ಶಿಕ್ಷಣ ಇಲಾಖೆಯ ಮೌಲ್ಯವನ್ನು ಕಾಪಾಡುವಲ್ಲಿ ಶಿಕ್ಷಕರು ಸದಾ ಜಾಗೃತರಾಗಿ

ಚಳ್ಳಕೆರೆ

    ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಗುಣಾತ್ಮಕ ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದ್ದು, ಶಿಕ್ಷಕರು ನೀಡುವ ಶಿಕ್ಷಣ ಸಮಾಜವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ತಮ್ಮದೇಯಾದ ವಿಶೇಷ ಛಾಪನ್ನು ಮೂಡಿಸಿದ ಶಿಕ್ಷಕ ಕೆ.ಎನ್.ಶ್ರೀನಿವಾಸ್‍ಮೂರ್ತಿ ತಮ್ಮ ಕರ್ತವ್ಯದಲ್ಲಿ ಎಂದೂ ನಿರ್ಲಕ್ಷ್ಯೆ ತೋರಿದವರಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.

     ಅವರು, ಗುರುವಾರ ಇಲ್ಲಿನ ಗಾಂಧಿನಗರದ ಶಾರದಾ ವಿದ್ಯಾಸಂಸ್ಥೆಯಲ್ಲಿ ಕಳೆದ 30 ವರ್ಷಗಳಿಂದ ಶಿಕ್ಷಕ ವೃತ್ತಿಯನ್ನು ಮಾಡಿ ನಿವೃತ್ತರಾದ ಶಿಕ್ಷಕ ಕೆ.ಎನ್.ಶ್ರೀನಿವಾಸ್‍ಮೂರ್ತಿಯವರ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಅವರನ್ನು ಇಲಾಖೆಯ ಪರವಾಗಿ ಅಭಿನಂದಿಸಿ ಮಾತನಾಡಿದರು. ಪ್ರತಿಯೊಬ್ಬ ಶಿಕ್ಷಕನು ತನ್ನ ನಿವೃತ್ತಿಯನ್ನು ಹೊಂದಲೇಬೇಕಾಗುತ್ತದೆ.

     ಆದರೆ, ಈ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಗೌರವ ಸಂರಕ್ಷಣೆಗೆ ತಾನು ಮಾಡಿದ ಸೇವೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಇಂದು ಶಿಕ್ಷಣ ಇಲಾಖೆ ಬಹು ಎತ್ತರಕ್ಕೆ ಬೆಳೆದಿದ್ದು, ಉತ್ತಮ ಕೀರ್ತಿಯನ್ನು ಸಂಪಾದಿಸುವತ್ತ ಹೆಜ್ಜೆ ಇಟ್ಟಿದ್ದು, ಇದಕ್ಕೆ ಶಿಕ್ಷಕ ಪರಿಶ್ರಮವೇ ಕಾರಣವೆಂದರು. ಪ್ರತಿಯೊಬ್ಬ ಶಿಕ್ಷಕನೂ ಸಹ ಉತ್ತಮ ಆದರ್ಶಗಳನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ ನೀಡಬೇಕೆಂದರು.

       ನಿವೃತ್ತಿ ಹೊಂದಿದ ಶಿಕ್ಷಕ ಕೆ.ಎನ್.ಶ್ರೀನಿವಾಸ್ ಮಾತನಾಡಿ, ಗಾಂಧಿನಗರದ ಶಾರದ ಪ್ರೌಢಶಾಲೆಯಲ್ಲಿ ಕೆಲಸಕ್ಕೆ ಸೇರಿ ಅದೇ ಸಂಸ್ಥೆಯಲ್ಲಿ ನಾನು ನಿವೃತ್ತನಾಗುತ್ತಿದ್ದೇನೆ. 31 ವರ್ಷಗಳ ಕಾಲ ಸೇವೆ ಮಾಡುವ ಅವಕಾಶ ನನಗೆ ದೊರಕಿದೆ. ನಾನು ಈ ಅವಕಾಶವನ್ನು ಯಾವುದೇ ಲೋಪವಿಲ್ಲದೆ ಯಶಸ್ಸಿಯಾಗಿ ಪೂರೈಸಿದ್ದೇನೆ. ಶಿಕ್ಷಕ ಮತ್ತು ಶಿಕ್ಷಣ ಎರಡು ಸಮಾನವಾದ ರೀತಿಯಲ್ಲಿ ನಡೆದರೆ ಮಾತ್ರ ಈ ಇಲಾಖೆ ತನ್ನ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವೆಂದರು.

      ಮುಖ್ಯೋಪಾಧ್ಯಾಯ ನೀಲಕಂಠಪ್ಪ ಮಾತನಾಡಿ, ಕೆ.ಎನ್.ಶ್ರೀನಿವಾಸ್ ಮೂರ್ತಿ ಉತ್ತಮ ಶಿಕ್ಷಕರಾಗಿದ್ದು, ಸಮಯ ಪಾಲನೆಯಲ್ಲಿ ಸದಾ ಮುಂದೆ. ಎಂದೂ ಸಹ ತಮಗೆ ನೀಡಿದ ಜವಾಬ್ದಾರಿಯನ್ನು ಚಾಚೂತಪ್ಪದೆ ಪೂರೈಸುತ್ತಿದ್ದರು. ಅದರ್ಶಗಳನ್ನು ರೂಢಿಸಿಕೊಂಡ ಇವರು ನಿವೃತ್ತಿ ಹೊಂದುತ್ತಿದ್ದು, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

       ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಮಾರಣ್ಣ, ಕಾರ್ಯದರ್ಶಿ ಪಾಪಮ್ಮ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಶಿಕ್ಷಕರಾದ ಈಶ್ವರಪ್ಪ, ಬಸವರಾಜು, ರಾಜಣ್ಣ, ಬಿ.ವಿ.ಕೃಷ್ಣಮೂರ್ತಿ, ಶಿವಮಣಿ, ಪಂಕಜಾ, ಎಸ್.ಆರ್.ರಂಗಪ್ಪ, ವಸಂತ್, ಶ್ರೀನಿವಾಸ್, ಉಮೇಶ್, ಮುರುಗೇಶ್, ಪ್ರಕಾಶ್, ವೈಣಿಕ್ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link