ಬ್ಯಾಂಕ್‍ನಲ್ಲಿ ಕೈ ಕೊಡುತ್ತಿರುವ ಸಾಫ್ಟ್‍ವೇರ್: ಗ್ರಾಹಕರ ಪರದಾಟ

ತುಮಕೂರು:

    ಇಲ್ಲಿನ ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳಲ್ಲಿ ಸಾಫ್ಟ್‍ವೇರ್ ಯಂತ್ರಗಳು ಪದೇ ಪದೇ ಕೈಕೊಡುತ್ತಿರುವ ಕಾರಣ ಗ್ರಾಹಕರು ಪರದಾಡುವಂತಾಗಿದೆ.

    ವಿವೇಕಾನಂದ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿರುವ ಪಾಸ್‍ಪುಸ್ತಕ ಎಂಟ್ರಿ ಮಾಡುವ ಸಾಫ್ಟ್‍ವೇರ್ ಯಂತ್ರ ಕೆಟ್ಟು ಹೋಗಿ ತಿಂಗಳುಗಳೇ ಕಳೆದಿವೆ. ಬ್ಯಾಂಕ್ ಒಳಗೆ ಇರುವ ಯಂತ್ರದಲ್ಲಿ ಕೆಲವೊಮ್ಮೆ ಎಂಟ್ರಿ ಮಾಡಿಕೊಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಲ್ಲಿಯೂ ಸಹ ಆ ಕೆಲಸ ನಡೆಯುತ್ತಿಲ್ಲ.

    ಬ್ಯಾಂಕ್ ಸಿಬ್ಬಂದಿಗಳು ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಗ್ರಾಹಕರಿಗೆ ಹೇಳುತ್ತಲೇ ಇದ್ದಾರೆ. ಗ್ರಾಹಕರು ಬ್ಯಾಂಕ್‍ಗೆ ತಿರುಗುವುದೇ ಒಂದು ದೊಡ್ಡ ಕೆಲಸವಾಗಿದೆ. ಸಾಫ್ಟ್‍ವೇರ್‍ಗಳು ರಿಪೇರಿಯಾಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಅಲ್ಲಿನ ತಾಪತ್ರಯ ಅಷ್ಟೇ ಹೇಳಿ ಕಳುಹಿಸುತ್ತಿದ್ದಾರೆ. ಸಾಫ್ಟ್‍ವೇರ್ ರಿಪೇರಿಯಾಗುವುದು ಯಾವಾಗ ಎಂಬ ಮಾಹಿತಿಯೂ ಸಿಗುತ್ತಿಲ್ಲ.

    ಬೇರೆ ಬೇರೆ ಕಾರಣಗಳಿಗಾಗಿ ಬ್ಯಾಂಕ್ ಪಾಸ್ ಪುಸ್ತಕಗಳಿಗೆ ದೈನಂದಿನ, ಮಾಸಿಕ ವ್ಯವಹಾರದ ನೋಂದಣಿ ಅಗತ್ಯವಿರುತ್ತದೆ. ಆದಾಯ ತೆರಿಗೆ ಪಾವತಿಸುವವರು, ಸಂಘಸಂಸ್ಥೆಗಳು, ಸಾಲ ಇತ್ಯಾದಿ ಮಾಡಿಕೊಂಡಿರುವವರು ತಮ್ಮ ವ್ಯವಹಾರಗಳಿಗಾಗಿ ಅಗತ್ಯವಾಗಿ ಪಾಸ್ ಪುಸ್ತಕದ ಲೆಕ್ಕ ತೋರಿಸಬೇಕಾಗಿರುತ್ತದೆ. ಆದರೆ ಇದು ಸಾಧ್ಯವಾಗದೆ ಗ್ರಾಹಕರು ಕೈಹಿಸುಕಿಕೊಳ್ಳುವಂತಾಗಿದೆ. ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಹಕರ ಬವಣೆ ನೀಗಿಸುವಂತೆ ಹಲವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap