ಪಾವಗಡ :
ಶುಕ್ರವಾರ ಶಿಕ್ಷಣ ಸಚಿವರಾದ ಎಸ್. ಸುರೇಶ್‍ಕುಮಾರ್ ಶಾಲಾ ವಾಸ್ತವ್ಯ ಕಾರ್ಯಕ್ರಮದಲ್ಲಿ ರಾತ್ರಿ ಶಾಲೆಯಲ್ಲಿ 11 ಗಂಟೆಗೆ ಮಲಗಿದ್ದು ಬೆಳಿಗ್ಗೆ 7 ಘಂಟೆಗೆ ಎನ್. ಅಚ್ಚಮ್ಮನಹಳ್ಳಿ ಗ್ರಾಮದ ಸಮೀಪ ಇರುವ ಸೋಲಾರ್ ಪಾರ್ಕ ನಲ್ಲಿ ವಾಕಿಂಗ್ ಮಾಡಿದ ನಂತರ ಶಾಲೆಯಲ್ಲಿ ತಿಂಡಿ ಸೇವಿಸಿ ಅಲ್ಲಿಂದ 2015 ರಲ್ಲಿ ನಕ್ಸಲ್ ರ ಹಟ್ಟಹಾಸದಿಂದ 7 ಪೋಲೀಸರು ಮತ್ತು ಒರ್ವ ಸಾವನ್ನಪ್ಪಿದ್ದ ಪೋಲೀಸ್ ಹತ್ಯಾಕಾಂಡದ ಗ್ರಾಮವಾದ ವೆಂಕಟಮ್ಮನಹಳ್ಳಿ ಶಾಲೆಗೆ ಬೇಟಿ ನೀಡಿ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ನಂತರ ಅಲ್ಲಿಂದ ಕ್ಯಾತಗಾನಚೆರ್ಲು , ಗ್ರಾಮದ ಶಾಲೆಯಲಲಿನ ವಿದ್ಯಾರ್ಥಿಗಳ ಸಮಸ್ಯೆಯನನು ಆಲಿಸಿ ತದ ನಂತರ ವಳ್ಳೂರು ಗ್ರಾಮದಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಪೋಷಕರ ಜೊತೆ ಸಂವಾದ ನಡೆಸಿದರು, ಈ ವೇಳೆ ವಳ್ಳೂರು ಪ್ರೌಡಶಾಲೆಗೆ ವಿಜ್ಞಾನ, ಗಣಿತ, ಮತ್ತು ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ ಎಂದು ಸಚಿವರಲ್ಲಿ ಮನವಿ ಮಾಡಿಕೋಂಡರು, ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ಬಳಿಗೆ ಸಚಿವರು ತೆರಳಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು ,ಇದೇ ವೇಳೆ ಗ್ರಾಮಸ್ಥರು ,ಶಿಕ್ಷಕರ ಕೊರತೆ ,ಶಿಥಿಲವಾದ ಶಾಲಾ ಕಟ್ಟಡ ದುರಸ್ತಿಗೊಳಿಸಬೇಕು ಎಂದ ನಿವೇದಿಸಿದರು.
ಅಂತಿಮವಾಗಿ ತಿರುಮಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗವಹಿಸಿ, ಸೋಲಾರ್ ಪಾರ್ಕ್ ನಿರ್ಮಾಣದಿಂದ ಈ ಗ್ರಾಮವು ದೇಶ ಮತ್ತು ಆಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ,ಗಡಿ ತಾಲೂಕಿನಲ್ಲಿ ಗ್ರಾಮಿಣ ಭಾಗದ ಮಕ್ಕಳ ಜೊತೆಗೆ ಶಿಕ್ಷಣ ಸಚಿವರಾಗಿ ಕಳೆದಿದ್ದು ,ವಾಸ್ತವ್ಯವಲ್ಲ ,ಮಕ್ಕಳಲ್ಲಿನ ಭಯ ಹಾಗೂ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾನ್ಯನಾಗಿ ಮಕ್ಕಳ ಜೊತೆ ಸಂವಾದ ನಡೆಸಲಾಗುತ್ತಿದೆ ಎಂದರು. ಈ ವೇಳೆ ಗ್ರಾಮಸ್ಥರೊಂದಿಗೆ ತೆರಳಿದಾಗ ಗ್ರಾ.ಪಂ. ಪಿ.ಡಿ.ಓ. ನವೀನ್ ಪಂಚಾಯಿತಿಗೆ ವಾರಕ್ಕೊಮ್ಮೆಯಾದರೂ ಬರುವುದಿಲ್ಲ,ಎಂದು ದು ದೂರಿದಾಗ ಸ್ಥಳಕ್ಕೆ ಪಿ.ಡಿ.ಓ.ನವೀನ್ ರನ್ನು ಕರೆಯಿಸಿ ಬುದ್ದಿವಾದ ಹೇಳಿದರು.ಆಂಧ್ರದ ಗಡಿಭಾಗದಲ್ಲಿ ಇರುವ ಗ್ರಾಮಗಳಾದ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದನಂತರ
ರಾಯಚೆರ್ಲು,ವೆಮಕಟಮ್ಮನಹಳ್ಳಿ,ವಳ್ಳೂರು,ಕ್ಯಾತಗಾನಚೆರ್ಲು,ತಿರುವಣಿ ಶಾಲೆಗಳ ಮಕ್ಕಳಿಂದ ಸಂವಾದ ನಡೆಸಿ ಅಲ್ಲಿ ಇರುವ ಮೂಲಭೂತ ಸೌಕರ್ಯಗಳು ಕಲ್ಪಿಸುವುದಾಗಿ ತಿಳಿಸಿ, ವಿದ್ಯಾರ್ಥಿಗಳ ಅನಿಸಿಕೆಯಂತೆ ಶಿಕ್ಷಕರ ಕೊರತೆಯನ್ನು ನೀಗಿಸಲು ಅಶ್ವಾಸನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಲಂಡನ್ ಖ್ಯಾತ ವೈದ್ಯರಾದ ವಳ್ಳೂರಿನ ಡಾ. ಪ್ರಭಾಕರರೆಡ್ಡಿಯವರನ್ನು ಸನ್ಮಾನಿಸಲಾಯಿತು, ರಾಜ್ಯ ರೈತಮೊರ್ಚಾ ಉಪಾದ್ಯಕ್ಷ ಎಸ್. ಶಿವಪ್ರಸಾದ್, ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್, ತಹಶೀಲ್ದಾರ್ ವರದರಾಜು,ಬಿ.ಇ.ಒ ಸಿದ್ದಗಂಗಯ್ಯ ,ತಾ.ಪಂ. ಸದಸ್ಯ ನರಸಿಂಹ, ಡಿ.ಡಿ.ಪಿ.ಐ. ರವಿಶಂಕರರೆಡ್ಡಿ, ಬಿ.ಇ.ಓ. ಸಿದ್ದಗಂಗಯ್ಯ, ತಾ. ಬಿ.ಜೆ.ಪಿ. ಅಧ್ಯಕ್ಷ ಜಿ.ಟಿ. ಗಿರೀಶ್, ಜಿ.ಪಂ. ಇಂಜನೀಯರ್ ರಾಮಚಂದ್ರದೇಶಪಾಂಡೆ, ಕಿರುನೀರು ಸರಬರಾಜು ಮತ್ತು ನೈರ್ಮಲ್ಯ ಇಂಜನೀಯರ್ ಬಿ.ಪಿ. ನಾಗರಾಜ್, ಉಪನ್ಯಾಸಕ ಮೂಡಲಗಿರಿ ಯಪ್ಪ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಬಿ.ಪಿ. ನಾಗರಾಜಯ್ಯ, ಸಿ.ಡಿ.ಪಿ.ಓ.ಶಿವಕುಮಾರಯ್ಯ, ಸಿ.ಪಿ.ಐ. ವೆಂಕಟೇಶ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
