ಹಾವೇರಿ :
ತಾಲೂಕಿನ ಅಗಡಿ ಗ್ರಾಮ ಪಂಚಾಯತಿಯ ಅಗಡಿ ಗ್ರಾಮದಲ್ಲಿ 2019-20 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ಹಾಗೂ 1ನೆ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ ಜರುಗಿತು.
ತಾಲೂಕ ಸಾಮಾಜಿಕ ಲೆಕ್ಕ ಪರಿಶೊಧಕರಾದ ಸಂಪತ್ತಕುಮಾರ ಪೂಜಾರ ಮಾತನಾಡಿ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು.ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ.
ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಇ.ಎಫ್.ಎಂಎಸ್ ಮೂಲಕ ವರ್ಗಾಯಿಸಲಾಗುವುದು. ವಿಕಲಚೇತನರಿಗೆ ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇಕಡಾ 50% ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ತಾಪಂ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಜಿಎಸ್ ಬೆನ್ನೂರ ಮಾತನಾಡಿ ಪ್ರತಿಯೊ ರೋಜಗಾರ ದಿವಸವನ್ನು ವಾರ್ಡನ ಶಾಲೆಗಳಲ್ಲಿ / ಗ್ರಾಮ ಪಂಚಾಯತ ಭವನಗಳಲ್ಲಿ /ಸ್ವಸಹಾಯ ಸಂಘಗಳಲ್ಲಿ, ರಾಜೀವಗಾಂಧೀ ಸೇವಾಕೇಂದ್ರಗಳಲ್ಲಿ ನಡೆಸಬಹುದಾಗಿದೆ. ನಿಗದಿತ ಸಂಖ್ಯೆಯಲ್ಲಿ ಉದ್ಯೋಗದ ಬೇಡಿಕೆ ಇರುವಂತೆ ನೋಡಿಕೊಳ್ಳುವುದು ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಮತ್ತು ಈ ಕೆಳಗಿನ ಕಾಮಗಾರಿಗಳಿಗೆ ಮೊದಲ ಆದ್ಯತೆಗಳನ್ನು ನೀಡಿ ಕಾಮಗಾರಿ ಆದೇಶ ಮತ್ತು ಎನ್.ಎಂ.ಆರ್. ಹಂಚಿಕೆ ಮಾಡಬೇಕೆಂದು ಎಂದು ಮಾಹಿತಿ ನೀಡಿದರು.
ತಾಲೂಕ ಮಟ್ಟದ ಹಿರಿಯ ತೋಟಗಾರಿಕಾ ಅಧಿಕಾರಿಗಳಾದ ಬಿ.ಎನ್. ಬರೆಗಾರ, ತಾಲೂಕಿನ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆ ಹಾವೇರಿ ಅಧಿಕಾರಿಗಳಾದ ವಾಲ್ಮೀಕಿ ನಾಯಕ್.ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರುಗಳು, ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಕುಮಾರಿ ಮಾಲಾಶ್ರೀ ಕೆಂಚನಗೌಡ್ರ.ಎಸ್ ಬಿ ಎಣ್ಣಿ.ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
