ಬೆಳ್ಳಿ ರಥ ನಿರ್ಮಾಣ ಕಾರ್ಯ ಪರಿಶೀಲನೆ

ಹೊನ್ನಾಳಿ:

         ಇಲ್ಲಿನ ಹಿರೇಕಲ್ಮಠದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಯ ರಾತ್ರಿ ಚನ್ನಪ್ಪ ಸ್ವಾಮಿಗಳ ಬೆಳ್ಳಿ ರಥೋತ್ಸವ ನೆರವೇರಿಸಲು ಉದ್ದೇಶಿಸಲಾಗಿದೆ.1 ಕ್ವಿಂಟಾಲ್ ತೂಕದ ಬೆಳ್ಳಿ ರಥವನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ತನ್ನಿಮಿತ್ತದ ಬೆಳ್ಳಿ ರಥ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಹಾಗಾಗಿ, ಹಿರೇಕಲ್ಮಠದ ಸಮಸ್ತ ಭಕ್ತಾದಿಗಳು, ಧರ್ಮ ಬಂಧುಗಳು ಈ ಉದ್ದೇಶಕ್ಕೆ ಅಗತ್ಯವಿರುವ ಬೆಳ್ಳಿಯನ್ನು ದಾನವಾಗಿ ನೀಡಬೇಕು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

         ಮುಂದಿನ ಮೂರು ತಿಂಗಳಲ್ಲಿ ಬೆಳ್ಳಿ ರಥ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪಂಚಪೀಠದ ಜಗದ್ಗುರುಗಳು, ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಭಕ್ತರ ಸಮ್ಮುಖದಲ್ಲಿ ಬೆಳ್ಳಿ ರಥ ಲೋಕಾರ್ಪಣ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕೆ ಭಕ್ತಾದಿಗಳು ಶೀಘ್ರವಾಗಿ ಬೆಳ್ಳಿ ದಾನ ನೀಡುವ ಮೂಲಕ ರಥ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link