ಸಿದ್ದಗಂಗಾ ಶ್ರೀಗಳ ಬದುಕು ಮಾನವ ಜನಾಂಗಕ್ಕೆ ಶ್ರೇಷ್ಠ ಸಂದೇಶ 

ಕೊರಟಗೆರೆ
     ನಾಡಿನ ಅಸಂಖ್ಯಾತ ಮಕ್ಕಳಿಗೆ ಅನ್ನ, ಅಕ್ಷರ, ಆರೋಗ್ಯ ನೀಡಿದ ವಿಶ್ವರತ್ನ, ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರಸ್ವಾಮೀಜಿ ಅವರು ಬದುಕಿದ ರೀತಿಯೆ ಮಾನವ ಜನಾಂಗಕ್ಕೆ ಒಂದು ಶ್ರೇಷ್ಠ ಸಂದೇಶ ಹಾಗೂ ಉನ್ನತ ಮಾದರಿಯಾಗಿದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ.ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
    ಅವರು ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗ ವೀರಶೈವ ಸಮಾಜ ಹಮ್ಮಿಕೊಂಡಿದ್ದ ಡಾ.ಶ್ರೀ ಶಿವಕುಮಾರಸ್ವಾಮೀಜಿರವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತನಾಡಿದರು.  ಅನ್ನ, ಅಕ್ಷರ ಹಾಗೂ ಆರೋಗ್ಯ ಈ ಮೂರು ವಿಚಾರಗಳನ್ನು ತಮ್ಮ ಮಠದಲ್ಲಿ ವಿಶೇಷವಾಗಿ ಪೋಷಿಸಿದ ಶ್ರೇಯ ಸಿದ್ದಗಂಗಾ ಶ್ರೀಗಳಿಗೆ ಸಲ್ಲುತ್ತದೆ.  
    ಈ ನಿಟ್ಟಿನಲ್ಲಿಯೇ ಶ್ರೀಗಳು ದೇಶಾದ್ಯಂತ ತ್ರಿವಿಧ ದಾಸೋಹಿ ಎಂದೇ ಮನೆಮಾತಾಗಿದ್ದರು.  ಯಾವುದೇ ಜಾತಿ, ಮತ, ಧರ್ಮದ ಸಂಕೋಲೆಗಳಿಲ್ಲದೆ ಸಮಾಜದ ಎಲ್ಲಾ ವರ್ಗಗಳ ಸರ್ವತೋಮುಖ ಅಭಿವೃದ್ದಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ಸೇವೆ ಅಪಾರವಾಗಿದೆ.  ಕಾಯಕಮಾಡಿ ದುಡಿದು ತಿನ್ನು, ಜ್ಞಾನಕ್ಕಾಗಿ ಪುಸ್ತಕಗಳನ್ನು ಓದು ಎಂದು ಇಂದಿನ ಯುವ ಜನತೆಗೆ ಉತ್ತಮ ಸಂದೇಶವನ್ನು ನೀಡಿದ ಶ್ರೀಗಳ ಮಠವೆ ಒಂದು ವಿಶ್ವವಿದ್ಯಾನಿಲಯದಂತಿದ್ದು, ಬದುಕಿನ ಪಾಠವನ್ನು ಮಠದಲ್ಲಿ ಬೋಧಿಸುತ್ತಿದ್ದ ಅವರ ಮಾರ್ಗದರ್ಶನ ಇಂದಿನ ಯುವಜನಾಂಗಕ್ಕೆ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
     ಶ್ರೀಗಳ ಪ್ರಥಮ ಪುಣ್ಯ ತಿಥಿ ಅಂಗವಾಗಿ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಪ್ರದೀಪ್ ಕುಮಾರ್, ಕೆ.ಎನ್.ಲಕ್ಷ್ಮೀನಾರಾಯಣ್, ಎನ್.ಕೆ.ನರಸಿಂಹಪ್ಪ, ಮಾಜಿ ಸದಸ್ಯ ಪವನ್‍ಕುಮಾರ್, ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಪರ್ವತಯ್ಯ, ಸಮಾಜದ ಮುಖಂಡರುಗಳಾದ ಕೆ.ಪಿ.ರಾಜಣ್ಣ, ಶಿವಕುಮಾರ್, ಉಮೇಶ್, ರಾಜೇಶ್, ನಾಗರಾಜು, ರವಿಕುಮಾರ್, ರೇಣುಕಪ್ಪ, ಮಂಜುನಾಥ್, ಪ್ರಸನ್ನಕುಮಾರ್, ಚನ್ನವೀರಯ್ಯ, ವಾಸುದೇವ್. ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap