ಸಿರುಗುಪ್ಪ:
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್‍ಪರ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ ನಡೆಸಿ ಮಾತನಾಡಿದ ಅವರು ತಮ್ಮದೇ ಆದ ಶೈಲಿಯಲ್ಲಿ ಮಾತು ಪ್ರಾರಂಭಿಸಿದ ಅವರು ನೇರವಾಗಿ ನರೇಂದ್ರ ಮೋದಿಯವರೆ ದೇಶದ ಇತಿಹಾಸ ಗೊತ್ತೇನ್ರಿ, ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ನೀವೇನಾದರು ನೇರವಾಗಿ ಬಂದೂಕು ಹಿಡಿದು ಯುದ್ದಕ್ಕೆ ಹೋಗಿದ್ದೀರ, ನಮ್ಮ ದೇಶದ ಯೋಧರು ಪಾಲ್ಗೊಂಡಿದ್ದ ಸರ್ಜಿಕಲ್ ಸ್ಟ್ರೈಕ್‍ನ್ನು ತಮ್ಮ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದೀರ,
ಆದರೆ ನಿಮಗೆ ತಿಳಿದಿರಲಿ ಪಾಕಿಸ್ತಾನದ ಮೇಲೆ ಇದುವರೆಗೆ ನಡೆದ 4ಯುದ್ದಗಳು ನಡೆದ ಸಮಯದಲ್ಲಿ ಇದ್ದದ್ದು ಕಾಂಗ್ರೇಸ್ ಸರ್ಕಾರ, ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆ ಆರ್.ಎಸ್.ಎಸ್. ಮೋದಿ ಆರ್.ಎಸ್.ಎಸ್. ಆಗಿದ್ದು ಅವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ, ಬಾಂಗ್ಲದೇಶ ಸ್ವತಂತ್ರಗೊಳಿಸಿ ಉಳಿಸಿದ್ದು, ಇಂದಿರಾಗಾಂಧಿ, ಸದನದಲ್ಲಿ ತಮ್ಮ ಪಕ್ಷದ ವಾಜಪೇಯಿಯವರೆ ನೀವು ಸಾಮಾನ್ಯ ಮಹಿಳೆಯಲ್ಲ, ದುರ್ಗೆ ಎಂದು ಹೇಳಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ, ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್‍ಗಾಂಧಿ ಪ್ರಾಣ ತೆತ್ತಿದ್ದಾರೆ. ಇವರೆಲ್ಲರೂ ಕಾಂಗ್ರೇಸಿಗರು, ಆದರೆ ಬಿಜೆಪಿಯವರು ದೇಶಕ್ಕಾಗಿ ಪ್ರಾಣ ತೆತ್ತ ಉದಾಹರಣೆಗಳಿವೆಯೇ, ಕರೆಯದೇ ಪಾಕಿಸ್ತಾನಕ್ಕೆ ತೆರಳಿ ನವಾಜ್ ಶರೀಫ್‍ರನ್ನು ತಬ್ಬಿಕೊಂಡು ಬಿರಿಯಾನಿ ತಿನ್ನಲಿಕ್ಕೆ ಹೋಗಿದ್ದೀರಾ, ಈಗ ಪಾಕಿಸ್ಥಾನ ಎನ್ನುತ್ತಿರ ನಾಚಿಕೆಯಾಗಲ್ವ ಎಂದು ಜರಿದರು.
ಐದು ವರ್ಷ ತಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದೀರಿ, ಪ್ರಮಾಣ ವಚನ ಸ್ವೀಕರಿಸಿ ಅರ್ದಗಂಟೆಯಲ್ಲಿ ರಾಜ್ಯದಲ್ಲಿ ಹಸಿವಿನಿಂದ ಯಾರು ಮಲಗಬಾರದು ಎಂದು ಎರಡು ಹೊತ್ತಾದರೂ ಆಹಾರ ದೊರೆಯಬೇಕು ಎಂದು ನಾಲ್ಕು ಕೋಟಿ ಬಡವರಿಗೆ ಪಡಿತರ ಚೀಟಿ ನೀಡಿ ಒಬ್ಬರಿ 7ಕೇಜಿ ಅಕ್ಕಿ ಕೊಟ್ಟಿಲ್ವ, ರಾಜ್ಯದಲ್ಲಿ 500 ಇಂದಿರಾ ಕ್ಯಾಂಟೀನ್ ತೆರೆದು ಬಡವರಿಗಾಗಿ ಕಡಿಮೆ ಧರದಲ್ಲಿ ಕೇವಲ ರೂ.5ಕ್ಕೆ ಉಪಹಾರ, ಮದ್ಯಾಹ್ನ, ರಾತ್ರಿ ಊಟ ರೂ.10ಕ್ಕೆ ನೀಡಿದ್ದು, ಸಿರುಗುಪ್ಪ ದಲ್ಲಿ ಕೂಡ ಇಂದಿರಾ ಕ್ಯಾಂಟೀನ್ ಇದೆಯಲ್ವ ಎಂದು ಸಭಿಕರನ್ನು ಕೇಳಿದರು.
ಆದರೆ ಮೋದಿಯವರು ತಮ್ಮ ಗುಜರಾತ್ ರಾಜ್ಯದಲ್ಲಿ ದೇಶದಲ್ಲಿ ಒಂದು ಕೇಜಿ ಕೂಡ ಅಕ್ಕಿ ಕೊಡಲಿಲ್ಲ, ಬಡವರಿಗೆ ಊಟ ಕೊಡಲಿಲ್ಲ, ಕೇವಲ 5ವರ್ಷಗಳಲ್ಲಿ ಮನ್‍ಕೀಬಾತ್ ಎಂದು ಹೇಳುತ್ತಾ ಹೊರಟ ಇವರು ಮನ್‍ಕೀಬಾತ್‍ನಿಂದ ಹೊಟ್ಟೆ ತುಂಬುತ್ತಾ, ಕಾಮ್‍ಕೀಬಾತ್ ಮಾತಾಡು, ವಾಂಗಿಬಾತ್ ಬಗ್ಗೆ ಮಾತಾಡು ಆಗ ಮಾತ್ರ ಹಸಿದವರ ಹೊಟ್ಟೆ ತುಂಬುತ್ತದೆ. ಸ್ವಿಸ್‍ಬ್ಯಾಂಕ್‍ನಿಂದ ಕಪ್ಪು ಹಣವನ್ನು ನೇರವಾಗಿ ತಂದು ಪ್ರತಿಯೊಬ್ಬ ಪ್ರಜೆಗಳ ಖಾತೆಗೆ ರೂ.15ಲಕ್ಷ ಹಾಕುತ್ತೇನೆ ಎಂದಿದ್ದರು, 15ಪೈಸೆಯಾದರೂ ಹಾಕಿದ್ದಾರ.
ಮುಖ್ಯಮಂತ್ರಿಯಾದಾಗ ಅಂದಿನ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯದ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿಯವರಲ್ಲಿ ತೆರಳಿ ರೈತರಿಗಾಗಿ ಸಾಲ ಮನ್ನಾ ಮಾಡುವಂತೆ ಗೋಗರೆದರು ಆಗುವುದಿಲ್ಲ ಎಂದು ಹೇಳಿದರು. ಆದರೆ ರೈತರ ಸಂಕಷ್ಟವನ್ನು ಅರಿತು 50ಸಾವಿರ ರೂಪಾಯಿಗಳ ವರೆಗೂ ಸಹಕಾರಿ ಸಂಘಗಳ ಸಾಲಮನ್ನಾ ಮಾಡಿದ್ದೆ, ಇದರಿಂದ 8500ಕೋಟಿ ಸಹಕಾರ ಸಂಘಗಳಲ್ಲಿ ರೈತರ ಸಾಲ ಮನ್ನಾವಾಯಿತು.
ವಾಲ್ಮೀಕಿ, ಅಂಬೇಡ್ಕರ್, ದೇವರಾಜ ಅರಸ್, ಮೈನಾರಿಟಿ ಅಭಿವೃದ್ಧಿ ನಿಗಮಗಳಲ್ಲಿ ಪಡೆದಂತಹ ಸಾಲಮಾಡಿದ್ದೇನೆ. ಅದರಂತೆ ಮನ್‍ಮೋಹನ್ ಸಿಂಗ್‍ರವರು ಪ್ರಧಾನಿಯಾಗಿದ್ದಾಗ ದೇಶದಲ್ಲಿನ ರೈತರ 72ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆದರೆ ಯಡ್ಯೂರಪ್ಪನವರಿಗಾಗಲಿ, ಮೋದಿಯವರಿಗಾಗಲಿ, ಸಾಲಮನ್ನಾ ಮಾಡಲು ಆಗಲಿಲ್ಲ. ನಿಜಾಮರ ದಬ್ಬಾಳಿಕೆಯಿಂದ ಅತ್ಯಂತ ಹಿಂದುಳಿದ ಹೈ-ಕ ಪ್ರದೇಶದ 6ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವಂತೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪತ್ರ ಬರೆದರೂ ಅಂದಿನ ಬಿ.ಜೆ.ಪಿ. ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಆದರೆ ರಾಹುಲ್ ಗಾಂಧಿಯವರು ಗುಲ್ಬರ್ಗಾ ಸಭೆಯಲ್ಲಿ ಆಗಮಿಸಿದಾಗ ಮಾಡಿಕೊಂಡ ಮನವಿಯಂತೆ ಮನ್‍ಮೋಹನ್ ಸಿಂಗ್‍ರವರಿಗೆ ಹೇಳಿ 371ಜೆ ವಿಶೇಷ ಸ್ಥಾನಮಾನ ದೊರಕುವಂತೆ ಮಾಡಿದರು. ಆದರೆ ಎಸ್.ಟಿ.ಪಿ.ಎಸ್ ಯೋಜನೆಯಡಿಯಲ್ಲಿ ಕೇವಲ ಮೂರು ಸಾವಿರ ಕೋಟಿ ಅನುದಾನ ಮಾತ್ರ ಖರ್ಚಾಗುತ್ತಿತ್ತು.
ಕಾನೂನಿನಲ್ಲಿ ತಿದ್ದುಪಡಿಗೊಳಿಸಿ ಅನುದಾನವನ್ನು ಖರ್ಚುಮಾಡದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹಾಕುವುದದಾಗಿ ತಿಳಿಸಿದ ಕೂಡಲೆ ಇಂದು 30ಸಾವಿರ ಕೋಟಿ ಅನುದಾನ ಬಳಕೆಯಾಗುತ್ತಿದೆ. ಈ ಯೋಜನೆಯಿಂದಲೆ ಸಿ.ಸಿ.ರಸ್ತೆ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಜಾರಿಯಾಗುತ್ತಿವೆ. ಇನ್ನೂ 371ಜೆ ಜಾರಿಯಿಂದಾಗಿ ಹೈದ್ರಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ.4ಸಾವಿರ ಕೋಟಿ ವಿಶೇಷ ಅನುದಾನ ದೊರೆಯುತ್ತಿದೆ.
ಮಕ್ಕಳಿಗೆ ಹಾಲು, ಶೂ, ಶಾದಿಭಾಗ್ಯ, ಅನಿಲಭಾಗ್ಯ, ಕೃಷಿ ಭಾಗ್ಯ, ಮನಸ್ವಿನಿ, ಮಾತೃಪೂರ್ಣ, ಸಾಲಮನ್ನಾ ಸೇರಿದಂತೆ ಕೊಟ್ಟಮಾತಿನಂತೆ ನಡೆದುಕೊಂಡಿದ್ದೇನೆ. ನಾಯಕರ ಹಟ್ಟಿ, ಗೊಲ್ಲರ ಹಟ್ಟಿ, ಬಂಜಾರ ತಾಂಡಗಳನ್ನು ಲ್ಯಾಂಡ್ ರಿಪಾರ್ಮಗೆ ತಿದ್ದುಪಡಿಗೊಳಿಸಿ ಕಂದಾಯ ಗ್ರಾಮಗಳಾಗುವಂತೆ ವಾಸಿಸುವವನೆ ಮನೆಯ ಒಡೆಯ ಎಂದು ಕಾನೂನು ರೂಪಿಸಿದ್ದು ಸಿದ್ದರಾಮಯ್ಯ ಸರ್ಕಾರ.
ನಮ್ಮ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಬಿ.ಎಂ.ನಾಗರಾಜರವರು ಸಿರುಗುಪ್ಪಕ್ಕಾಗಿ ಏನು ಕೇಳಿದರು ಕೊಟ್ಟಿದ್ದೇನೆ, ಅದರಂತೆ ನೀವೆಲ್ಲಾಸೇರಿ ಕಾಂಗ್ರೇಸ್ ಅಭ್ಯರ್ಥಿಗೆ 20ಸಾವಿರ ಲೀಡ್ ಕೊಡಿಸಲೇ ಬೇಕು, ಬಿಜೆಪಿಯವರು ಬಿ.ಆರ್.ಅಂಬೇಡ್ಕರ್‍ರವರು ನಮಗೆಲ್ಲ ನೀಡಿದ ಸಾಮಾನತೆಯ ಸಂವಿಧಾನವನ್ನು ರದ್ದುಪಡಿಸಲು ಹೊರಟಿದ್ದು, ರಕ್ತಪಾತವಾಗುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ನಾನು ಮುಂದಿನ ಮುಖ್ಯಮಂತ್ರಿಯಾದಲ್ಲಿ ಪಡಿತರ ಚೀಟಿದಾರರಿಗೆ ಒಬ್ಬರಿಗೆ 10ಕೇಜಿ. ಅಕ್ಕಿ ಉಚಿತಾವಾಗಿ ನೀಡುತ್ತೇನೆ.
ರಾಹುಲ್‍ಗಾಂಧಿಯವರು ಪ್ರತಿಯೊಬ್ಬ ಬಡಕುಟುಂಬಕ್ಕೆ ತಿಂಗಳಿಗೆ ರೂ.6ಸಾವಿರದಂತೆ ವರ್ಷಕ್ಕೆ ರೂ.72ಸಾವಿರ ನೀಡುವ ಮಾತು ಕೊಟ್ಟಿದ್ದಾರೆ. ರಾಹುಲ್‍ಗಾಂಧಿಯವರು ಎಂದಿಗೂ ಕೊಟ್ಟ ಮಾತನ್ನು ತಪ್ಪಿಲ್ಲ. ಆದ್ದರಿಂದ ರಾಹುಲ್‍ಗಾಂಧಿಯವರನ್ನು ಪ್ರಧಾನಿ ಮಾಡಬೇಕಲ್ವೆ ಎಂದು ಸಭಿಕರನ್ನು ಕೇಳಿದರು.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕರಾಂ ಮಾತನಾಡಿ ಮೇಕ್‍ಇನ್ ಇಂಡಿಯಾ ಎನ್ನುವ ಮೋದಿಯವರು ಸರ್ಧಾರ್ ಬಲ್ಲಭಾಯಿ ಪಟೀಲ್ ಪ್ರತಿಮೆಯನ್ನು ತಂದಿದ್ದು ಚೀನದಿಂದ, ರಫೆಲ್ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಬಿಟ್ಟು ದೇಶದ ಹೆಚ್‍ಇಎಲ್ ಕಂಪನಿಗೆ ನೀಡಿದ್ದರೆ, ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಇದೇನಾ ದೇಶಾಭಿಮಾನವೆಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಿಗಿ, ಬಸವರಾಜರಾಯರೆಡ್ಡಿ, ಮಾಜಿ ಸಂಸದರಾದ ಶಿವರಾಮೆಗೌಡ, ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಬಿ.ಎಂ.ನಾಗರಾಜ, ಟಿ.ಎಂ.ಚಂದ್ರಶೇಖರಯ್ಯಸ್ವಾಮಿ, ಯುವ ಕಾಂಗ್ರೇಸ್ ರಾಜ್ಯಾದ್ಯಕ್ಷ ಬಸವನಗೌಡ ಬಾದರ್ಲಿ, ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ನಗರಸಭೆ ಅಧ್ಯಕ್ಷ ಸವಿತಾ ಅರುಣಪ್ರತಾಪರೆಡ್ಡಿ, ಮುಖಂಡರಾದ ಮುರಳಿ ಕೃಷ್ಣ, ಬೀರಳ್ಳಿ ರಾಮರೆಡ್ಡಿ, ವೆಂಕಟರಾಮರೆಡ್ಡಿ, ಮಲ್ಲಿಕಾರ್ಜುನ ಬಾಲಪ್ಪ, ಹೆಚ್.ಕೆ.ಮಲ್ಲಿಕಾರ್ಜುನಯ್ಯಸ್ವಾಮಿ, ತಿಮ್ಮಪ್ಪ, ರಾಜ್ಯ ಕಿಸಾನ್‍ಸೆಲ್ ಉಪಾಧ್ಯಕ್ಷ ಗೋಪಾಲರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರುದ್ರಗೌಡ, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೇಸ್ ಅಧ್ಯಕ್ಷ ಡಿ.ನಾಗರಾಜ, ತಾ.ಅಧ್ಯಕ್ಷ ಪವನ್‍ಕುಮಾರ್ ದೇಸಾಯಿ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಜಿ.ಕೃಷ್ಣಪ್ಪ, ಕೇಂದ್ರ ಪರಿಹಾರಸಮಿತಿಯ ಮಾಜಿ ಅಧ್ಯಕ್ಷ ಯು.ವೆಂಕೋಬ ಸೇರಿದಂತೆ ಇನ್ನಿತರರು ಇದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾ.ಬ್ಲಾಕ್ ಕಾಂಗ್ರೇಸ್ ವತಿಯಿಂದ, ಮುಸ್ಲಿಂ ಸಮುದಾಯದ ವತಿಯಿಂದ, ಹಾಲುಮತ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ 2018 ರ ವಿಧಾನ ಸಭಾ ಅಭ್ಯರ್ಥಿಯಾದ ಮುರುಳಿ ಅವರ ಬಾವ ಚಿತ್ರವಿರುವ ಹ್ಯಾಂಡ್ ಕಟೌಟ್‍ಗಳು ಬಹಳಷ್ಟು ಜನರ ಕೈಯಲ್ಲಿ ರಾರಾಜಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ