ಬೆಂಗಳೂರು
ಮಗ-ಸೊಸೆಯ ಕಿರುಕುಳವೇ ಗಿರಿನಗರದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.
ಕಳೆದ ಸೆ.23ರಂದು ಗಿರಿನಗರ ನಿವಾಸಿ ಕೃಷ್ಣಮೂರ್ತಿ(70) ಹಾಗೂ ಸ್ವರ್ಣಮೂರ್ತಿ(68)ದಂಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದ ಸೊಸೆ ಸ್ನೇಹ ಸೂರ್ಯನಾರಾಯಣ ಹಾಗೂ ಪುತ್ರ ಮಂಜುನಾಥ್ ಶ್ರೇಯಸ್‍ನನ್ನು ಬಂಧಿಸಲಾಗಿದೆ.
ದಂಪತಿಯ ಆತ್ಮಹತ್ಯೆ ಪ್ರಕರಣದ ಸಂಬಂಧ ತನಿಖೆ ಕೈಗೊಂಡ ಗಿರಿನಗರ ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡ ಮನೆಯ ಗೋಡೆಯ ಮೇಲೆ ಕೃಷ್ಣಮೂರ್ತಿ ಅವರು ಕೊನೆ ಸಂದೇಶ ಬರೆದಿದ್ದರು, ಇತ್ತ ಸ್ವರ್ಣಮೂರ್ತಿ ಅವರ ಹಣೆ ಮೇಲೆ ಸಂದೇಶವೊಂದು ಬರೆದಿತ್ತು.ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.
ಆತ್ಮಹತ್ಯೆಗೆ ಮುನ್ನ ಗೋಡೆಯ ಮೇಲೆ ಕೃಷ್ಣಮೂರ್ತಿ ಅವರು “ನರಕದಿಂದ ಸ್ವರ್ಗದ ಕಡೆಗೆ ಪಯಣ, ನಮ್ಮಿಬ್ಬರ ಸಾವಿಗೆ ಸೊಸೆ ಸ್ನೇಹ ಸೂರ್ಯನಾರಾಯಣ, ಮಗ ಮಂಜುನಾಥ್ ಶ್ರೇಯಸ್ ಚಿತ್ರಹಿಂಸೆಯೇ ಕಾರಣ. ಅವರು ನಮ್ಮಿಬ್ಬರಿಗೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ” ಎಂದು ಬರೆದು ಕೊನೆಯಲ್ಲಿ ಸಹಿ ಮಾಡಿದ್ದರು. ಇತ್ತ ತಾಯಿ ಹಣೆ ಮೇಲೆ “ನನ್ನನ್ನು ಕ್ಷಮಿಸು” ಎಂದು ಬರೆದುಕೊಂಡು, ಕೊನೆಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು.ಪ್ರಕರಣದ ಸಂಬಂಧ ಸೊಸೆ ಸ್ನೇಹ ಹಾಗೂ ಮಗ ಮಂಜುನಾಥ್‍ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








