ಕಳವು ಮಾಡುತ್ತಿದ್ದ ಆರೋಪಿ ಬಂಧನ

ಚನ್ನಗಿರಿ

     ದಾವಣೆಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನ ಗ್ರಾಮಗಳಲ್ಲಿ ಮನೆಗಳ ಬೀಗ ಹೊಡೆದು, ಅಂಚಿನಿಂದ ಕೆಳಗಿಳಿದು ಮನೆಯಲ್ಲಿನ ಹಣ ಹಾಗೂ ಬಂಗಾರ ದೋಚುತ್ತಿದ್ದ ಇಬ್ಬರು ಮನೆಗಳ್ಳರನ್ನು ಬಂಧಿಸುವಲ್ಲಿ ಹದಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

     ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಗ್ರಾಮದ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ ಮತ್ತು ಚನ್ನಗಿರಿ ತಾಲ್ಲೂಕಿನ ಹೊನ್ನನಾಯಕನಹಳ್ಳಿಯ ವಾಸಿ ಶಿವುರಾಜ ಎಂದು ಗುರುತಿಸಲಾಗಿದೆ. ಈ ಇಬ್ಬರು ಚನ್ನಗಿರಿ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಕಳವು ಮಾಡಲು ಯತ್ನಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.

      ಈ ಆರೋಪಿತರ ಮೇಲೆ ಹದಡಿ ಠಾಣೆಯಲ್ಲಿ 2 ಪ್ರಕರಣಗಳು, ಮಾಯಕೊಂಡ ಠಾಣೆಯಲ್ಲಿ 1ಪ್ರಕರಣ, ಬಸವಾಪಟ್ಟಣ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಚನ್ನಗಿರಿ ಠಾಣೆಯಲ್ಲಿ 03 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಿಗೆ ಸಂಬಂಧಿಸಿದಂತೆ 110 ಗ್ರಾಂ ಬಂಗಾರದ ಆಭರಣಗಳು, 650ಗ್ರಾಂ ಬೆಳ್ಳಿ ಆಭರಣಗಳು, ಹಾಗೂ 20 ಸಾವಿರ ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

     ಕೃತ್ಯಕ್ಕೆ ಬಳಸಲಾಗಿದ್ದ ಅಪೇ ಆಟೋ ಹಾಗೂ ಬಜಾಜ್ ಅಪಾಚಿ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದು 2 ಲಕ್ಷ ಬೆಲೆಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಚರಣೆಗೆ ಎಸ್‍ಪಿ ಆರ್.ಚೇತನ್, ಎಎಸ್‍ಪಿ ಟಿ.ಜೆ.ಉದೇಶ್ ನಿರ್ದೇಶನದಂತೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಕೆ.ಗಂಗಲ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಎಚ್.ಗುರುಬಸವರಾಜ ನೇತೃತ್ವದಲ್ಲಿ ಹದಡಿ ಪೊಲೀಸ್ ಠಾಣೆಯ ಪಿಎಸ್‍ಐ ರಾಜೇಂದ್ರನಾಯ್ಕ್, ಸಿಬ್ಬಂದಿಗಳಾದ ಎಎಸ್‍ಐ ಚನ್ನವೀರಪ್ಪ, ಅಣ್ಣಯ್ಯ, ಇಮ್ತಿಯಾಜ್, ಶಿವಕುಮಾರ್, ಸುನೀಲ್ ಕುಮಾರ, ಶ್ರೀನಿವಾಸ, ಸಿದ್ದೇಶ, ಚನ್ನಕೇಶವ, ಧನಂಜಯ ಅರಸ್, ಪರಶುರಾಮ್ ಪಾಲ್ಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link