ಶೀಘ್ರದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ: ಕೇಜ್ರಿವಾಲ್

ನವದೆಹಲಿ:

      ನವದೆಹಲಿಯಲ್ಲಿ ಒಂದೆಡೆ ಕರೊನಾ ಆರ್ಭಟ ಮುಂದುವರೆದಿದ್ದರೆ..ಮತ್ತೊಂದೆಡೆ ನಿಯಂತ್ರಣ, ಚಿಕಿತ್ಸೆಗಳಿಗಾಗಿ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕರೊನಾ ಮಣಿಸಲು ಹೋರಾಡುತ್ತಿದೆ. ತ್ವರಿತಗತಿಯಲ್ಲಿ ಕೊವಿಡ್ ಟೆಸ್ಟ್, ಬೆಡ್ ಗಳ ಸಂಖ್ಯೆ ಏರಿಕೆ, ಚಿಕಿತ್ಸಾ ವಿಧಾನಗಳಲ್ಲಿ ಹಲವು ಸುಧಾರಣೆ ಮಾಡಿಕೊಂಡಿರುವ ದೆಹಲಿ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

    ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ನ್ನು ಶೀಘ್ರವೇ ನಿರ್ಮಾಣ ಮಾಡಲಾಗುವುದು. ಕೊವಿಡ್- 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ತುಂಬ ಪರಿಣಾಮಕಾರಿಯಾಗಿದ್ದು, ಈಗಾಗಲೇ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಪ್ರಾರಂಭದಲ್ಲಿ ಒಂದಷ್ಟು ಪ್ರಯೋಗಾತ್ಮಕವಾಗಿ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಅವರಲ್ಲಿ ಸಕಾರಾತ್ಮಕ ಫಲಿತಾಂಶವೂ ಕಂಡಿತ್ತು. ಅದಾದ ಬಳಿಕ ಸುಮಾರು 200 ಕರೊನಾ ರೋಗಿಗಳಿಗೆ ಇದೇ ಚಿಕಿತ್ಸೆ ನಿಡಲಾಗಿತ್ತು. ನಂತರ ಅಗತ್ಯ ಬಿದ್ದರೆ ಪ್ಲಾಸ್ಮಾ ಥೆರಪಿ ನಡೆಸಿದ ಎಂದು ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ಅನುಮತಿಯನ್ನೂ ನೀಡಿತ್ತು. ಈ ಬಗ್ಗೆ ಅರವಿಂದ್ ಕೇಜ್ರಿವಾಲ್​ ಅವರೇ ಈ ಹಿಂದೆ ಹೇಳಿಕೊಂಡಿದ್ದರು. 

    ಇದೀಗ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ಪ್ಲಾಸ್ಮಾ ಬ್ಯಾಂಕ್​ ರಚನೆಯಾಗಲಿದೆ. ಈ ಪ್ಲಾಸ್ಮಾ ಬ್ಯಾಂಕ್​ ದೆಹಲಿಯ ಲಿವರ್​ ಆ್ಯಂಡ್​ ಬಿಲಿಯರಿ ಸೈನ್ಸ್​ ಇನ್ಸ್ಟಿಟ್ಯೂಶನ್​ನಲ್ಲಿ ನಿರ್ಮಾಣವಾಗಲಿದೆ. ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಶಿಫಾರಿಸ್ಸಿನ ಆಧಾರದ ಮೇಲೆ ಪ್ಲಾಸ್ಮಾವನ್ನು ನೀಡಲಾಗುವುದು ಎಂದು ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link