30 ಕೆಜಿ ಗಾಂಜಾ ವಶ..!

ಬೆಂಗಳೂರು

     ತೆಲಂಗಾಣದಿಂದ ನಗರಕ್ಕೆ ಸಾಗಿಸಿಕೊಂಡು ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹೆಣ್ಣೂರು ಪೊಲೀಸರು 10 ಲಕ್ಷ ರೂ. ಮೌಲ್ಯದ 30 ಕೆಜಿ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

    ಬೆನ್ಸ್‌ಸನ್ ಟೌನ್‌ನ ಖಿಜರ್ (39), ಕೆಜಿ ಹಳ್ಳಿಯ ಶೇಖ್ ಇದ್ರೀಸ್ (36) ಹಾಗೂ ಫೈರೋಜ್ (25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 30 ಕೆಜಿ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಅವರು ತಿಳಿಸಿದ್ದಾರೆ.

    ಆರೋಪಿಗಳು ಹೈದಾರಾಬಾದ್‌ನಿಂದ ಗಾಂಜಾವನ್ನು ರೈಲಿನಲ್ಲಿ ಟ್ರಾಲಿ ಬ್ಯಾಗ್‌ನಲ್ಲಿಟ್ಟುಕೊಂಡು ನಗರಕ್ಕೆ ತಂದು ಚಿಕ್ಕಚಿಕ್ಕ ಪ್ಯಾಕೆಟ್‌ಗಳಾಗಿ ಕಟ್ಟಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 10, 20, 100, 200, 300 ಗ್ರಾಂ. ಗಳವರೆಗೆ ಪ್ಯಾಕೆಟ್‌ಗಳಾಗಿ ಕಟ್ಟಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಹಲವು ದಿನಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದು, ಗಿರಾಕಿಯೊಬ್ಬ ನೀಡಿದ ಮಾಹಿತಿ ಆಧರಿಸಿ, ಹೆಣ್ಣೂರಿನ ಹೊರವರ್ತುಲ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡು, ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ