ಕಾಟೇನಹಳ್ಳಿ
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಟೇನಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮದಲ್ಲಿ ಕಾಟೇನಹಳ್ಳಿ 2018-19 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಿಶೋಧನೆ ಹಾಗೂ ರೋಜಗಾರ ಗ್ರಾಮ ಸಭೆ ಮಾಡಲಾಯಿತು.
ಈ ಯೋಜನೆಯ ಬಗ್ಗೆ ತಾಲೂಕ ಪಂಚಾಯತಿಯ ತಾಲ್ಲೂಕ ಸಾಮಾಜಿಕ ಪರಿಶೋಧಕರಾದ ಸಂಪತ್ತಕುಮಾರ ಪೂಜಾರ ರವರು ಮಾತನಾಡಿ ಸಾಮಾಜಿಕ ಪರಿಶೋಧನೆಯಲ್ಲಿ ಅನುಷಾನಗೊಂಡ ಕಾಮಗಾರಿಗಳನ್ನು ಮಂಡಿಸಿ ನಂತರ ಯೋಜನೆಯಡಿ ಇರುವ ವೈಯಕ್ತಿಕ ಕಾಮಗರಿಗಳ ಬಗ್ಗೆ ಗ್ರಾಮ ಸಭೆಯಲ್ಲಿ ತಿಳಿಸಲಾಯಿತು. ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು.
ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ ಬಡವರ ಜೀವನೋಪಾಯದ ಮಟ್ಟವನ್ನು ಸುಧಾರಿಸುವುದು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ.
ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ದಿನವೊಂದಕ್ಕೆ ರೂ.249/- ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಹದಿನೈದು ದಿನದೊಳಗೆ ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಕೂಲಿಯನ್ನು ಪಾವತಿಸಬೇಕು. ಅನಿವಾರ್ಯ ಸಂಧರ್ಭದಲ್ಲಿ ಗರಿಷ್ಟ 15 ದಿನಗಳಿಗೆ ಮೀರದಂತೆ ಕೂಲಿ ಪಾವತಿಸುವುದು ಕಡ್ಡಾಯ.
ತಪ್ಪಿದ್ದಲ್ಲಿ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆಯಲು ಅವಕಾಶವಿರುತ್ತದೆ. ಕೂಲಿ ಹಣ ನೇರವಾಗಿ ಇ.ಎಫ್.ಎಂ.ಎಸ್. ಮೂಲಕ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು.ಕೆಲಸ ಮಾಡುವ ಸ್ಥಳದಲ್ಲಿ 6 ವರ್ಷದೊಳಗಿನ 5ಕ್ಕಿಂತ ಹೆಚ್ಚು ಮಕ್ಕಳು ಬಂದಲ್ಲಿ ಮಕ್ಕಳ ನಿರ್ವಹಣೆಗೆ ಒಬ್ಬರಿಗೆ ಅವಕಾಶ ಹಾಗೂ ಅವರಿಗೂ ಆ ದಿನದ ಭತ್ಯೆ ನೀಡಲಾಗುವುದು.ಕೆಲಸವನ್ನು ಸಾದ್ಯವಾದಷ್ಟು ನಿಮ್ಮ ಗ್ರಾಮದ ಪರಿಮಿತಿಯಲ್ಲ್ಲಿಯೇ ಒದಗಿಸಲಾಗುವುದು 5 ಕಿಲೋಮೀಟರ್ ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಉದ್ಯೋಗ ಒದಗಿಸಿದಲ್ಲಿ ಸಾರಿಗೆ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕಾಗಿ ಕೂಲಿ ದರದ ಶೇಕಡಾ 10% ರಷ್ಟನ್ನು ಹೆಚ್ಚುವರಿಯಾಗಿ ನೀಡಲಾಗುವುದು.
ಉದ್ಯೋಗ ಚೀಟಿಯಲ್ಲಿ ನೊಂದಾಯಿತ ಕುಟುಂಬದ ಸದಸ್ಯರು ವಾರ್ಷಿಕ 100 ದಿನಗಳ ಕೆಲಸದ ಬೇಡಿಕೆಯನ್ನು ತಮ್ಮ ಇಚ್ಚೆಗನುಸಾರವಾಗಿ ಯಾವ ಸಮಯದಲ್ಲಾದರೂ ಪಡೆಯಬಹುದು. ನಮೂನೆ -6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ನಂತರ ಸೂಚಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಹಾಜರಾಗಿ ನಿಗಧಿಪಡಿಸಿದ ಕೆಲಸವನ್ನು ನಿರ್ವಹಿಸುವುದು. ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಇ.ಎಫ್.ಎಂಎಸ್ ಮೂಲಕ ವರ್ಗಾಯಿಸಲಾಗುವುದು. ವಿಕಲಚೇತನರಿಗೆ ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಕೆಲಸದ ಪ್ರಮಾಣದಲ್ಲಿ ಶೇಕಡಾ 50% ರಿಯಾಯಿತಿ ನೀಡಲಾಗುತ್ತದೆ ಎಂದು ಸಾಮಾಜಿಕ ಪರಿಶೋಧಕರು ತಿಳಿಸಿದರು.
ಹಾಗೆಯೇ ಮುಂದುವರೆದು ತಾಲೂಕಿನ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾದ ಗಿರೀಶ ಜಿ ಬಿ ಮಾತನಾಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಮತ್ತು ಈ ಕೆಳಗಿನ ಕಾಮಗಾರಿಗಳಿಗೆ ಮೊದಲ ಆದ್ಯತೆಗಳನ್ನು ನೀಡಿ ಕಾಮಗಾರಿ ಆದೇಶ ಮತ್ತು ಎನ್.ಎಂ.ಆರ್. ಹಂಚಿಕೆ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು.
ಅ) ವೈಯಕ್ತಿಕ ಕಾಮಗಾರಿಗಳು
1) ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ, ದಾಳಿಂಬೆ, ಪೇರÀಲ, ದ್ರಾಕ್ಷಿ, ತಾಳೆ, ದಾಲ್‍ಚಿನ್ನಿ, ಲವಂಗ, ಮೆಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನÉಲ್ಲಿ ಇನ್ನು ಹಲವಾರು ಬೆಳೆಗಳು) 2) ರೇಷ್ಮೆ ಇಲಾಖೆಯ ಕಾಮಗಾರಿಗಳು 3) ಅರಣ್ಯ ಇಲಾಖೆಯ ಕಾಮಗಾರಿಗಳು4) ಕೃಷಿ ಅರಣ್ಯ ಕಾಮಗಾರಿಗಳು 5) ಕೃಷಿ ಹೊಂಡ 6) ಕಾಂಪೋಸ್ಟ್ ಪಿಟ್ 7) ಪ್ಯಾಕೇಜ್ ಕಾಮಗಾರಿಗಳು8) ಇಂಗು ಗುಂಡಿ 9) ಕೊಳುವೆ ಬಾವಿ ಮರಪೂರಣ ಘಟಕ 10) ಭೂ ಅಭಿವೃದ್ದಿ 11) ದನದದೊಡ್ಡಿ 12) ಗ್ರಾಮೀಣ ಗೋದಾಮು. 13) ಬೋಲ್ಡರ್ ಚೆಕ್ ಡ್ಯಾಂಗಳು 14) ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ 15)
ಜಮೀನು ಸುತ್ತಲು ತೋಟಗಾರಿಕಾ ಸಸಿಗಳ ನಡುವುದು
ಆ)ಸಮುದಾಯ ಕಾಮಗಾರಿಗಳು 1)ಕೆರೆ ಹೂಳೆತ್ತುವುದು 2) ಗೋ ಕಟ್ಟೆ ನಿರ್ಮಾಣ 3) ಹೊಸ ಕೆರೆ ನಿರ್ಮಾಣ 3) ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು 4) ಮಣ್ಣುಗಾಲುವೆ ನಿರ್ಮಾಣ 5) ಮಲ್ಟಿ ಆರ್ಚ ಚೆಕ್ ಡ್ಯಾಂ 6) ಗ್ರಾಮೀಣ ಗೋದಾಮು 7) ಸ್ಮಶಾನ ಅಭಿವೃದ್ದಿ 8) ಎಸ್.ಹೆಚ್.ಜಿ ಭವನ 9) ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ದಿ 10) ಸರ್ಕಾರಿ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ 11) ಬೌಲ್ಡರ್ ಚೆಕ್ಸ್ 12) ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ 13) ಅಂಗನವಾಡಿ ಕಟ್ಟಡಗಳು. 14) ಸರ್ಕಾರ ದಿಂದ ಆಯ್ದ ಶಾಲೆಗಳಿಗೆ ಶೌಚಾಲಯ ನಿರ್ಮಾಣ. 15) ಸಮುದಾಯ ದನದ ದೊಡ್ಡಿ ನಿರ್ಮಾಣ 16) ರೈತರ ಒಕ್ಕಣಿ ಕಣ 17) ಜಾಗದ ಲಭ್ಯತೆ ಇರುವ ಸರ್ಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ. (ಕನಿಷ್ಠ ತಾಲೂಕಿಗೆ 100 ಶಾಲೆಗಳಲ್ಲಿ)ಈ ಮೇಲೆ ತೋರಿಸಿದ ವೈಯಕ್ತಿಕ ಅಥವಾ ಸಮುದಾಯ ಕಾಮಗಾರಿಗಳನ್ನು ಹೊರತುಪಡಿಸಿ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಅನುಮೋದಿತ ಕಾಮಗಾರಿಗಳ ಪಟ್ಟಿಯಲ್ಲಿ (260) ಇರತಕ್ಕ ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ತೀಳಿಸಿದರು.
ತಾಲೂಕ ಮಟ್ಟದ ಸಿ ಆರ್ ಪಿ ಗೂಡಗೂರ ಹಾಗೂ ತಾಲ್ಲೂಕ ಇಂಜಿನಿಯರ್ ರೇಣುಕಾ ಕೊಪ್ಪದ, ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಶ್ರಿಮತಿ ಶಿಲ್ಪಾ ಮುದ್ದಿ ನಿರೂಪಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ