ಸೋಮಶೇಖರ ಕೊತಂಬರಿಗೆ ಜಯ

ಹಾನಗಲ್ಲ:

      ತುರುಸಿನ ಪೈಪೋಟಿ ಏರ್ಪಟ್ಟಿದ್ದ ಹಾನಗಲ್ಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋಮಶೇಖರ ಕೊತಂಬರಿ ವಿಜಯದ ನಗೆ ಬೀರಿದ್ದಾರೆ.

      ಶನಿವಾರ ಇಲ್ಲಿನ ವಕೀಲರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಸೋಮೇಖರ ಕೊತಂಬರಿ 67 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು. ಪ್ರತಿಸ್ಪರ್ಧಿ ಜೆ.ಬಿ.ಕೊಂಡೋಜಿ 59 ಮತಗಳನ್ನು ಪಡೆದರು. ಇನ್ನೊಬ್ಬ ಸ್ಪರ್ಧಿ ಎಸ್.ಎಲ್.ಬಣಕಾರ 5 ಮತಗಳನ್ನು ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ರಮೇಶ ತಳವಾರ 89 ಮತಗಳನ್ನು ಪಡೆದು ವಿಜೇತರಾದರು. ಪ್ರತಿಸ್ಪರ್ಧಿ ಶ್ರೀಕಾಂತ ಹಾದಿಮನಿ 42 ಮತ ಪಡೆದು ಪರಾಭವಗೊಂಡರು,

     ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಟಿ.ಕಾಮನಹಳ್ಳಿ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಸಹ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ನೂತನ ಆಡಳಿತ ಮಂಡಳಿ ಇನ್ನುಳಿದ ಸ್ಥಾನಗಳನ್ನು ಒಮ್ಮತದಿಂದ ನೇಮಕ ಮಾಡುವ ಸಂಭವವಿದೆ.

    ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಡೆದ ಚುನಾವಣೆಯಲ್ಲಿ ನ್ಯಾಯವಾದಿ ಸಂಘದ 141 ಸದಸ್ಯ ಮತದಾರರ ಪೈಕಿ 131 ಸದಸ್ಯರು ಮತದಾನ ಮಾಡಿದರು. ಸಂಜೆ ಫಲಿತಾಂಶ ಪ್ರಕಟಿಸಲಾಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸೂರ್ಯನಾರಾಯಣ ಕಾರ್ಯ ನಿರ್ವಹಿಸಿದರು. ಸಿಬ್ಬಂದಿ ಸಾಥ್ ನೀಡಿದ್ದರು.

     ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಸೋಮಶೇಖರ ಕೊತಂಬರಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಈ ಬಾರಿ ವಕೀಲರ ಸಂಘಕ್ಕೆ ಚುನಾವಣೆ ಮೂಲಕ ಪದಾಧಿಕಾರಿಗಳ ನೇಮಕ ನಡೆದಿದೆ. ಈ ಗೆಲುವು ಪ್ರಜಾಪ್ರಭುತ್ವ ಮನಸ್ಥಿತಿಯ ವಕೀಲರ ಗೆಲುವು” ಎಂದರು.

     ಹಿರಿಯ ವಕೀಲರಾದ ಕೆ.ಬಿ.ದೊಡ್ಡಮನಿ, ಎಫ್.ಬಿ.ಮಡಿವಾಳರ, ಜಿ.ವಿ.ಕಂಬಾಳಿಮಠ, ರವಿಬಾಬು ಪೂಜಾರ, ಎಂ.ಎಂ.ಮುಲ್ಲಾ, ರಾಜು ಗೌಳಿ, ಎ.ವಿ.ವಿಭೂತಿ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link