ಗುತ್ತಲ :
ಗುತ್ತಲ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಕ್ಕೆ ಪಟ್ಟಣದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಶ್ರೀರುದ್ರಮುನಿ ಶಿವಯೋಗಿಶ್ವರ ವೃತ್ತದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿಕೊಳ್ಳುವ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಸಂಭ್ರಮಾಚರಣೆಯಲ್ಲಿ ಭಾಗಿಯಾದ ಯುವಕರೆಲ್ಲರು ಮೋದಿ ಮೋದಿ ಎನ್ನುವಂತ ಜಯ ಘೋಷಣೆಯನ್ನು ಕೂಗಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಸಂತ ಕಳಸಣ್ಣನವರ, ವೀರಪಾಕ್ಷಪ್ಪ ಯಲಿಗಾರ, ಮಾಲತೇಶ ಶೀತಾಳ, ಬಸಣ್ಣ ನೀರಲಗಿ, ಮಂಜುನಾಥ ಮರಿಯಾನಿ, ನಾಗರಾಜ ಕೋಣನವರ, ಪ್ರಕಾಶ ಕೆಂಚಮಲ್ಲ, ಅಜ್ಜಪ್ಪ ಕುರವತ್ತಿ, ಅಜ್ಜಪ್ಪ ತರ್ಲಿ, ಅನುಸೂಯಾ ಯರವಿನತಲಿ, ಗುಡ್ಡಪ್ಪ ಆನ್ವೇರಿ, ಅಜ್ಜಪ್ಪ ಬನ್ನಿಮಟ್ಟಿ, ಗಫರ್‍ಸಾಬ ಹಾಲಗಿ, ಮಲ್ಲಪ್ಪ ಗಿರಿಯಪ್ಪನವರ, ಶಾಂತಪ್ಪ ಬಿಕ್ಕಿಯವರ, ನಾಗಪ್ಪ ಗಡದ, ಮಲ್ಲಿಕಾರ್ಜುನ ಮರಿಯಾನಿ, ಶಿವಕುಮಾರ ಮರಿಯಾನಿ, ರಾಜು ಹೂಗಾರ, ಆನಂದ ಇಟಗಿ, ಗುರುಪ್ರಸಾಧ ಸಾಗರ, ನವೀನ ದಾಮೋದರ, ಜಯರಾಜ ಅಂಗಡಿ, ಶಂಕ್ರಪ್ಪ ಕಾಗಿನೆಲ್ಲಿ, ಜಾವೀದ ಹಾಲಗಿ, ರಾಜು ಚನ್ನದಾಸರ, ರಾಜು ಬಡಿಗೇರ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.