ದೆಹಲಿ:
ಸುಪ್ರೀಂ ಕೋರ್ಟ್ ಮುಂಬೈನಲ್ಲಿ ಕೆಲ ಷರತ್ತುಗಳ ಮೇರೆಗೆ ಡಾನ್ಸ್ ಬಾರ್‌ಗಳನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸಿದೆ.
2005ರಿಂದ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್‌ಗಳಿಗೆ ಪರವಾನಗಿ ನೀಡದಿರುವುದನ್ನು ಪ್ರಸ್ತಾಪಿಸಿ, ಡ್ಯಾನ್ಸ್ ಬಾರ್‌ಗಳನ್ನು ನಿಯಂತ್ರಿಸಬಹುದೇ ಹೊರತು ನಿಷೇಧಿಸಲು ಸಾಧ್ಯವಿಲ್ಲ. ಮದ್ಯ ಮತ್ತು ನೃತ್ಯ ಒಟ್ಟಿಗೆ ಇರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಸರ್ಕಾರ ವಿಧಿಸಿದ್ದ ಕಠಿಣ ನಿಯಮಗಳನ್ನು ಗುರುವಾರ ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪಿನ ಬಳಿಕ ಮುಂಬೈನಲ್ಲಿ ಇನ್ಮುಂದೆ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಡಾನ್ಸ್ ಬಾರ್ ಗಳು ಕಾರ್ಯ ನಿರ್ವಹಿಸಬಹುದಾಗಿದೆ.
ತೀರ್ಪಿನೊಂದಿಗೆ ಕೆಲ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಬಾರ್ ನಲ್ಲಿ ಯವುದೇ ಅಶ್ಲೀಲತೆ ಇರಬಾರದೆಂದು ಆದೇಶಿಸಿದೆ. ಇಹೀಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲಿರುವ 3 ವರ್ಷದ ಶಿಕ್ಷೆಯನ್ನು ಮುಂದುವರೆಸಿದೆ. ಅಲ್ಲದೇ ಡಾನ್ಸ್ ಬಾರ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಎಂದು ತಿಳಿಸಿದೆ.
ಸುಪ್ರೀಂ ಆದೇಶದ ಪ್ರಮುಖಾಂಶಗಳು :
1) ಧಾರ್ಮಿಕ ಸ್ಥಳ ಹಾಗೂ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇರಬೇಕೆಂದು ರಾಜ್ಯ ಸರ್ಕಾರ ವಿಧಿಸಿದ್ದ ಷರತ್ತನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
2)ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯಗಾರ್ತಿಯರಿಗೆ ಟಿಪ್ಸ್ ಕೊಡಬಹುದು, ಆದರೆ ನಗದು ಹಣವನ್ನುಸುರಿಯುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
3)ಡ್ಯಾನ್ಸ್ ಬಾರ್ ಗಳ ಸಮಯವನ್ನು ಮಹಾರಾಷ್ಟ್ರ ಸರ್ಕಾರ ಸಂಜೆ 6ಗಂಟೆಯಿಂದ ರಾತ್ರಿ 11.30ರವರೆಗೆ ಎಂಬ ಷರತ್ತನ್ನು ಕೋರ್ಟ್ ಎತ್ತಿಹಿಡಿದಿದೆ.
4)ಬಾರ್ ಕೋಟೆ ಮತ್ತು ಡ್ಯಾನ್ಸ್ ಕೋಣೆ ಪ್ರತ್ಯೇಕವಾಗಿರಬೇಕೆಂಬ ಸರ್ಕಾರದ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ.
5) ಡಾನ್ಸ್ ಬಾರ್‌ಗಳಲ್ಲಿ ಇನ್ಮುಂದೆ ಏರಿಯಾ ಹಾಗೂ ಗ್ರಾಹಕರ ನಡುವೆ ಯಾವುದೇ ಅಂತರವಿರುವುದಿಲ್ಲ. ಈ ಹಿಂದೆ ಸರ್ಕಾರವು ಗ್ರಾಹಕರು ಹಾಗೂ ಡಾನ್ಸರ್ ಗಳ ನಡುವೆ 3 ಅಡಿ ಎತ್ತರದ ಗೋಡೆ ನಿರ್ಮಿಸಲು ಆದೇಶಿಸಿತ್ತು. ಈ ಮೂಲಕ ಗ್ರಾಹರು ನೃತ್ಯ ಆಸ್ವಾದಿಸಬಹುದಾಗಿತ್ತಾದರೂ, ಡಾನ್ಸರ್‌ಗಳನ್ನು ಮುಟ್ಟುವ ಅವಕಾಶವಿರಲಿಲ್ಲ.
6) ಖಾಸಗಿತನಕ್ಕೆ ಧಕ್ಕೆ ಬರುವ ಕಾರಣದಿಂದ ಡ್ಯಾನ್ಸ್ ಬಾರ್ ಒಳಗೆ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವನ್ನೂ ಕೂಡಾ ಕೋರ್ಟ್ ರದ್ದುಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
