ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಕ ಸಂಘಗಳು ಪ್ರಾಮಾಣಿಕವಾಗಿ ಸ್ಪಂಧಿಸುವಂತಾಗಬೇಕು

ಶಿರಾ:

       ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಸಂಘಗಳು ಸದಾ ಶಿಕ್ಷಕರ ಮನಸ್ಸಲ್ಲಿ ಉಳಿಯುತ್ತವೆ. ಶೈಕ್ಷಣಿಕ ಪ್ರಗತಿಗೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ನಿಸ್ವಾರ್ಥದಿಂದ ಉತ್ತಮ ಸೇವೆ ಸಲ್ಲಿಸುವ ಸಂಘಗಳ ಪ್ರಸ್ತುತ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ ಅಭಿಪ್ರಾಯಪಟ್ಟರು.

      ನಗರದ ಬಿಆರ್‍ಸಿ ಕಛೇರಿಯಲ್ಲಿ ಸೋಮವಾರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ‘ಶಾಲಾ ಪಂಚಾಂಗ` ಬಿಡುಗಡೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧನಿದ್ದು, ಶಿಕ್ಷಕರು ನನ್ನೊಂದಿಗೆ ಮುಕ್ತವಾಗಿ ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಶಿಕ್ಷಕರಿಗೆ ಕಾಲಕಾಲಕ್ಕೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕಚೇರಿಯಿಂದ ಒದಗಿಸಲಾಗುವುದು ಎಂದರು.

      ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎನ್.ಓಂಕಾರೇಶ್ವರ್ ಮಾತನಾಡಿ ದೇಶದ ಭದ್ರ ಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣದ ಉದ್ದೇಶ ಈಡೇರಲು ಎಲ್ಲಾ ಶಿಕ್ಷಕರೂ ಶ್ರಮಿಸಬೇಕಿದೆ. ಮಗು ತಾನು ಕಲಿತ ಶಿಕ್ಷಣ ಭವಿಷ್ಯದಲ್ಲಿ ಫಲ ನೀಡುವುದರಿಂದ ಎಲ್ಲಾ ಮಕ್ಕಳೂ ಸಹ ವಿದ್ಯಾವಂತರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಲು ಶಿಕ್ಷಕರಿಗೆ ಕರೆ ನೀಡಿರು.

     ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್ ಮಾತನಾಡಿ ಶಿಕ್ಷಕರ ಸಂಘವು ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದು, ಎಲ್ಲಾ ಶಿಕ್ಷಕರೂ ಸಹ ಪಂಚಾಂಗದಲ್ಲಿ ತಿಳಿಸಿರುವಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶೈಕ್ಷಣಿಕ ಗುಣಮಟ್ಟದ ಯಶಸ್ಸಿಗೆ ಶ್ರಮಿಸಲು ತಿಳಿಸಿದರು.

      ನಿವೃತ್ತಿ ಹೊಂದುತ್ತಿರುವ ಶಿಕ್ಷಕರಾದ ಜಯಣ್ಣ, ಮಂಗಳಗೌರಿ, ಗಿರಿಜಮ್ಮ, ಲಿಂಗರಾಜುರವರನ್ನು ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಎಸ್.ಕೆ.ದೇವಕುಮಾರ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ದೊಡ್ಡಣ್ಣ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೆ.ಪಿ.ದೇವರಾಜು, ಮಾರಕ್ಕ, ನಟರಾಜು, ನಾಗವೀಣಾ, ಅನಸೂಯಮ್ಮ, ತ್ರಿವೇಣಿ, ನಿರ್ದೇಶಕರಾದ ರಾಜಶೇಖರ್, ಸೌಭಾಗ್ಯ, ಓದೋಮಾರಪ್ಪ, ಬಿ.ಪಿ.ರಂಗನಾಥ್, ರವಿ, ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link