ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬ

 ಹಾವೇರಿ :

        ಎಐಸಿಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬವನ್ನು ಯುವ ಕಾಂಗ್ರೇಸ್ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿನ ವೃದ್ದರಿಗೆ ಮಧ್ಯಾಹ್ನ ಹಾಗೂ ಸಂಜೆಯ ಊಟದ ವ್ಯವಸ್ಥೆ ಮಾಡುವ ಮೂಲಕ ಆಚರಿಸಲಾಯಿತು.

      ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿಗಳಾದ ನಾಸೀರ್ ಖಾನ ಪಠಾಣ ಮಾತನಾಡಿ ದೇಶದಲ್ಲಿ ಬಡವರ,ದಿನ ದಲಿತರ ಹಾಗೂ ಹಿಂದುಳಿದ ವರ್ಗದ ಜನರ ಪರವಾಗಿ ಶ್ರೀಮತಿ ಸೋನಿಯಾ ಗಾಂಧಿಯವರು ಅಪಾರ ಶ್ರಮವಹಿಸಿದ್ದಾರೆ. ಅವರ ಅಭಿವೃದ್ಧಗಾಗಿ ವಿನೂತನ ಕಾರ್ಯಕ್ರಮಗಳನ್ನು ಯುಪಿಎ ಸರ್ಕಾರ ಇರುವಾಗ ಜಾರಿಗೆ ತಂದಿದ್ದಾರೆ.

     ದೇಶದ ಎಲ್ಲ ವರ್ಗದ ಜನರ ಪರವಾಗಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಹುಟ್ಟು ಹಬ್ಬವನ್ನು ಹಿರಿಯರ ಮನೆಯಾಗಿರುವ ವೃದ್ದಾಶ್ರಮದಲ್ಲಿ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಶ್ರೀಮತಿ ಸೋನಿಯಾ ಜೀಯವರಿಗೆ ಇನ್ನೂ ಹೆಚ್ಚು ಆರೋಗ್ಯ ಆಯುಷ್ಯ ದೇವರು ಒದಗಿಸಲಿ ಎಂದು ಪ್ರಾರ್ಥಿಸಿದರು.

      ಈ ಸಂದರ್ಭದಲ್ಲಿ ಯುವ ಕಾಂಗ್ರೇಸ್ ಉಪಾಧ್ಯಕ್ಷರಾದ ನಾಗರಾಜ ಬಡಮ್ಮನವರ.ಮುಖಂಡರಾದ ಅಬ್ದುಲ್ ರೇಹಮಾನ ಲಖ್ನೂ.ಸಂತೋಷ ಘೋರಪಡೆ.ಭೀರಪ್ಪ ಲಮಾಣಿ.ಸಂಜಯಗಾಂಧಿ ಸಂಜೀವಣ್ಣನವರ.ಸತೀಶ ಕಲ್ಮನಿ ಅನೇಕರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link