ಶೀಘ್ರವೇ ನಿವೇಶನ ಹಂಚಿಕೆ : ಎ.ಜಾಕೀರ್ ಹುಸೇನ್

ಚಿತ್ರದುರ್ಗ;

     ನಗರದ ದಾವಣಗೆರೆ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ-ರ ಬಳಿ ಜಿಲ್ಲಾ ಬಡಗಿ ಕೆಲಸಗಾರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಜಮೀನು ಖರೀದಿಸಿ ಬಡಗಿ ಕೆಲಸಗಾರರಿಗೆ ವಸತಿ ಸೌಲಬ್ಯ ಕಲ್ಪಿಸಿಕೊಡಲು ನಿರ್ಮಿಸಲಾಗಿರುವ ನೂತನ ಬಡಾವಣೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

     ಸುಮಾರು 24 ಎಕರೆ ಜಮೀನಿನಲ್ಲಿ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆಗೆಸಿ ಸ್ವಚ್ಚತೆ ಕೈಗೊಳ್ಳಲಾಯಿತು. ಸಂಘದ ಅಧ್ಯಕ್ಷ ಎ.ಜಾಕೀರ್ ಹುಸೇನ್ ಹಾಗೂ ಸಂಘದ ಪದಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

      ಈ ಸಂದರ್ಭದಲ್ಲಿ ಮಾತನಾಡಿದ ಎ.ಜಾಕೀರ್ ಹುಸೇನ್, ಜಿಲ್ಲಾ ಬಡಗಿ ಕೆಲಸಗಾರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಬಡವರಿಗೆ ಅದರಲ್ಲೂ ಈ ವೃತ್ತಿಯನ್ನು ಅವಲಂಬಿಸಿರುವ ಕಾರ್ಮಿಕರಿಗೆ ವಸತಿ ಸೌಲಬ್ಯಕ್ಕಾಗಿ 24 ಎಕರೆ ಜಮೀನುಗಳನ್ನು ಖರೀದಿ ಮಾಡಲಾಗಿದೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ನಿವೇಶನ ಹಂಚಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅತೀ ಶೀಘ್ರವೇ ಪಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು

     ಒಟ್ಟು 1150 ಮಂದಿಗೆ ಇದರ ಸೌಲಬ್ಯ ಸಿಗಲಿದೆ. ಈ ಪೈಕಿ 418 ಮಂದಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಉಳಿದ ಪಲಾನುಭವಿಗಳಿಗೆ ನಿವೇನ ನೀಡಲಾಗುವುದು. ನಿವೇಶನದ ಪಲಾನುಭವಿಗಳು ಅಗತ್ಯವಾದ ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ಎಲ್ಲಾ ದಾಖಲಾತಿಗಳು ಬಂದ ಬಳಿಕ ಪಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಜಾಕೀರ್ ಹುಸೇನ್ ತಿಳಿಸಿದರು ಸಂಘದ ಉಪಾಧ್ಯಕ್ಷ ಎ.ವಿ.ಜಗದೀಶ್‍ಚಾರ್, ಕಾರ್ಯದರ್ಶಿ ಆರೋಢಾಚಾರ್, ಖಜಾಂಚಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎಂ.ಡಿ.ಅಸ್ಲಾಂ, ಸಿದ್ದಲಿಂಗಪ್ಪ, ದಸ್ತಗೀರ್, ಇಮ್ರಾನ್, ಫಲ್ವಾನ್ ಆಫೀಜ್, ಸಣ್ಣಚಾರ್ ಇನ್ನಿತರರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap