ಹಾಲಗಿ
ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಶೋಧನೆ ಹಾಗೂ ರೋಜಗಾರ ದಿನಾಚರಣೆಯನ್ನು ಆಚರಿಸಿದ ಕುರಿತು.
ಹೊಮ್ಮರಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಿಶೋಧನೆ ಹಾಗೂ ರೋಜಗಾರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಯೋಜನೆಯ ಬಗ್ಗೆ ತಾಲೂಕ ಪಂಚಾಯತಿಯ ತಾಲ್ಲೂಕ ಸಾಮಾಜಿಕ ಪರಿಶೋಧಕರಾದ ಸಂಪತ್ತಕುಮಾರ ಪೂಜಾರ ರವರು ಮಾತನಾಡಿ ರೋಜಗಾರ ದಿವಸವನ್ನು ಒಂದು ತಿಂಗಳಲ್ಲಿ ಕನಿಷ್ಠ ಒಂದು ಬಾರಿ ವಾರ್ಡ ಮಟ್ಟದಲ್ಲಿ ಆಯೋಜಿಸಬೇಕು ಮಾನ್ಯ ಮುಖ್ಯ ಮಂತ್ರಿಗಳ 21 ಕಾರ್ಯಕ್ರಮ ಜಾರಿಗೊಳಿಸಿದೆ ಮತ್ತು ಹಂತವಾರು ಪ್ರಗತಿಯಲ್ಲಿರುವ ವಿವಿದ ವಸತಿ ಯೋಜನೆ ಅಡಿ (ಮನೆ ನಿರ್ಮಾಣ ಕಾಮಗಾರಿಗೆ) ಪ್ರತಿಯೊಬ್ಬ ಫಲಾನುಭವಿಗೆ 90 ಮಾನವ ದಿನಗಳ ಮೊತ್ತವನ್ನು ಸಂಬದ ಪಟ್ಟ ಫಲಾನುಭವಿಗೆ ಪಾವತಿಸುವದರ ಬಗ್ಗೆ ತಿಳಿ ಹೆಳಿದರು ಹಾಗೂ ರೋಜಗಾರ ದಿವಸವನ್ನು ವಾರ್ಡನ ಶಾಲೆಗಳಲ್ಲಿ / ಗ್ರಾಮ ಪಂಚಾಯತ ಭವನಗಳಲ್ಲಿ /ಸ್ವಸಹಾಯ ಸಂಘಗಳಲ್ಲಿ, ರಾಜೀವಗಾಂಧೀ ಸೇವಾಕೇಂದ್ರಗಳಲ್ಲಿ ನಡೆಸಬಹುದಾಗಿದೆ ನಿಗದಿತ ಸಂಖ್ಯೆಯಲ್ಲಿ ಉದ್ಯೋಗದ ಬೇಡಿಕೆ ಇರುವಂತೆ ನೋಡಿಕೊಳ್ಳುಬೇಕೇಂದು ತಿಳಿಸಿದರು.
ಹಾಗೆಯೇ ಮುಂದುವರೆದು ತಾಲೂಕಿನ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾದ ಗಿರೀಶ ಜಿ ಬಿ ಮಾತನಾಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಮತ್ತು ಈ ಕೆಳಗಿನ ಕಾಮಗಾರಿಗಳಿಗೆ ಮೊದಲ ಆದ್ಯತೆಗಳನ್ನು ನೀಡಿ ಕಾಮಗಾರಿ ಆದೇಶ ಮತ್ತು ಎನ್.ಎಂ.ಆರ್. ಹಂಚಿಕೆ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು.
ಅ) ವೈಯಕ್ತಿಕ ಕಾಮಗಾರಿಗಳು
1) ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ, ದಾಳಿಂಬೆ, ಪೇರÀಲ, ದ್ರಾಕ್ಷಿ, ತಾಳೆ, ದಾಲ್‍ಚಿನ್ನಿ, ಲವಂಗ, ಮೆಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನÉಲ್ಲಿ ಇನ್ನು ಹಲವಾರು ಬೆಳೆಗಳು) 2) ರೇಷ್ಮೆ ಇಲಾಖೆಯ ಕಾಮಗಾರಿಗಳು 3) ಅರಣ್ಯ ಇಲಾಖೆಯ ಕಾಮಗಾರಿಗಳು4) ಕೃಷಿ ಅರಣ್ಯ ಕಾಮಗಾರಿಗಳು 5) ಕೃಷಿ ಹೊಂಡ 6) ಕಾಂಪೋಸ್ಟ್ ಪಿಟ್ 7) ಪ್ಯಾಕೇಜ್ ಕಾಮಗಾರಿಗಳು8) ಇಂಗು ಗುಂಡಿ 9) ಕೊಳುವೆ ಬಾವಿ ಮರಪೂರಣ ಘಟಕ 10) ಭೂ ಅಭಿವೃದ್ದಿ 11) ದನದದೊಡ್ಡಿ 12) ಗ್ರಾಮೀಣ ಗೋದಾಮು. 13) ಬೋಲ್ಡರ್ ಚೆಕ್ ಡ್ಯಾಂಗಳು 14) ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ 15) ಜಮೀನು
ಸುತ್ತಲು ತೋಟಗಾರಿಕಾ ಸಸಿಗಳ ನಡುವುದು
ಆ)ಸಮುದಾಯ ಕಾಮಗಾರಿಗಳು 1)ಕೆರೆ ಹೂಳೆತ್ತುವುದು 2) ಗೋ ಕಟ್ಟೆ ನಿರ್ಮಾಣ 3) ಹೊಸ ಕೆರೆ ನಿರ್ಮಾಣ 3) ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು 4) ಮಣ್ಣುಗಾಲುವೆ ನಿರ್ಮಾಣ 5) ಮಲ್ಟಿ ಆರ್ಚ ಚೆಕ್ ಡ್ಯಾಂ 6) ಗ್ರಾಮೀಣ ಗೋದಾಮು 7) ಸ್ಮಶಾನ ಅಭಿವೃದ್ದಿ 8) ಎಸ್.ಹೆಚ್.ಜಿ ಭವನ 9) ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ದಿ 10) ಸರ್ಕಾರಿ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ 11) ಬೌಲ್ಡರ್ ಚೆಕ್ಸ್ 12) ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ 13) ಅಂಗನವಾಡಿ ಕಟ್ಟಡಗಳು. 14) ಸರ್ಕಾರ ದಿಂದ ಆಯ್ದ ಶಾಲೆಗಳಿಗೆ ಶೌಚಾಲಯ ನಿರ್ಮಾಣ. 15) ಸಮುದಾಯ ದನದ ದೊಡ್ಡಿ ನಿರ್ಮಾಣ 16) ರೈತರ ಒಕ್ಕಣಿ ಕಣ 17) ಜಾಗದ ಲಭ್ಯತೆ ಇರುವ ಸರ್ಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ. (ಕನಿಷ್ಠ ತಾಲೂಕಿಗೆ 100 ಶಾಲೆಗಳಲ್ಲಿ)ಈ ಮೇಲೆ ತೋರಿಸಿದ ವೈಯಕ್ತಿಕ ಅಥವಾ ಸಮುದಾಯ ಕಾಮಗಾರಿಗಳನ್ನು ಹೊರತುಪಡಿಸಿ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಅನುಮೋದಿತ ಕಾಮಗಾರಿಗಳ ಪಟ್ಟಿಯಲ್ಲಿ (260) ಇರತಕ್ಕ ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ತೀಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಶ್ರೀಮತಿ.ಉಮಾ ಮತ್ತು ಮೆಲ್ವಚಾರಕರಾದ ಶಶಿಕಲಾ ಮರಡಿ ,ತಾಲ್ಲೂಕ ಇಂಜಿನಿಯರ್ ನವೀನ, ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಪಿ ಎಲ್ ಬಾಬರ ನಿರೂಪಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ