ಡಾ. ಶಿವಕುಮಾರ ಮಹಾಸ್ವಾಮೀಜಿ ಪುಣ್ಯಾರಾಧನೆ

ಹೊನ್ನಾಳಿ:

         ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಕ್ಷೇತ್ರದ ಧ್ರುವತಾರೆ. ದಶಕಗಳ ಕಾಲ ಅವರು ನಡೆಸಿಕೊಂಡು ಬಂದ ಜನ ಸೇವೆ ಅನನ್ಯ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ತರಳಬಾಳು ಸಮುದಾಯ ಭವನದ ನಿವೇಶನದ ಬಳಿ ಗುರುವಾರ ಹಮ್ಮಿಕೊಂಡ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಪುಣ್ಯಾರಾಧನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಡಾ. ಶಿವಕುಮಾರ ಮಹಾಸ್ವಾಮೀಜಿ ಯಾವುದೇ ಪವಾಡ ಮಾಡುವ ಮೂಲಕ ಹೆಸರು ಗಳಿಸಲಿಲ್ಲ. ಅವರ ನಿರಂತರ ಶೈಕ್ಷಣಿಕ ಸೇವೆ, ದಾಸೋಹದ ವಿಶಿಷ್ಟ ಗುಣಗಳು ಅವರತ್ತ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದವು. ಅಂಥ ಮಹಾನುಭಾವರು ಮತ್ತೆ ಅವತರಿಸಿ ನಮ್ಮನ್ನು ಉದ್ಧರಿಸುವಂತಾಗಲಿ ಎಂದು ಆಶಿಸಿದರು.

        ಖ್ಯಾತ ವಾಗ್ಮಿ, ಕುಂಬಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ ಉಪನ್ಯಾಸ ನೀಡಿದರು.ತಾಪಂ ಸದಸ್ಯ ಕೆ.ಎಸ್. ವಿಜಯಕುಮಾರ್, ಎಪಿಎಂಸಿ ನಿರ್ದೇಶಕ ದಿಡಗೂರು ಎ.ಜಿ. ಪ್ರಕಾಶ್, ಕುರುಬ ಸಮಾಜದ ಮುಖಂಡ ಎಂ.ಎಸ್. ಶೇಖರಪ್ಪ, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಕೆ.ಜಿ. ಬಸವರಾಜಪ್ಪ, ಮುಖಂಡರಾದ ಪಿ.ಜಿ. ಈಶ್ವರಪ್ಪಗೌಡರು, ಅರಕೆರೆ ಎ.ಎಲ್. ಅಮಿತ್, ಕೆ.ಜಿ. ಗಣೇಶ್, ಎ.ಕೆ. ನೀಲಪ್ಪ, ನಂದಿ ಸ್ವಾಮಿ, ಅಶೋಕ್ ಸ್ವಾಮಿ, ಮಲ್ಲೇಶ ಸ್ವಾಮಿ ಇತರರು ಮಾತನಾಡಿದರು.

      ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್. ರಂಜಿತ್, ಗ್ರಾಪಂ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಎಂ.ಸಿ. ಚಿಕ್ಕಪ್ಪ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಪರಮೇಶ್ವರಾಚಾರ್ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

       ಅರಬಗಟ್ಟೆ ಗ್ರಾಮದ ಸಾಧು ಲಿಂಗಾಯತ ಸಮಾಜ, ಹಾಲುಮತ ಸಮಾಜ, ತರಳಬಾಳು ಯುವ ವೇದಿಕೆ, ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಭಜನೆ ಹಾಗೂ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link