ಭಯೋತ್ಪಾದನಾ ಕೇಂದ್ರಗಳಾಗುತ್ತಿರುವ ಸಾಮಾಜಿಕ ಜಾಲತಾಣಗಳು..!!

ಬೆಂಗಳೂರು

      ಜನಸಮಾನ್ಯರಿಗೆ ಸುಲಭವಾಗಿ ದೊರೆಯುವ ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಕೇಂದ್ರಗಳಾಗಿ ಪರಿವರ್ತಿತವಾಗುತ್ತಿವೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರು ಆತಂಕ ವ್ಯಕ್ತಪಡಿಸಿದರು.

       ಸಾಮಾಜಿಕ ಜಾಲತಾಣಗಳು ಹೀರೋಗಳನ್ನು ಜಿರೋಗಳಾಗಿ, ಜಿರೋಗಳನ್ನು ಹೀರೋಗಳನ್ನಾಗಿ ಮಾಡಿ, ಸುಳ್ಳು ಸುದ್ದಿಗಳನ್ನು ಬಿತ್ತತ್ತಾ ಮಾಜದ ಸ್ವಾಸ್ಥ್ಯ ಕದಡುವ ವಿಷಯಗಳನ್ನು ಹರಡುತ್ತಾ ಸಮಾಜದ ಆರೋಗ್ಯವನ್ನು ಕೆಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಬಸವಸಮಿತಿ ಏರ್ಪಡಿಸಿದ್ದ ಬಸವ ಜಯಂತ್ಯೋತ್ಸವ ಸಮಾರಂಭದಲ್ಲಿ ಕಾಯಕರತ್ನ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣವಿರಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

       ದೇಶದಲ್ಲಿ 125 ಕೋಟಿ ರೂ. ಹೆಚ್ಚು ಜನರಿದ್ದಾರೆ. ಆದರೆ ಮನುಷ್ಯರಿಗೂ, ಜನರಿಗೂ ವ್ಯತ್ಯಾಸವಿದೆ. ಜನರೆಂದರೇ ಉಸಿರಾಡುವ ಪ್ರಾಣಿಗಳು, ಮನುಷ್ಯರೆಂದರೇ ವಿವೇಚನೆ, ಸಂಸ್ಕೃತಿ, ಧಾರ್ಮಿಕಕತೆ, ಸಂಪ್ರದಾಯಗಳನ್ನು ಮುಂದಿಟ್ಟುಕೊಂಡು ಉತ್ತಮ ಸಮಾಜವನ್ನು ಕಟ್ಟುತ್ತಾರೆ ಎಂದು ದೇಶದಲ್ಲಿ ಇಂತಹ ಮನುಷ್ಯರ ಸಂಖ್ಯೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

        ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ದೊಡ್ಡ ಶ್ರೀಮಂತರು ವೈದ್ಯಕೀಯ ವೆಚ್ಚದಲ್ಲಿ ರಿಯಾಯಿತಿ ಕೊಡಿ ಎಂದರೆ ನಿಜಕ್ಕೂ ನೋವಾಗುತ್ತದೆ. ಕೆಲ ಶ್ರೀಮಂತರು ಬಿಪಿಎಲ್ ಕಾರ್ಡ್ ಇಟ್ಟುಕೊಂಡು ಚಿಕಿತ್ಸೆ ಪಡೆದು ಉತ್ತಮ ಚಿಕಿತ್ಸೆ ಸಿಗಲಿಲ್ಲವೆಂದು ದೂರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಡಾ. ಸುಧಾಮೂರ್ತಿ ಪ್ರತಿಷ್ಟಾನದ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ 300 ಹಾಸಿಗೆಗಳ ಸಾಮಥ್ರ್ಯದ ಕಟ್ಟಡ ಕಾಮಗಾರಿ ಆರಂಭವಾಗಿದ್ದು, 2 ವರ್ಷದೊಳಗೆ ಪೂರ್ಣವಾಗಲಿದೆ ಎಂದರುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಬಸವಣ್ಣ ಎಂದರೆ ಕಾಯಕ, ಸಮಾನತೆ, ಬೆಳಕು ಸಮಭಾವ, ಪಾರದರ್ಶಕತೆ, ದಯೆ ಎಂದು ಬಣ್ಣಿಸಿದ್ದಾರೆ.

        ಸಮ ಸಮಾಜ ನಿರ್ಮಾಣಸಮಾಜದ ಅಂಕು-ಡೊಂಕುಗಳನ್ನು ತಮ್ಮ ವಚನಗಳ ಮೂಲಕ ಸರಿಪಡಿಸಿ, ನವಸಮಾಜವನ್ನು ನಿರ್ಮಿಸಿದರು ಎಂದರು. ಬಸವಣ್ಣನವರ ಜಯಂತಿ ಸಮಾರಂಭವನ್ನು ಆಚರಿಸುವುದಷ್ಟಕ್ಕೆ ಸೀಮಿತವಾಗಬಾರದು. ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದರು.ಸಮಾರಂಭದಲ್ಲಿ ಬೇಲಿಮಠಾಧ್ಯಕ್ಷ ಶಿವರುದ್ರ ಮಹಾಸ್ವಾಮೀಜಿ ಆರ್ಶೀವರ್ಚನ ನೀಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ 2020ರಲ್ಲಿ ವಿಶ್ವಮಠದ ಬಸವಜಯಂತಿಯನ್ನು ಅಮೆರಿಕಾದ ರಾಜಧಾನಿಯಾದ ವಾಷಿಂಗ್‍ಟನ್ ಟಿ.ಸಿ. ನಗರದಲ್ಲಿ ಆಯೋಜಿಸುವ ಸಂಬಂಧ ಬಸವ ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಪದ್ಮಶ್ರೀ ಸುಧಾಮೂರ್ತಿ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಸುನಂದಾ ಕುಲಕರ್ಣಿ ಅವರು ದಾಸೋಹ ರತ್ನ ಪ್ರಶಸ್ತಿ ಸ್ವೀಕರಿಸಿದರು. ಡಾ ಜೆ.ಎಸ್. ಖಂಡೆರಾವ್, ಹೆಚ್.ಎಂ. ಸ್ವಾಮಿ, ಬಿ.ಎನ್. ಬಸವರಾಜಪ್ಪ ಅವರಿಗೆ ಬಸವ ವಿಭೂಷಣ ಮತ್ತು ಶಿವಶಂಕರಪ್ಪ. ಎಫ್ ಅಕ್ಕಿ ಅವರಿಗೆ ಬಸವ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪುಸ್ತಕ ಬಿಡುಗಡೆ

        ಈ ಸಮಾರಂಭದಲ್ಲಿ ಲಿ.ಡಿ. ಪುಟ್ಟಸ್ವಾಮಯ್ಯನವರ ಐತಿಹಾಸಿಕ ಕಾದಂಬರಿ (ಎರಡು ಸಂಪುಟಗಳು) ವಚನ ಸಂಪುಟ- ಇಂಗ್ಲಿಷ್ ಭಾಷೆ ಮರುಮುದ್ರಣ. ಬಸವ ವಚನಾಮೃತ (ಹಿಂದಿ), ವಚನಾಮೃತ (ಮರಾಠಿ), ಅಕ್ಕ ಮಹಾದೇವಿ.ಕೆ ವಚನ್ (ಹಿಂದಿ), ಬಸವಧರ್ಮ, ಬಸವಣ್ಣನವರ ಆಯ್ದ 108 ವಚನಗಳ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link