ಹಿರಿಯೂರಿನ ದುರ್ಗಾಪರಮೇಶ್ವರಿ ದೇವಿಯ ಶರನ್ನವರಾತ್ರಿ ಉತ್ಸವ

ಹಿರಿಯೂರು:

      ನಗರದ ಸುಪ್ರಸಿದ್ಧ ನಗರದೇವತೆ ಶ್ರೀರಾಜಾದುರ್ಗಾಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ಉತ್ಸವ ಭಕ್ತಿಭಾವದಿಂದ ನಡೆಯುತ್ತಿದ್ದು ದೇವಿ ಮಹಾತ್ಮೆ ಗ್ರಂಥಪಾರಾಯಣ, ಲಲಿತಾ ಸಹಸ್ರನಾಮ, ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ದೇವಸ್ಥಾನ ಟ್ರಸ್ಟ್‍ನ ವ್ಯವಸ್ಥಾಪಕರು ತಿಳಿಸಿದ್ದಾರೆ.

      ಈ ಉತ್ಸವದ ಅಂಗವಾಗಿ ಅಕ್ಟೋಬರ್ 17ರಂದು ದುರ್ಗಾಷ್ಟಮಿ, 18ರಂದು ಆಯುಧಪೂಜೆ, 19ರಂದು ವಿಜಯದಶಮಿಯ ದಿನ ಅಮ್ಮನವರ ಬನ್ನಿ ಉತ್ಸವ ಇರುತ್ತದೆ. ಪ್ರತೀದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯುತ್ತಿದ್ದು ದುರ್ಗಾಮಾತೆಯ ಈ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಾಜಾದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link