ಹೊಸದುರ್ಗ
ಸಂಸ್ಕಾರವಂತರಾದಗ ಜೀವಿತಾವಧಿಯಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಹುಣಸ ಘಟ್ಟದ ಶ್ರೀ ಗುರು ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ವ್ಯಾಖ್ಯಾನಿಸಿದರು.
ಪಟ್ಟಣದ ಮಾಜಿ ಪುರಸಭಾಅಧ್ಯಕ್ಷರಾದ ಹೆಚ್.ಪಿ.ಉಮೇಶ್‍ಅವರಧರ್ಮಪತ್ನಿ ಶರಣೆ ಶ್ರೀಮತಿಉಮೇಶ್‍ಅವರ ಲಿಂಗೈಕ್ಯರಾದ ಪ್ರಯುಕ್ತ ಪಟ್ಟಣದ ಶ್ರೀ ಗುರುಒಪ್ಪತ್ತಿನಸ್ವಾಮಿ ವಿರಕ್ತ ಮಠದಲ್ಲಿ ಬುಧವಾರ ಅವರ ಆತ್ಮ ಶಾಂತಿಗಾಗಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಸಾವು ಎಲ್ಲಿದೆ,ಯಾವಾಗ ಬರುತ್ತದೆಎಂಬುದನ್ನಯಾವ ವಿಜ್ಞಾನಿಯೂ ಸಹಾ ಕಂಡುಹಿಡಿದಿಲ್ಲ ಕಂಡು ಹಿಡಿಯಲೂ ಸಾದ್ಯವಿಲ್ಲಾ, ಹುಟ್ಟು ಅನಿವಾರ್ಯ,ಸಾವು ಖಚಿತಆದರೆ ಹುಟ್ಟು ಮತ್ತು ಸಾವಿನ ನಡುವೆಇರುವುದೆಜೀವನ. ನಮ್ಮ ಹುಟ್ಟು ಸಾವಿನ ನಡುವೆ ಸಾಧನೆ ಮುಖ್ಯಸಮಾಜಕ್ಕಾಗಿ ನಾವು ಮಾಡುವ ಸತ್ಕಾರ್ಯಗಳು ನಮ್ಮ ನಡುವೆ ಇವೆ, ಬರುವಾಗ ಬರಿಗೈಲಿ ಬಂದಿರುತ್ತೇವೆ ಮತ್ತು ಹೋಗುವಾಗ ಬರಿಗೈಲಿ ಹೋಗುತ್ತೇವೆಅದರ ನಡುವೆ ನಾವು ಸದ್ಗುಣಗಳನ್ನು ಸಂಪಾದಿಸಬೇಕು ಎಂದರು.
ಮಾಜಿ ಪುರಸಭಾ ಸದಸ್ಯೆ ಶ್ರೀಮತಿ ವಿಜಯಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿಡಾ:ಕೋಮಲಸ್ವಾಮಿ, ಅನಿತಾರಾಜೇಶ್, ಗೀತಮ್ಮ,ವಿದ್ಯಾವತಿ,ನಾಗಲಾಂಭಿಕಕಲ್ಮಠ್,ಕಲಾವತಿ ಹಾಗೂ ನಾಗವೇಣಿ ಮುಂತಾದವರು ಭಾಗವಹಿಸಿದ್ದರು. ಇದೇಕಾರ್ಯಕ್ರಮದಲ್ಲಿ ಹೊಸದುರ್ಗದಅಮೃತವರ್ಷಿಣಿಕಲಾತಂಡದವರಿಂದ ವಚನ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.