ಹಾವೇರಿ:
ನೀರಿನ ಸದ್ಬಳಕೆ ಹಾಗೂ ನೀರಿಗಾಗಿ ನಡೆಸಿದ ಹೋರಾಟದ ಸೂಕ್ಷ್ಮತೆಯನ್ನು ನೀರು ಕೊಡಿ ಬದುಕಲು ಬಿಡಿ ಕಿರುಚಿತ್ರದಲ್ಲಿ ನಿರ್ದೇಶಕ ವಿನಯ ಶಿಲ್ಪಿ ಎಳೆಎಳೆಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಹೇಳಿದರು.
ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ನೀರು ಕೊಡಿ ಬದುಕಲು ಬಿಡಿ ಕಿರುಚಿತ್ರದ ಪ್ರದರ್ಶನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಜ್ವಲಂತ ಸಮಸ್ಯೆಯನ್ನು ತೋರಿಸುವ ಪ್ರಯತ್ನ ಶ್ಲಾಘನಿಯವಾದುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವಕುಮಾರ ನೀರಲಗಿ ಇಂದು ಪರಿಶುದ್ಧವಾದ ಗಾಳಿ, ನೀರು ಹಾಗೂ ಆಹಾರ ಸಿಗುತ್ತಿಲ್ಲ. ಎಲ್ಲವೂ ಕಲಬೆರಕೆಯಾಗಿದೆ. ಮುಂದಿನ ಪೀಳಿಗೆಗೆ ಉತ್ತವi ಆರೋಗ್ಯಕರ ಬದುಕು ನೀಡಬೇಕಾದರೆ ಇಂದು ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಿ ಬೆಳೆಸಬೇಕೆಂದರು. ನಂತರ ಮಾಲತೇಶ ಕರ್ಜಗಿ ಮಾತನಾಡಿ, ಜಿಲ್ಲೆಯ ಪ್ರತಿಭಾವಂತ ಮಕ್ಕಳಿಗೆ ಇಂತಹ ಕಿರುಚಿತ್ರಗಳು ಉತ್ತಮ ವೇದಿಕೆಯಾಗಿದ್ದು ಚಲನಚಿತ್ರಕ್ಕೆ ಇಂದು ನಡೆಯುತ್ತಿರುವ ಮಕ್ಕಳ ಸಂದರ್ಶನದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಎಂದರು.
ವೇದಿಕೆಯಲ್ಲಿ ನಿರ್ದೇಶಕ ವಿನಯ ಶಿಲ್ಪಿ, ಮೌನೇಶ, ಸಂಗೀತ ನಿರ್ದೇಶಕ ಸತೀಶ ಮೌರ್ಯ, ಪ್ರಕಾಶ ಜೈನ, ಕೆ.ಸತೀಶ, ಕಲಾವಿದ ಆರ್.ಸಿ. ನಂದಿಹಳ್ಳಿ, ಬಸವರಾಜ ಟೀಕೆಹಳ್ಳಿ, ಮುತ್ತುರಾಜ ಹಿರೇಮಠ , ಆರ್. ಪ್ರವೀಣಕುಮಾರ ಹಟ್ಟಿಯವರ ವಸಂತಕುಮಾರ, ಅದೃಷ್ಟ ಪ್ರಮೋದ ಅನೇಕರಿದ್ದರು.