ಮಿಡಿಗೇಶಿ.
ಮೇ:17 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ¯ಕ್ಲೀಹಟ್ಟಿ ಗ್ರಾಮದ ಕರೇ ನಾಗಣ್ಣನ ಮೂರನೆಯ ಮಗಳು ಜ್ಯೋತಿಯನ್ನು ಇದೇ ತಾಲ್ಲೂಕಿನ ಬ್ರಹ್ಮ ಸಂದ್ರ ಗ್ರಾಮ ಪಂಚಾಯಿತಿಗೆ ಸೇರಿದ ದಿನ್ನೇಮೇಗಲಗೊಲ್ಲರಹಟ್ಟಿ ಗ್ರಾಮದ ಚಿಕ್ಕಣ್ಣನ ಒಂಭತ್ತನೇ ಮಗನಾದ ಕರಿಯಣ್ಣ (35)ನು ಕಳೆದ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು ಸದರಿಯವರಿಗೆ ಓರ್ವ ಗಂಡು ಮಗನಿರುತ್ತಾನೆ.
ಕರಿಯಣ್ಣನು ವಿವಾಹವಾದಾಗಿನಿಂದ ಬಹುತೇಕ ಲಕ್ಷೀಹಟ್ಟಿ ಗ್ರಾಮದಲ್ಲಿ ತನ್ನ ಮಾವನ ಮನೆಯಲ್ಲಿ ಸಂಸಾರ ಮಾಡಿಕೊಂಡು ವಾಸವಾಗಿದ್ದನೆಂದು ತಿಳಿದು ಬಂದಿದೆ, ಆದರೆ ಮೇ.17ರಂದು ಬೆಳಿಗ್ಗೆ ಕರಿಯಣ್ಣನು (ಮನೆಯಲ್ಲಿ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿರಬಹುದೆಂಬುದು ಲಕ್ಲೀಹಟ್ಟಿ ಗ್ರಾಮದವರ ಗುಸುಗುಸುಮಾತುಗಳು) ಇಲಿಪಾಷಾಣದ ಎರಡು ಬಾಟಲ್ ಗಳನ್ನು ತೆಗೆದುಕೊಂಡು ಮಿಡಿಗೇಶಿ ದೊಡ್ಡಕೆರೆಯ ಹಿಂಬದಿಯಲ್ಲಿನ ದಂಡಿ ಭೀಮಯ್ಯನ ಹಳೆಯ ಮಂಟಪದಲ್ಲಿ ಮಿರಿಂಡದೊಳಗೆ ಇಲಿ ಪಾಷಾಣ ಸೇರಿಸಿಕೊಂಡು ವಿಷಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಗಿರುತ್ತದೆ.
ಸದರಿ ಕರಿಣ್ಣನ ಸಾವಿನ ಬಗ್ಗೆ ಶವ ಪರೀಕ್ಷೆ ಬಂದು ನಂತರ ನಾವುಗಳು ದೂರು ನೀಡುವುದಾಗಿ ಮೃತನ ಸಂಭಂಧಿ ಸಹೋದರರು ಮೃತ ಶವದ ಸ್ಥಳದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸದರಿ ಕರಿಯಣ್ಣನು ಮೃತಗೊಂಡಿರುವ ಬಗ್ಗೆ ಮೃತನ ಪತ್ನಿ ಜ್ಯೋತಿಯು ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿರುತ್ತಾರೆ. ಮಿಡಿಗೇಶಿ ಪಿ.ಎಸ್.ಐ. ಹಾಗೂ ಸಿಬ್ಬಂಧಿಯವರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆಗೆ ಸರ್ಕಲ್ ಇನ್ಸ್ ಪೆಕ್ಟರ್ ರವರಿಗೆ ತಿಳಿಸಿರುತ್ತಾರೆ. ಶವಪರೀಕ್ಷೆಯನ್ನು ಮಧುಗಿರಿ ಪಟ್ಟಣದ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಿರುತ್ತಾರೆ. ಒಟ್ಟಾರೆ ಹೇಳಬೇಕೆಂದಲ್ಲಿ ಕರಿಯಣ್ಣನ ಸಾವಿಗೆ ನಿಖರ ಕಾರಣ ತಿಳಿದು ಬಂದಿರುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








