ಶಿವರಾಮೇಗೌಡ ಅವರು ಪ್ರಚಾರದ ವೇಳೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ :ಕವಿತಾಕೃಷ್ಣ

ತುಮಕೂರು

       ಮಂಡ್ಯದ ಹಾಲಿ ಸಂಸದರಾದ ಶಿವರಾಮೇಗೌಡ ಅವರು ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಬಲಿಜ ಸಮಾಜದ ಮುಖಂಡರು ಹಾಗೂ ನಟರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಸಮಾಜದ ಮುಖಂಡರಾದ ಕವಿತಾಕೃಷ್ಣ ತಿಳಿಸಿದರು.

       ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಲಿಜ ಸಮಾಜದಲ್ಲಿ ಅನೇಕ ಮುಕಂಡರು, ಸಮಾಜ ಸೇವಕರು ಸೇರಿದಂತೆ ಇತಿಹಾಸ ಸೃಷ್ಠಿಸಿದ ಅನೇಕ ರಾಜಮಹಾರಾಜರುಗಳು ಇದ್ದಾರೆ. ಅಂತಹ ಸಮಾಜದ ಈಗಿನ ನಾಯಕ ನಟರ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡರು ಜಾತಿನಿಂದನೆ ಮಾಡಿ ಮಾತನಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

      ಚುನಾವಣಾ ಪ್ರಚಾರದಲ್ಲಿ ಜಾತ್ಯಾತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದ ವಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯಾಗಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚಕಾರವೆತ್ತಿಲ್ಲ. ಮೌನಂ ಸಮ್ಮತಿ ಲಕ್ಮಣಂ ಎಂಬಂತೆ ಇವರ ಮೌನ ಪರೋಕ್ಷವಾಗಿ ಇದಕ್ಕೆ ಬೆಂಬಲ ನೀಡಿದಂತಿದೆ. ನಮ್ಮ ಜನಾಂಗ ನಾಡಿನಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದು, ಅವರ ಮತಗಳು ನಿರ್ಣಾಯಕವಾಗಿವೆ ಎಂದರು.

      ಬೆಂಗಳೂರಿನಿಂದ ಮಂಡ್ಯಕ್ಕೆ ಬರುತ್ತಾರೆ ಎಂದಿದ್ದ ಶಿವರಾಮೇಗೌಡರಿಗೆ ಮಂಡ್ಯ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ ಅವರು, ಬಲಿಜ ಜನಾಂಗವು ಶಿಕ್ಷಣದಲ್ಲಾಗಲಿ, ಉದ್ಯಮದಲ್ಲಾಗಲಿ, ವ್ಯಾಪಾರದಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿದೆ. ಸುಮಲತಾ, ದರ್ಶನ್ ಹಾಗೂ ರಾಕ್‍ಲೈನ್ ವೆಂಕಟೇಶ್ ಕೂಡ ಬಲಿಜ ಸಮಾಜದವರು.

      ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ದರ್ಶನ್‍ಗೆ ಅವಮಾನ ಆದರೆ ಬಲಿಜ ಜನಾಂಗಕ್ಕೆ ಅವಮಾನವಾದಂತೆ. ಕುಮಾರಸ್ವಾಮಿಯವರು ದರ್ಶನ್ ಮತು ಯಶ್‍ರನ್ನು ಕಳ್ಳೆತ್ತು ಎಂದು ಸಂಭೋದಿಸಿದ್ದಾರೆ. ಎಚ್.ಡಿ.ರೇವಣ್ಣ ಸುಮಲತರಾರವರನ್ನು ವಿಧವೆ ಎಂದು ಸಂಭೋದಿಸಿದ್ದಾರೆ ಇದು ಖಂಡನೀಯ. ಇದಕ್ಕೆ ಶಿವರಾಮೇಗೌಡರು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

       ಸಮಾಜದ ಮುಖಂಡ ಹೆಬ್ಬೂರು ರಂಗಯ್ಯ ಮಾತನಾಡಿ, ಶಿವರಾಮೇಗೌಡರು ಈ ಮುಂಚೆ ಯಾವ ಸ್ಥಿತಿಯಲ್ಲಿದ್ದರು, ಈಗ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತು ಮಾತನಾಡಬೇಕು. ಯಾವುದೇ ಜಾತಿ ಆಗಿರಲಿ ಜಾತಿ ಬಗ್ಗೆ ಮಾತನಾಡಬಾರದು. ಅವರಿಗೆ ತಕ್ಕಂತೆ ಗೌರವ, ಘನತೆ ಇರುತ್ತದೆ.

       ಆದರೆ ಶಿವರಾಮೇಗೌಡರು ದುರಹಂಕಾರದ ಮಾತುಗಳನ್ನಾಡಿದ್ದಾರೆ. ಈ ನಿಟ್ಟಿನಲ್ಲಿ ದೇವೇಗೌಡರ ವಿರುದ್ಧವಾಗಿ ಬಿಜೆಪಿ ಪಕ್ಷಕ್ಕೆ ಮತನೀಡಿ ಜಿಎಸ್ ಬಸವರಾಜು ಅವರಿಗೆ ಮತ ನೀಡುವಂತೆ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದರು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಲಿಜ ಯುವ ವೇದಿಕೆಯ ಟಿ.ಆರ್.ಸುರೇಶ್, ನಾರಾಯಣ, ಪ್ರಕಾಶ್, ಶ್ರೀನಿವಾಸ್, ಸತ್ಯನಾರಾಯಣ, ಎ.ಆರ್.ನಾರಾಯಣ್, ಪಾಲಿಕೆ ಸದಸ್ಯ ನವೀನ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

       ಪತ್ರಿಕಾಗೋಷ್ಠಿ ನಂತರ ನಗರದ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ 250ಕ್ಕೂ ಹೆಚ್ಚು ಮಂದಿ ಸಮಾಜದವರು ಶಿವರಾಮೇಗೌಡರ ವಿರುದ್ಧ ಘೋಷಣೆ ಕೂಗುವ ಮೂಲಕ ಖಂಡನೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಬಲಿಜ ವೇದಿಕೆ ಇತರೆ ಮುಖಂಡರಾದ ಗೀತಮ್ಮ, ಜಯರಾಮ್, ಶರಣ್, ದೀಪಕ್, ಹರೀಶ್, ದಿವಾಕರ್ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link