ಸೀಲ್ ಡೌನ್ ಪ್ರದೇಶಕ್ಕೆ ಎಸ್ ಪಿ ಭೇಟಿ..!

ಎಂ ಎನ್ ಕೋಟೆ :

     ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಗಂಗಯ್ಯನಪಾಳ್ಯ ಸಿಲ್ ಡೌನ್ ಆದ ಪ್ರದೇಶಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಧಿಕಾರಿ ವಂಶಿಕೃಷ್ಠ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

     ನಂತರ ಮಾತನಾಡಿದ ಅವರು ಸಿಲ್ ಡೌನ್ ಆದ ಪ್ರದೇಶಗಳಲ್ಲಿ ಸೂಕ್ತ ಕ್ರಮಗಳನ್ನು ವಹಿಸಬೇಕು. ಕರೋನಾ ಬಗ್ಗೆ ಭಯ ಭೇಡ ಜಾಗೃತಿ ಇರಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು.ಸಿಲ್ ಡೌನ್ ಆದ ಗ್ರಾಮಗಳಲ್ಲಿ ಯಾರು ಅನವಶ್ಯಕವಾಗಿ ಓಡಾಡಬಾರದು ಎಲ್ಲರು ಸಹ ಮನೆಯಲ್ಲಿ ಇರಬೇಕು.

      ಸಿಲ್ ಡೌನ್ ಆದ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕ್ ಆಡಳಿತ ಸಕಲ ಸಿದ್ದತೆಗಳನ್ನು ಮಾಡಲು ಸಿದ್ದವಿದೆ ಯಾರು ಕೂಡ ಭಯ ಭೇಡ ಜಾಗೃತಿ ಇರಲಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ನೀವು ಕೂಡ ಸಾಮಾಜಿಕ ಅಂತರ ಇರಬೇಕು ಯಾವುದೇ ಸಮಸ್ಯೆ ಇದ್ದಾರೆ ಜಿಲ್ಲಾ ಆಡಳಿತ ಹಾಗೂ ತಾಲ್ಲೂಕ್ ಆಡಳಿತದ ಗಮನಕ್ಕೆ ತನ್ನಿ ಕರೋನಾ ಸೊಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಾವೆಲ್ಲರು ಸಹ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು. ಯಾವುದೇ ತೊಂದರೆ ಆಗದಂತೆ ನೋಡಿಕೊಳುವ ಜವಬ್ದಾರಿ ಪೋಲೀಸ್ ಅಧಿಕಾರಿಗಳು ಹಾಗು ಗ್ರಾಮ ಪಂಚಾಯಿತಿ ಅಧಿಕಾರಿಗಳಿದು ಎಂದರು.ಡಿವೈಎಸ್ ಪಿ ಕುಮಾರಪ್ಪ , ಸಿಪಿಐ ರಾಮಕೃಷ್ಠಯ್ಯ , ಚೇಳೂರು ಪಿಎಸ್ ಐ ವಿಜಯ್ ಕುಮಾರ್ ಪಿಡಿಓ ರಾಜೇಂದ್ರ ಪ್ರಸಾದ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link