ಬಳ್ಳಾರಿ
ನಗರದಲ್ಲಿರುವ ಸಿರುಗುಪ್ಪರೋಡ್ ಅವ್ವಂಬಾವಿ ಕಾಲುವೆ ಹತ್ತಿರ ಇರುವ ಗುರುಶಾಂತಪ್ಪ ಲೇಔಟ್ ನಲ್ಲಿಯ ಶ್ರೀ ಸೀತಾರಾಮ ಆಶ್ರಮದಲ್ಲಿ ದಸರಾ ಹಬ್ಬದ ಆರನೇ ದಿನದ ಪ್ರಯುಕ್ತ ಸೋಮವಾರ ಮಹಾಲಕ್ಷ್ಮೀ, ಮಹಾಕಾಳೀ, ಮಹಾಸರಸ್ವತಿ, ಪೂಜೆಗಳನ್ನು ಮಾಡಿದ್ದರು.
ಇಂದಿನ ದಿನದ ರೂಪವಾದ ಮಹಾಸರಸ್ವತೀದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮ ಪೂಜೆಗಳನ್ನು ನಾಗೇಶ್ವರಶಾಸ್ತ್ರಿ, ನೇತಿ ಲಕ್ಷ್ಮೀನರಸಿಂಹಾರಾವ್ ಶರ್ಮ ಇತರ ಪಂಡಿತರು ನಿರ್ವಹಿಸಿದರು. ಪಂಡಿತರ ಮಂತ್ರಗಳೊಂದಿಗೆ ನವಗ್ರಹ ಪೂಜೆಗಳು, ರುದ್ರಾಭಿಷೇಕಗಳು, ಕುಂಕುಮಾರ್ಚನೆಗಳು, ಇತ್ಯಾದಿ ಕಾರ್ಯಕ್ರಮಗಳು ನಡೆದಿದ್ದವು.
ಈದಿನ ಓದುವ ಮಕ್ಕಳು ವಿಶೇಷವಾಗಿ ವಿದ್ಯಾಭಿವೃದ್ಧಿಗೆ ಸರಸ್ವತೀ ದೇವಿಯ ಪೂಜೆಯನ್ನು ಮಾಡಿದರು. ಪೂಜೆಗಳನ್ನು ಭಕ್ತಾದಿಗಳು ಅಮ್ಮನವರ ಅಲಂಕಾರಗಳನ್ನು ವೀಕ್ಷಿಸಿ ಭಕ್ತಿಶ್ರದ್ಧೆಯಿಂದ ಪೂಜೆಗಳನ್ನು ಮಾಡಿದರು. ಈ ಕಾರ್ಯಕ್ರಮಗಳೆಲ್ಲವೂ ಚತುರ್ವೇದ ಪಂಡಿತರು, ಪ್ರಖ್ಯಾತ ವಾಸ್ತು,ಜ್ಯೋತಿಷ್ಯಪಂಡಿತರು ಮತ್ತು ಶ್ರೀ ಸೀತಾರಾಮ ಆಶ್ರಮಮ್ ನ ಅಧ್ಯಕ್ಷರು ಆದ ಶ್ರೀ ನೇತಿ ಸೀತಾರಾಮಯ್ಯ ಶರ್ಮ ಸಿದ್ಧಾಂತಿಯವರ ನೇತೃತ್ವದಲ್ಲಿ ನಡೆಯುತ್ತಾ ಇವೆ. ಈ ಕಾರ್ಯಕ್ರಮಗಳೆಲ್ಲವೂ 19-10-2018 ವಿಜಯದಶಮಿಯವರೆಗೆ ನಡೆಯುತ್ತಾ ಇರುತ್ತವೆ ಎಂದು ಶ್ರೀ ನೇತಿ ಸೀತಾರಾಮಯ್ಯ ಶರ್ಮ ಸಿದ್ಧಾಂತಿಯವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ