ನೊಂದ ಕುಟುಂಬಗಳಿಗೆ ನೂತನ ಶೆಡ್‍ಗಳನ್ನು ಹಸ್ತಾಂತರಿಸಿದ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ

       ಚಳ್ಳಕೆರೆ ನಗರದ ಜನರ ಮನಸ್ಸು ಕಷ್ಟದಲ್ಲಿರುವ ಜನರಿಗೆ ಮರುಕಪಡುವುದರಲ್ಲಿ ಸದಾ ಮುಂದು. ಜ.2ರಂದು ನಡೆದ ಅಗ್ನಿ ಆಕಸ್ಮಿಕದಲ್ಲಿ ನೊಂದ ಕುಟುಂಬಗಳಿಗೆ ತಾಲ್ಲೂಕು ಆಡಳಿತ ಹಾಗೂ ನಗರಸಭೆ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಆದರೆ, ಈ ಭಾಗದ ಜನರ ಸಮಸ್ಯೆಗೆ ಇಲ್ಲಿನ ಮುಸ್ಲಿಂ ಸಮುದಾಯ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

        ಅವರು, ಸೋಮವಾರ ಇಲ್ಲಿನ ಲಿಡ್ಕರ್ ಬಡಾವಣೆ ಪಕ್ಕದಲ್ಲಿ ವೆಂಕಟೇಶ್ವರ ನಗರ ಅಗ್ನಿ ಆಕಸ್ಮಿಕ್ಕೆ ತುತ್ತಾದ ಕುಟುಂಬಗಳಿಗೆ ನಗರದ ಜಾಮೀಯ ಮಸೀದಿ ಅಧ್ಯಕ್ಷ ಅತಿಕ್ ಊರ್ ರೆಹಮಾನ್ ಅಕ್ಕಿಯನ್ನು ನೀಡಿದ ಹಿನ್ನೆಲೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಅವರನ್ನು ಅಭಿನಂದಿಸಿ ಮಾತನಾಡಿದರು. ನಗರಸಭೆ ಆಡಳಿತ ಈಗಾಗಲೇ ಅಗ್ನಿ ಆಕಸ್ಮಿಕಕ್ಕೆ ತುತ್ತಾದ ಕುಟುಂಬಗಳಿಗೆ ಸೂರು ಒದಗಿಸುವಲ್ಲಿ ಯಶಸ್ಸಿಯಾಗಿದೆ. ಈಗಾಗಲೇ 35 ತಾತ್ಕಾಲಿಕ ಶೆಡ್ ನಿರ್ಮಿಸಿದ್ದು, ಎಲ್ಲರಿಗೂ ಶೆಡ್‍ಗಳನ್ನು ನಿಯಮಬದ್ದವಾಗಿ ವಿತರಿಸಲಾಗುವುದು ಎಂದರು.

        ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ದುರಂತಕ್ಕೊಳಗಾದ ಕುಟುಂಬಗಳಿಗೆ ಕೇವಲ 25 ದಿನವಸಗಳ ಅವಧಿಯಲ್ಲೇ 12 ಲಕ್ಷ ವೆಚ್ಚದಲ್ಲಿ 36 ಶೆಡ್‍ಗಳನ್ನು ನಿರ್ಮಿಸಿ ಅವರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಅಗ್ನಿ ಅವಗಡದಲ್ಲಿ ನೊಂದ ಕುಟುಂಬಗಳು ಹಳೆಯದ್ದನ್ನೇಲ್ಲಾ ಮರೆತು ಹೊಸ ಜೀವನವನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು. ಶಾಸಕ ಟಿ.ರಘುಮೂರ್ತಿಯವರ ನಿರಂತರ ಪರಿಶ್ರಮದಿಂದ 35 ಕುಟುಂಬಗಳು ತಮ್ಮದೇಯಾದ ಸೂರಿನಲ್ಲಿ ವಾಸಿಸಬಹುದಾಗಿದೆ ಎಂದರು.

         ಶೆಡ್ ವಿತರಣಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ನಗರಸಭಾ ಎಇಇ ಶ್ಯಾಮಲಾ, ಸಹಾಯಕ ಇಂಜಿನಿಯರ್ ಲೋಕೇಶ್, ನಿರ್ಮಿತಿ ಕೇಂದ್ರದ ಎಇಇ ಮೂಡಲಗಿರಿಯಪ್ಪ, ವೀರೇಶ್, ಬೆಸ್ಕಾಂ ಎಇಇ ಶಿವಪ್ರಸಾದ್, ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ರಮೇಶ್‍ಗೌಡ, ವೈ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಟಿ.ಪ್ರಭುದೇವ್, ಆರ್.ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap