ಶಿಗ್ಗಾವಿಯಲ್ಲಿ ನೋಡು ಬಾ ಅಯ್ಯಪ್ಪನ ವಿಶೇಷ ಸನ್ನಿದಿ

ಶಿಗ್ಗಾವಿ :

         ಭಾರತ ದೇಶವು ಪುಣ್ಯಭೂಮಿ ಎನಿಸಿದ ಸಾಧನಾ ಭೂಮಿ ಅದರಲ್ಲೂ ಉತ್ತರ ಕರ್ನಾಟಕ ವಿಭಿನ್ನ ಆಚರಣೆಗಳು, ಪವಾಡಗಳು, ನಂಬಿಕೆಗಳು, ಸಂಪ್ರದಾಯಗಳಿಂದ ಕೂಡಿದ ಸಾಧಕರ ತವರೂರು. ಅದರಲ್ಲಿ ಹಾವೇರಿ ಜಿಲ್ಲೆಯು ಅನೇಕ ಸಾಧು ಸಂತರು, ಮಹಾನ್ ಪುರುಷರು ತಮ್ಮದೇ ಸರಳ ಜೀವನ ಶೈಲಿಯ ಮುಖಾಂತರ ಮಹಾನ ಸಾಧನೆಗಳಿಂದ ಜನರ ಮನಸ್ಸಲ್ಲಿ ನೆಲೆಯೂರಿದವರಲ್ಲಿ ಶಿಶುನಾಳ ಶರೀಫರು, ಬಾಡದ ಕನಕದಾಸರು, ಸರ್ವಜ್ಞರು, ಪಾಂಡವರು ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. ಅಂತಹ ಪುಣ್ಯ ಪುರುಷರ ಸಾಲಿನಲ್ಲಿ ಶಿಗ್ಗಾವಿ ಹೌಸಿಂಗ್ ಬೋರ್ಡನ್ ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವು ಒಂದು.

          ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಅದರಲ್ಲಿ ಭಕ್ತರ ದುಖ: ದುಮ್ಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಕೇವಲ ಭಗವಂತನ ಪೂಜೆ ಪುನಸ್ಕಾರಕ್ಕಷ್ಟೇ ದೇವಸ್ಥಾನಗಳನ್ನು ಸೀಮಿತಗೊಳಿಸದೇ ಅಯ್ಯಪ್ಪಸ್ವಾಮಿ ಮಾಲಾದಾರಿಗಳ ಮಾನವೀಯ ಮೌಲ್ಯಗಳನ್ನು ಹಾಗೂ ನೈತಿಕ ವಿಚಾರಗಳನ್ನು ಭಕ್ತರಲ್ಲಿ ತುಂಬುವ ದೃಷ್ಟಿಯಿಂದ ಶಬರಿಮಲೆ ಅಯ್ಯಪ್ಪಸ್ವಾಮಿಯ ಕಾರ್ಯ ಕೈಂಕರ್ಯಗಳು ಶಿಗ್ಗಾವಿಯಲ್ಲಿ ಪ್ರಾರಂಭವಾದವು.

          ಅಯ್ಯಪ್ಪಸ್ವಾಮೀ ದೇವಸ್ಥಾನ ಹಿನ್ನಲೆ : ಇದರ ಹಿನ್ನಲೆಯನ್ನು ನೋಡುವದಾದರೆ 1989-90 ರಲ್ಲಿ 5 ರಿಂದ 6 ಮಾಲಾಧಾರಿಗಳಿಂದ ತಗಡಿನ ಶೆಡ್ನಲ್ಲಿ ಪ್ರಾರಂಭವಾದ ಅಯ್ಯಪ್ಪಸ್ವಾಮಿ ದೇವಸ್ಥಾನವು ಇಂದು 160 ರಿಂದ 170 ಮಾಲಾಧಾರಿಗಳಿಂದ ಪ್ರತಿವರ್ಷ ವಿಶೇಷವಾಗಿ ನವ್ಹಂಬರ 16 ರಿಂದ ಜನೇವರಿ 19 ರವರೆಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮತ್ತು ಮಹಾಪೂಜೆಗಳನ್ನು ನೆರವೇರಿಸಿ ಕೊನೆಯ ದಿನ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರದವರೆಗೆ ಅನ್ನ ಸಂತರ್ಪಣೆಯನ್ನು ಮಾಡಿ ಜನರ ಪ್ರೀತಿ ಪಾತ್ರಕ್ಕೆ ಹಾಗೂ ದೇವರ ಕೃಪೆಗೆ ಪಾತ್ರರಾಗಿದ್ದು ಅಯ್ಯಪ್ಪಸ್ವಾಮಿ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ.

          ಅಯ್ಯಪ್ಪಸ್ವಾಮಿ ದೇವಸ್ಥಾನದ ಈ ಎಲ್ಲ ದೈನಂದಿನ ಕೈಕಂರ್ಯಗಳನ್ನು ಮನಗಂಡು ಮಾಲಾಧಾರಿಗಳು 1994-95 ರಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಎಂದು ರಚಿಸಿ ಅದರಲ್ಲಿ ಹನ್ನೊಂದು ಮಾಲಾಧಾರಿ ಸದಸ್ಯರನ್ನೊಳಗೊಂಡು ನೋಂದಣಿ ಮಾಡಲಾಗಿ ಮತ್ತೆ ಅದರಲ್ಲಿ ಸುಮಾರು ಆರವತ್ತರಿಂದ ಎಂಬತ್ತು ಮಾಲಾಧಾರಿಗಳು ಸಾಮಾನ್ಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link