ಸಿದ್ದರಾಮಯ್ಯ ಅವರ ಫೈಲನ್ನು ನಿರ್ಲಕ್ಷಿಸಿದ ಸ್ಪೀಕರ್ : ಮಾಜಿ ಸ್ಪೀಕರ್

ಬೆಂಗಳೂರು

    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇದುವರೆಗೂ ಸರ್ಕಾರದಿಂದ ನೀಡಬೇಕಾಗಿದ್ದ ವಾಹನ ವ್ಯವಸ್ಥೆ ಕಲ್ಪಿಸಿಲ್ಲ. ಸ್ಪೀಕರ್ ಅವರ ಮುಂದೆ ಸಿದ್ದರಾಮಯ್ಯ ಅವರ ಫೈಲ್ ಇದ್ದರೂ ಅದನ್ನು ಏಕೆ ಗಮನಿಸುತ್ತಿಲ್ಲ ಎಂದು ಮಾಜಿ ಸ್ಪೀಕರ್ ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

   ನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಎಂದರೆ ಶ್ಯಾಡೊ ಸಿಎಂ ಇದ್ದಂತೆ. ಈ ಸರ್ಕಾರದಲ್ಲಿ ಹಣವಿಲ್ಲ ದಿವಾಳಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ ಎಂದು ಟೀಕಿಸಿದರು .ಸಂವಿಧಾನದ ಅಂಗವಾಗಿರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಜೊತೆಗೆ ಪತ್ರಿಕಾರಂಗ ಜನರಿಂದ ಮಹತ್ವ ಪಡೆದಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಿಂತ ಹೆಚ್ವು ಮಾಧ್ಯಮ ಮುಖ್ಯ. ಮಾಧ್ಯಮದ ಬೆಳವಣಿಗೆ ಕಂಡಿದೆ ಇದಕ್ಕೆ ನಿರ್ಬಂಧಗಳನ್ನು ಅಡೆತಡೆಗಳನ್ನು ಹಾಕುವುದು ಸರಿ ಅಲ್ಲ. ತಾವು ಸ್ಪೀಕರ್ ಇದ್ದಾಗಲೂ ಎಡಿಟೆಟ್ ವೀಡಿಯೋ ಮಾತ್ರ ಕೊಡೋಣ ಎಂದಿದ್ದರಾದರೂ ಅದಕ್ಕೆ ತಾವು ಒಪ್ಪಲಿಲ್ಲ, ಜನರಿಗೆ ನಮ್ಮ ಸುದ್ದಿಗಳು ತಲುಪಬೇಕು ಎನ್ನುವುದು ಮುಖ್ಯ ಎಂದು ಹೇಳಿದರು.

   ತಾವು ಎಷ್ಟು ದಿನ ಸ್ಪೀಕರ್ ಆಗಿದ್ದನೋ ಅಷ್ಟು ದಿನ ಬಿಜೆಪಿ ನಾಯಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೆ. ಕಾಗೇರಿ ಅವರು ಏಕೆ ಈ ನಿರ್ಧಾರ ಮಾಡಿದ್ದರೋ ಅಥವಾ ಯಾರ ಒತ್ತಡಕ್ಕೆ ಮಣಿದರೋ ಗೊತ್ತಿಲ್ಲ. ಸದನದಲ್ಲಿ ನಡೆಯುವುದು ಎಡಿಟ್ ಆಗಿ ಸಿಗಬಾರದು ಏನು ನಡೆಯುತ್ತದೆಯೋ ಅದು ಜನರಿಗೆ ತಲುಪಬೇಕು. ಶಾಸಕರ ಭವನಕ್ಕೂ ಕೂಡ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಇದು ಸರಿಯಾದ ನಿರ್ಧಾರ ಅಲ್ಲ. ಆದಷ್ಟು ಬೇಗ ಇದರ ಬಗ್ಗೆ ಗಮನ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.

   ಸ್ಪೀಕರ್ ಅವರ ನಡೆ ಸಂಶಯವಾಗಿದೆ. ಸ್ಪೀಕರ್ ಅವರಿಗೆ ಅವರದೇ ಪಕ್ಷದ ಒತ್ತಡ ಇರಬಹುದು. ಸ್ಪೀಕರ್ ಅವರು ಪ್ರಿಸೈಡಿಂಗ್ ಆಫೀಸ್ ಕಡಿಮೆ ಮಾತಾಡಬೇಕು. ಇವರು ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಯಾವ ಪಕ್ಷದಿಂದ ಹಾರಿಸಿ ಬಂದಿದ್ದಾರೋ ಆ ಪಕ್ಷದ ಒತ್ತಡಕ್ಕೆ ಒಳಗಾಗಿರಬೇಕು ಎಂದರು.

    ಸ್ವಾಮೀಜಿಗಳು ಇತ್ತೀಚೆಗೆ ಧರ್ಮ ಪ್ರಚಾರವನ್ನು ಬಿಟ್ಟು ರಾಜಕೀಯ ಮಾಡಲು ಮುಂದಾಗಿದ್ದಾರೆ. ನಮ್ಮ ಸಮುದಾಯದ ನಾಯಕರಿಗೆ ಸ್ಥಾನಗಳನ್ನು ಕೊಡಬೇಕು ಎಂದು ಬ್ಲಾಕ್‍ಮೇಲ್ ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ, ಸ್ವಾಮೀಜಿಗಳು ಧರ್ಮ ಪ್ರಚಾರ ಮಾತ್ರ ಮಾಡಬೇಕು ಅದು ಬಿಟ್ಟು ರಾಜಕೀಯ ಮಾಡಬಾರದು ಎಂದರು.

    ಮಾರ್ಚ್ ಮೊದಲ ವಾರದಲ್ಲಿ ಅಧ್ಯಕ್ಷ ನೇಮಕ ಆಗುತ್ತದೆ. ಆದಷ್ಟು ಬೇಗ ಮಾಡಬೇಕು ಇಲ್ಲದಿದ್ದರೆ ಪಕ್ಷ ಸೊರಗಿಹೋಗುತ್ತದೆ. ನೇಮಕಾತಿ ತಡ ಮಾಡಿದಷ್ಟು ಹಾನಿಕಾರಕ. ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.

    ಹೈಕಮಾಂಡ್ ನಲ್ಲೂ ಸಹ ನೇಮಕಾತಿ ಸ್ವಲ್ಪ ಗೊಂದಲ ಇದೆ.ಅಲ್ಲಿ ಎಐಸಿಸಿ ಅಧ್ಯಕ್ಷ ಯಾರು ಆಗಬೇಕು ಎನ್ನುವ ಬಗ್ಗೆ ಸ್ವಲ್ಪ ಗೊಂದಲ ಇದೆ. ಒದು ಕಡೆ ರಾಹುಲ್ ಗಾಂಧಿ ಒಪ್ಪುತ್ತಿಲ್ಲ , ಪಾಪ ಮೇಡಂ ಅವರಿಗೆ ಆರೋಗ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಿದೆ ಎಂದು ಕೋಳಿವಾಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link