ರಾಜಶೇಖರ್‍ಗೆ ರೈತ ಸಂಘದಿಂದ ಶ್ರದ್ಧಾಂಜಲಿ

ಹುಳಿಯಾರು

         ಅನಾರೋಗ್ಯದಿಂದ ನಿಧನರಾದ ರೈತ ಸಂಘದ ಮುಖಂಡ ರಾಜಶೇಖರ್‍ಗೆ ರೈತಸಂಘದಿಂದ ಸಂತಾಪ ಸೂಚಿಸಲಾಯಿತು.
ಹೊಸಹಳ್ಳಿ ಚಂದ್ರಣ್ಣ ಬಣ್ಣದ ಜಿಲ್ಲಾಧ್ಯಕ್ಷೆ ಇಂದಿರಾ ಅವರ ಪತಿ ಹಾಗೂ ಹೊಸಹಳ್ಳಿ ಪಾಳ್ಯದ ಮಾಜಿ ಚೇರ್ಮನ್ ಕರಿಯಪ್ಪನವರ ಪುತ್ರರಾಗಿದ್ದ ರಾಜಶೇಖರ್ (46) ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಹೊಸಳ್ಳಿ ಚಂದ್ರಣ್ಣ ಬಣದ ರೈತರು ಶ್ರದ್ಧಾಂಜಲಿ ಸಭೆ ನಡೆಸಿ ಆತನ ಗುಣಗಾನ ಮಾಡಿದರು.

         ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಮಾತನಾಡಿ ರಾಜಶೇಖರ್ ರೈತರಿಗೆ ಸಂಬಂಧಿಸಿದಂತೆ ಹತ್ತು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಈ ಭಾಗದಲ್ಲಿ ರೈತ ಸಂಘದ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದರು. ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಆತ ಉತ್ತಮ ಸಂಘಟಕರಾಗಿದ್ದು ಆತನ ಸಂಘಟನೆಯಿಂದಾಗಿಯೇ ರೈತ ಸಂಘ ಬೃಹತ್ ಮಟ್ಟಕ್ಕೆ ಬೆಳೆದಿದೆ. ಬಾಲ್ಯ ಸ್ನೇಹಿತನಾಗಿದ್ದ ಆತನ ಅಗಲಿಕೆ ನಮ್ಮನ್ನು ಅಧೀರರನ್ನಾಗಿ ಮಾಡಿಸಿದೆ ಎಂದರು.

        ಜಿಲ್ಲಾಧ್ಯಕ್ಷ ಈಶ್ವರಪ್ಪ ಮಾತನಾಡಿ ನೀರಾವರಿ ಹೋರಾಟ, ತಾಲೂಕು ಹೋರಾಟ, ನೀರಾ ಹೋರಾಟ ಹೀಗೆ ಹತ್ತು ಹಲವಾರು ಹೋರಾಟಗಳಲ್ಲಿ ಸಾಥ್ ನೀಡುತ್ತಿದ್ದ ಇವರ ಅಗಲಿಕೆ ನಮ್ಮ ರೈತ ಸಂಘದ ಬಲ ಕುಂದಿಸಿದೆ ಎಂದರು.

          ಹುಳಿಯಾರು ಹೋಬಳಿ ಅಧ್ಯಕ್ಷ ಬೀರಲಿಂಗಯ್ಯ ಮಾತನಾಡಿ ಉತ್ತಮ ಸಂಘಟಕರಾಗಿದ್ದ ಆತ ಕಣ್ಮುಚ್ಚಿರುವುದು ಈ ಭಾಗದ ರೈತರಿಗೆ ತುಂಬಲಾರದ ನಷ್ಟವಾಗಿದ್ದು ಅಪಾರ ನೋವು ತಂದಿದೆ ಎಂದರು.

          ಶ್ರದ್ಧಾಂಜಲಿ ಸಭೆಯಲ್ಲಿ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಕರಿಯಪ್ಪ, ಜಯಲಕ್ಷ್ಮಮ್ಮ, ಗಂಗಪ್ಪ, ಹನುಮಂತರಾಜು, ರಹಮತ್ ಸಾಬ್, ನೀರಾ ಈರಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link