ಹಾವೇರಿ :
ಸತತ ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಪಕ್ಷದ ಶಿವಕುಮಾರ ಉದಾಸಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ ಪಕ್ಷದ ಡಿಆರ್ ಪಾಟೀಲ ವಿರುದ್ಧ ಶಿವಕುಮಾರ ಉದಾಸಿ 1.40.882 ಮತಗಳ ಅಂತರದಿಂದ ಗೆಲುವಿನ ನಗೆ ಬಿರಿದರು. ಮೋದಿಯ ಅಲೆಗೆ ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿ ಪಕ್ಷಕ್ಕೆ ಬಹುಪರಾಕ ಎಂದಿದ್ದಾರೆ.
8 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಕ ಹಂತದಿಂದಲೇ ಮುಂದೆ ಇದ್ದ ಉದಾಸಿ ಎಂದೋ ಹಿಂದೆ ಬಿಳ್ಳಲೇ ಇಲ್ಲ. ಅಂಚೆ ಮತದಾನದಲ್ಲೂ ಹೆಚ್ಚಿನ ಅಂತರದ ಮಟ್ಟಿಗೆ ಗೆಲುವಿಗೆ ನಾಂದಿ ಹಾಡಿದರು. ಹ್ಯಾಟ್ರಿಕ್ ವಿಜಯ ಸಾಧಿಸಿ ಶಿವಕುಮಾರ ಉದಾಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನನ್ನ ಗೆಲುವಿಗೆ ಕಾರಣರಾದ ಹಾವೇರಿ ಲೋಕಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ,ಬಿಜೆಪಿ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ದೇಶದಲ್ಲಿ 5 ವರ್ಷಗಳ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ. 5 ವರ್ಷಗಳ ಜನಪರ ಕಾರ್ಯಕ್ರಮಗಳು ಮೋದಿ ಸರ್ಕಾರಕ್ಕೆ ಪುಷ್ಠಿ ನೀಡಿವೆ.ದೇಶದ ಸುಭದ್ರತೆ ಹಾಗೂ ಉತ್ತಮ ಆಡಳಿತಕ್ಕೆ ನರೇಂದ್ರ ಮೋದಿಯವರು ನಿರಂತರವಾಗಿ ಶ್ರಮವಹಿಸದ್ದರು. ನರೇಂದ್ರ ಮೋದಿಯವರು ದೇಶದ ಹಿತದೃಷ್ಠಿ ಒಳಿತು ಎಂದು ತಿಳಿದ ಪ್ರಜೆಗಳು ಬಿಜೆಪಿ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬಿಜೆಪಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳಿನ್ನು ಗೆಲ್ಲಿಸಿ ಶುಭ ಕೋರಿದ್ದಾರೆ ಎಂದರು.
ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರಿಗೆ ಯಾವ ಉದ್ದೇಶಕ್ಕೆ ನನ್ನನ್ನು ತೊಡಗಿಸಿಕೊಂಡು ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ.ಕ್ಷೇತ್ರದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ಹೆಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ.ಮಾಜಿ ಶಾಸಕ ಯುಬಿ ಬಣಕಾರ.ಸತೋಷಕುಮಾರ ಪಾಟೀಲ ಮತ್ತು ಮುಖಂಡರು ಪಾಲ್ಗೊಂಡಿದ್ದರು.