ಬೆಂಗಳೂರು
ಯಾದಗಿರಿ, ಹುಮ್ನಾಬಾದ್, ಹೊಸಪೇಟೆ, ಲಿಂಗಸುಗೂರಿನಲ್ಲಿ ಖಾಸಗಿ – ಸಾರ್ವಜನಿಕ ಸಹಭಾಗಿತ್ವದಡಿ ಉತ್ಕಷ್ಟ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಸಮ್ಮತಿಸಿದೆ.
ರಾಜ್ಯ ಸರ್ಕಾರ ಮತ್ತು ಡೋಸೊ ಕಂಪೆನಿ ಸಹಯೋಗದಲ್ಲಿ ಈ ಕೇಂದ್ರಗಳನ್ನು ತೆರೆಯುತ್ತಿದ್ದು, ರಾಜ್ಯ ಸರ್ಕಾರ 20.7 ಕೋಟಿ ರೂ ಹಾಗೂ ಡೋಸೊ ಕಂಪೆನಿ 203 ಕೋಟಿ ರೂ ಹಣ ಒದಗಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋಮೊಬೈಲ್, ಏರೋಸ್ಪೇಸ್, ಇಂಡಸ್ಟ್ರೀ ಎಕ್ಪಿಪ್‍ಮೆಂಟ್ ಮತ್ತಿತರ ಕೋರ್ಸ್‍ಗಳಿಗೆ ಈ ಕೇಂದ್ರ ತರಬೇತಿ ನೀಡಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








