಸಿದ್ದರು.ಸದಾಶಿವ ಸ್ವಾಮಿಜಿ, ಚನ್ನವೀರ ಸ್ವಾಮಿಜಿ, ಬಸವಲಿಂಗ ಸ್ವಾಮಿಜಿ, ಶರಣಬಸವ ಸ್ವಾಮಿಜಿ, ಶಾಂತಗಂಗಾಧರ ಸ್ವಾಮಿಜಿ, ಮರುಳಶಂಕರ ಸ್ವಾಮಿಜಿ, ಬಸವಪ್ರಿಯ ಅನ್ನದಾನಿ ಹಡಪದ ಅಪ್ಪಣ ಸ್ವಾಮಿಜಿ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ ಹಾಗೂ ಜನಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link